ಕಾಸರಗೋಡು ಜಿಲ್ಲೆಯಲ್ಲಿರೆಡ್ ಅಲರ್ಟ್

Contributed bygangadhar.korekkana@gmail.com|Vijaya Karnataka

ಕಾಸರಗೋಡು ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಇದರ ಪರಿಣಾಮವಾಗಿ ಜೂನ್ 6ರಂದು ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ವೃತ್ತಿಪರ ಕಾಲೇಜುಗಳು, ಶಾಲೆಗಳು, ಅಂಗನವಾಡಿಗಳು, ಬೋಧನಾ ಕೇಂದ್ರಗಳು, ಐಸಿಎಸ್‌ಇ, ಸಿಬಿಎಸ್‌ಇ ಸಂಸ್ಥೆಗಳು ರಜೆಯ ವ್ಯಾಪ್ತಿಗೆ ಒಳಪಡಲಿವೆ. ಕೇರಳದ ಐದು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪ್ರವಾಹದ ಎಚ್ಚರಿಕೆಯನ್ನೂ ನೀಡಲಾಗಿದೆ.

red alert in kasaragod district leads to closure due to heavy rain

ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ

ವಿಕ ಸುದ್ದಿಲೋಕ ಕಾಸರಗೋಡು

ಭಾರಿ ಮಳೆ ಮುನ್ಸೂಚನೆಯಂತೆ ಕಾಸರಗೋಡು ಜಿಲ್ಲೆಯಲ್ಲಿಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿಜೂ. 6ರಂದು ಶನಿವಾರ ಜಿಲ್ಲೆಯ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರಜೆ ಘೋಷಿಸಿದ್ದಾರೆ.

ವೃತ್ತಿಪರ ಕಾಲೇಜುಗಳು, ಶಾಲೆಗಳು, ಅಂಗನವಾಡಿಗಳು, ಬೋಧನಾ ಕೇಂದ್ರಗಳು, ಐಸಿಎಸ್ ಇ, ಸಿಬಿಎಸ್ ಇ ಸೇರಿದಂತೆ ಎಲ್ಲಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯಿಸುತ್ತದೆ. ಕೇಂದ್ರೀಯ ವಿದ್ಯಾಲಯಗಳು, ಮದರಸಾಗಳು ಸೇರಿದಂತೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳು, ವಸತಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ. ಪೂರ್ವ ನಿಗದಿತ ವಿಶ್ವವಿದ್ಯಾಲಯ, ಸಾರ್ವಜನಿಕ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿಯಾವುದೇ ಬದಲಾವಣೆ ಇರುವುದಿಲ್ಲ.

ಕೇರಳದ ಐದು ಜಿಲ್ಲೆಗಳಲ್ಲಿರೆಡ್ ಅಲರ್ಟ್ : ಕೇರಳದಲ್ಲಿಮಳೆಯ ಅಬ್ಬರ ಜೋರಾಗಿದೆ. ಇಂದು ರಾಜ್ಯದ ಉತ್ತರ ಜಿಲ್ಲೆಗಳಲ್ಲಿರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಋುತುವಿನ ಮೊದಲ ರೆಡ್ ಅಲರ್ಟ್ ಆಗಿದೆ. ಮಲಪುತ್ರ್ಪರಂ, ಕೋಝಿಕ್ಕೋಡ್ , ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿರೆಡ್ ಅಲರ್ಟ್ ಘೋಷಿಸಿರುವುದು. ಭಾನುವಾರ ಮೂರು ಜಿಲ್ಲೆಗಳಲ್ಲಿರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ದಿನ ಸುರಿದ ಮಳೆಯಿಂದಾಗಿ ರಾಜ್ಯದ ವಿವಿಧ ಕಡೆ ನಾಶನಷ್ಟಗಳು ಉಂಟಾಗಿದೆ.

ಪ್ರವಾಹದ ಎಚ್ಚರಿಕೆ: ಕರಮಾನಾಯತ್ (ವೆಳ್ಳೆತ್ರೖಕಡವ್ ಸ್ಟೇಷನ್ ) ಮತ್ತು ಮಣಿಮಲಯತ್ (ಕಲ್ಲುಪಾರ ಸ್ಟೇಷನ್ )ಗಳಲ್ಲಿಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇದು ಎಲ್ಲೋ ಅಲರ್ಟ್ ನೀಡಿರುವುದು. ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿಕೇಂದ್ರ ಜಲ ಆಯೋಗ ಈ ಎಚ್ಚರಿಕೆ ನೀಡಿದೆ. ಈ ನದಿಗಳನ್ನು ಪ್ರವೇಶಿಸದಂತೆ ಸೂಚಿಸಲಾಗಿದೆ. ಕರಾವಳಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.