ವಿಕ ಓದು ಅಭಿಯಾನಕ್ಕೆ ಚಾಲನೆ

Contributed byravimgl.kumar13@gmail.com|Vijaya Karnataka

ಚಿತ್ರದುರ್ಗದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ಕರ್ನಾಟಕ ವತಿಯಿಂದ 'ವಿಕ ಓದು' ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪತ್ರಿಕೆ, ಪುಸ್ತಕ ಓದುವಿಕೆಯಿಂದ ವ್ಯಕ್ತಿತ್ವ ವಿಕಸನ, ಜ್ಞಾನ ವೃದ್ಧಿ, ಮಾನಸಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಸಂಪಾದಕ ಸುದರ್ಶನ್‌ ಚನ್ನಂಗಿಹಳ್ಳಿ ಹೇಳಿದರು. ಮೊಬೈಲ್ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆ ಓದುವಂತೆ ಸರ್ಕಾರ ಸೂಚಿಸಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡಲಾಯಿತು.

vik reading campaign information dialogue with students

ಕಿಕ್ಕರ್ : ಹೈಸ್ಕೂಲ್ ವಿದ್ಯಾರ್ಥಿನಿಯರೊಂದಿಗೆ ವಿಕ ಸಂಪಾದಕರ ಸಂವಾದ * ಚಿತ್ರದುರ್ಗ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಕಾರ್ಯಕ್ರಮ

ವಿಕ ಓದು ಅಭಿಯಾನಕ್ಕೆ ಚಾಲನೆ

ವಿಕ ಸುದ್ದಿಲೋಕ ಚಿತ್ರದುರ್ಗ

ಪತ್ರಿಕೆ, ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ರೂಪಿಸುವ ಜತೆ ಮೌಲ್ಯಗಳು ಹೆಚ್ಚುತ್ತವೆ, ಮಾನಸಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅಭಿಪ್ರಾಯಪಟ್ಟರು.

ವಿಜಯ ಕರ್ನಾಟಕ ಪತ್ರಿಕೆಯಿಂದ ಚಿತ್ರದುರ್ಗ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿಶುಕ್ರವಾರ ಆಯೋಜಿಸಿದ್ದ ವಿಕ ಓದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಚ್ಚೆಚ್ಚು ಓದುವುದರಿಂದ ಜ್ಞಾನ ವೃದ್ಧಿಸಲಿದೆ, ನೆನಪಿನಲ್ಲೂಉಳಿಯಲಿದೆ. ಹಾಗಾಗಿ ಪ್ರತಿದಿನ ಪತ್ರಿಕೆ ಹಾಗೂ ಒಳ್ಳೆಯ ಪುಸ್ತಕಗಳನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘‘ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶ್ವಾಸಾರ್ಹ ಸುದ್ದಿಗಳು, ನಾನಾ ವಿಷಯಗಳಿಗೆ ಸಂಬಂಧಿಸಿದ ಅಂಕಣಗಳು ಕೂಡ ಇರುತ್ತವೆ. ಇತ್ತೀಚೆಗೆ ಎಐ ಕುರಿತ ಅಂಕಣ ಕೂಡ ಆರಂಭಿಸಿದ್ದೇವೆ. ಪತ್ರಿಕೆಗಳನ್ನು ಓದುವುದರಿಂದ ಎಲ್ಲಾರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿ ಆಗಲಿದೆ. ಮಕ್ಕಳಲ್ಲಿಪರೀಕ್ಷೆ ಭಯ ಹೋಗಲಾಡಿಸಲು ವಿಜಯೀಭವ ಕಾರ್ಯಕ್ರಮ ಕೂಡ ನಡೆಸುತ್ತಿದ್ದೇವೆ’’ ಎಂದು ಹೇಳಿದರು.

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯ ಎಂ. ಕರಿಯಪ್ಪ ಮಾತನಾಡಿ, ಮಾಧ್ಯಮ ಅತ್ಯಂತ ಕ್ರಿಯಾಶೀಲವಾಗಿದೆ. ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಸಂಪಾದನೆ ಹೆಚ್ಚುತ್ತದೆ ಎಂದು ತಿಳಿಸಿದರು.

ಪರಿಸರ ಮೌನಿಯಾಗಿರುತ್ತದೆ. ಸಹನೆ ಕಳೆದುಕೊಂಡಾಗ ಪ್ರವಾಹ, ಭೀಕರ ಬರಗಾಲ, ಸಾಂಕ್ರಾಮಿಕ ರೋಗಗಳ ಮೂಲಕ ನಾನಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಶತ ಶತಮಾನಗಳಿಂದ ನಮಗೆ ಕೊಡುಗೆಯಾಗಿ ಬಂದಿರುವ ಪರಿಸರವನ್ನು ಉಳಿಸಿ, ಬೆಳೆಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ವಿಜಯ ಕರ್ನಾಟಕ ದಾವಣಗೆರೆ ಮತ್ತು ಚಿತ್ರದುರ್ಗ ಆವೃತ್ತಿ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ವಿಜಯ ಕರ್ನಾಟಕ ಚಿತ್ರದುರ್ಗ ಜಿಲ್ಲಾಹಿರಿಯ ವರದಿಗಾರ ಎಂ.ಎನ್ .ಅಹೋಬಳಪತಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರು ವಿಜಯ ಕರ್ನಾಟಕ ಶುಕ್ರವಾರದ ಸಂಚಿಕೆಯಲ್ಲಿಪ್ರಕಟವಾದ ಪ್ರಮುಖ ಸುದ್ದಿಗಳನ್ನು ಓದಿದರು.

