ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿ
((ಪದವಿ ಪ್ರಧಾನ ಸಮಾರಂಭದಲ್ಲಿಸಲಹೆ))
ವಿಕ ಸುದ್ದಿಲೋಕ ನೆಲಮಂಗಲ
ಪದವಿ ವಿದ್ಯಾರ್ಥಿಗಳು ಐಎಎಸ್ ,ಐಪಿಎಸ್ , ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟರ್ ಡಾ.ಚಂದ್ರಕಾಂತ್ ಎಸ್ ಕರಿಗರ್ ಸಲಹೆ ನೀಡಿದರು.
ನಗರದ ಬಸವಣ್ಣ ದೇವರ ಮಠದ ಸಭಾಂಗಣದಲ್ಲಿಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿಅವರು ಮಾತನಾಡಿದರು.
ಸಮಾಜದಲ್ಲಿಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಮಾದಕದ್ರವ್ಯಗಳು ಹಾಗೂ ಅಪರಾಧ ಪ್ರಕರಣಗಳಿಂದ ದೂರ ಮಾಡಬೇಕಾಗಿದೆ. ಇವುಗಳ ನಿಯಂತ್ರಣ ಮಾಡಲು ಪೋಷಕರು ಸಹಕರಿಸುವ ಜತೆಗೆ ಸಾಮಾಜಿಕ ಜಾಲತಾಣದ ಬಗ್ಗೆ ಹೆಚ್ಚು ಗಮನವಹಿಸಬೇಕು. ವಿದ್ಯಾರ್ಥಿಗಳಿಗೆ ಪದವಿಯ ಜತೆ ಕೌಶಲ ಬಹಳ ಮುಖ್ಯವಾಗಿದೆ ಎಂದರು.
ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಬಹಳಷ್ಟು ಅನುಕೂಲ ಮಾಡಿಕೊಡಲಾಗಿದೆ. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೇವಲ ಅಂಕಪಟ್ಟಿಗಳಿಗೆ ಸೀಮಿತವಾಗದೇ ಕೌಶಲ ಕಡೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿಪತ್ರಕರ್ತೆ ನಿರೂಪಮಾ ಕೆ.ಎಸ್ ., ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರುದ್ರಮಹೇಶ್ , ಕಾಲೇಜ ಅಧ್ಯಾಪಕರಾದ ವನಜಾಕ್ಷಿ, ಜಯಲತಾ, ತಾರಾ, ಸೌಮ್ಯ, ನವೀನ್ , ಸುಷ್ಮಾ, ಗೋವಿಂದರಾಜು, ಮೋಹನ್ ,ಭವ್ಯ, ಹೇಮಂತ್ , ತೇಜಸ್ವೀನಿ, ವಸಂತ್ ಕುಮಾರ್ , ನಾಗರತ್ನ, ಸುಮೀತ್ರ, ಪ್ರದೀಪ್ , ರೂಪಿಣಿ, ವೇದಾವತಿ, ಮಮತಾ, ಅಶ್ವಿನಿ, ಸುಚಿತ್ರಾ, ಮತ್ತಿತರರಿದ್ದರು.
5ನೆಲಪಿಹೆಚ್ 3: ನೆಲಮಂಗಲ ನಗರದ ಬಸವಣ್ಣ ದೇವರ ಮಠದಲ್ಲಿಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿಶ್ರೀ ಸಿದ್ದಲಿಂಗ ಸ್ವಾಮೀಜಿ, ಮತ್ತಿತರರು ಭಾಗವಹಿಸಿದ್ದರು.