ಇದೇ ಸಂದರ್ಭದಲ್ಲಿವಿಜಯ ಕರ್ನಾಟಕ ಪ್ರಧಾನ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ಸರಕಾರದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ವಿಶ್ವ ಪರಿಸರ ದಿನಚಾರಣೆ ಪ್ರಯುಕ್ತ ಶಾಲಾ ಆವರಣದಲ್ಲಿಗಿಡ ನೆಟ್ಟು ನೀರು ಹಾಕಿದರು.

ಕಾರ್ಯಕ್ರಮದಲ್ಲಿಶಾಲೆಯ ಸಹ ಶಿಕ್ಷಕರಾದ ಮಹಮೂದ್ ಖಾನ್ , ಎಂ. ಎನ್ . ಪ್ರಭುಪ್ರಸಾದ್ , ವಿಶಾಲಾಕ್ಷಿ, ಫಾರ್ಕುಂದ ಬತೂಲ್ , ನವೀದಾ, ಪದ್ಮಾವತಿ, ಎನ್ .ಜ್ಯೋತಿ, ಜಿ. ಎಲ್ . ಮುಕ್ತಾಯಿ, ಎಚ್ .ಕೆ.ವಿಜಯಕುಮಾರ್ , ಶ್ವೇತಾ ಆರ್ ಭಟ್ , ಎನ್ . ಕೃಷ್ಣಮೂರ್ತಿ, ಆರ್ . ದೀಪ, ಫಹೀ ಮುನ್ನೀಸಾ, ಮೆಹತಾಬ್ ಬೇಗಮ್ , ಮುನಿಜಾ ಫಾತಿಮಾ, ಡಿ.ಕಲ್ಲೇಶ್ , ಟಿ. ಕೆಂಚರಾಯ, ಸಿಬ್ಬಂದಿಗಳಾದ ಎ.ಸರಸ್ವತಿ, ಎಸ್ .ಲಕ್ಷಿತ್ರ್ಮದೇವಿ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾತಾಲೂಕು, ಹೋಬಳಿ ಕೇಂದ್ರಗಳ ವಿಜಯ ಕರ್ನಾಟಕ ವರದಿಗಾರರು ಉಪಸ್ಥಿತರಿದ್ದರು.

ಕೋಟ್

ಇಂದಿನ ದಿನಗಳಲ್ಲಿವಿದ್ಯಾರ್ಥಿಗಳು ಮೊಬೈಲ್ ಗೆ ದಾಸರಾಗುತ್ತಿದ್ದಾರೆ. ಮೊಬೈಲ್ ವ್ಯಸನ ಹೆಚ್ಚುತ್ತಿದೆ. ಮೊಬೈಲ್ ಹೆಚ್ಚು ಬಳಕೆಯಿಂದ ಮಕ್ಕಳ ಮಾನಸಿಕ ಶಕ್ತಿ ಕ್ಷೀಣಿಸುತ್ತಿದೆ. ಸಮೀಕ್ಷೆ ಮೂಲಕ ಈ ಸಂಗತಿ ಅರಿತ ಸರಕಾರವು ಎಚ್ಚೆತ್ತುಕೊಂಡು ಶಾಲೆಗಳಲ್ಲಿಮಕ್ಕಳಿಂದ ಪ್ರತಿನಿತ್ಯ ಕಡ್ಡಾಯವಾಗಿ ಪತ್ರಿಕೆಗಳನ್ನು ಓದಿಸುವಂತೆ ಮಾರ್ಗಸೂಚಿ ಹೊರಡಿಸಿದೆ. ಈ ಹಿನ್ನೆಲೆಯಲ್ಲಿರಾಜ್ಯದಾದ್ಯಂತ ವಿಜಯ ಕರ್ನಾಟಕ ಪತ್ರಿಕೆಯು ವಿಕ ಓದು ಕಾರ್ಯಕ್ರಮ ಆಯೋಜಿಸುತ್ತಿದೆ.

-ಸುದರ್ಶನ ಚನ್ನಂಗಿಹಳ್ಳಿ, ವಿಜಯ ಕರ್ನಾಟಕ ಸಂಪಾದಕ

ಫೋಟೊ ಕ್ಯಾಪ್ಷನ್ /5ಸಿಟಿಡಿ1ಆರ್ , 1ಎಸ್

ವಿಜಯ ಕರ್ನಾಟಕ ಪತ್ರಿಕೆಯಿಂದ ಚಿತ್ರದುರ್ಗದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿಶುಕ್ರವಾರ ಆಯೋಜಿಸಿದ್ದ ವಿಕ ಓದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಉದ್ಘಾಟಿಸಿದರು.

ಫೋಟೊ ಕ್ಯಾಪ್ಷನ್ /5ಸಿಟಿಡಿ1, 1ಜೆ, 1ಎಲ್

ವಿಜಯ ಕರ್ನಾಟಕ ಪತ್ರಿಕೆಯಿಂದ ಚಿತ್ರದುರ್ಗದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿಶುಕ್ರವಾರ ಆಯೋಜಿಸಿದ್ದ ವಿಕ ಓದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ವಿದ್ಯಾರ್ಥಿಗಳಿಗೆ ವಿಜಯ ಕರ್ನಾಟಕ ಪತ್ರಿಕೆ ವಿತರಿಸಿದರು.

ಫೋಟೊ ಕ್ಯಾಪ್ಷನ್ /5ಸಿಟಿಡಿ1ಎ, 1ಬಿ, 1ಎಫ್

ಚಿತ್ರದುರ್ಗದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ಗಿಡ ನೆಟ್ಟು ನೀರು ಹಾಯಿಸಿದರು.

============================