ಮತದಾರರ ಮ್ಯಾಪಿಂಗ್ ಶೇ.98.30 ಪ್ರಗತಿ
*ಜಿಲ್ಲಾಧಿಕಾರಿ ಎಸ್ .ಜೆ.ಸೋಮಶೇಖರ್ ಮಾಹಿತಿ
ವಿಕ ಸುಧಿದ್ದಿಧಿಲೋಕ ಮಡಿಕೇರಿ
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ಜಿಲ್ಲೆಯಲ್ಲಿವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಪೂರ್ಣಗೊಳಿಸಲು ಪಕ್ಷದ ಮುಖಂಡರ ಸಹಕಾರ ಅಗತ್ಯ ಎಂದು ಜಿಲ್ಲಾಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್ .ಜೆ.ಸೋಮಶೇಖರ್ ಮನವಿ ಮಾಡಿದರು. ಶುಕ್ರವಾರ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿಮಾತನಾಡಿದರು.
‘‘ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿಜಿಲ್ಲೆಯ ಎಲ್ಲಾಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಈ ಸಮಯದಲ್ಲಿಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದು’’ ಎಂದು ಹೇಳಿದರು.
‘‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಹಿನ್ನಲೆಯಲ್ಲಿಎಲ್ಲಾಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವುದು ಕಡ್ಡಾಯವಾಗಿದೆ. ಮಾನ್ಯತೆ ಪಡೆದಿರುವ ಎಲ್ಲಾರಾಜಕೀಯ ಪಕ್ಷಗಳು ಮತಗಟ್ಟೆ ಹಂತದಲ್ಲಿಹೆಚ್ಚಿನ ಮಾಹಿತಿ ನೀಡಲು, ಮತಗಟ್ಟೆ ಅಧಿಕಾರಿಗಳ ಕಾರ್ಯ ಪರಿವೀಕ್ಷಿಸಲು ಹಾಗೂ ನ್ಯೂನತೆ ರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿಯನ್ನು ಸಲ್ಲಿಸಬೇಕು’’ ಎಂದು ತಿಳಿಸಿದರು.
ಮ್ಯಾಪಿಂಗ್ ನಲ್ಲಿಪ್ರಗತಿ: ‘‘ಪ್ರಸ್ತುತ ಜಿಲ್ಲೆಯಲ್ಲಿವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಕಾರ್ಯವಾಗಿ 2025 ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002 ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿ ವಿವರಗಳನ್ನು ಜೋಡಣೆ ಮಾಡಲಾಗಿದೆ. ಈ ಕಾರ್ಯದಲ್ಲಿ4,68,546 ಮತದಾರರಲ್ಲಿ4,60,602 ಮತದಾರರನ್ನು ಮ್ಯಾಪಿಂಗ್ ಮಾಡುವ ಮೂಲಕ ಜಿಲ್ಲೆಯು ಶೇ.98.30 ಪ್ರಗತಿ ಸಾಧಿಸಲಾಗಿದ್ದು, ಉಳಿದ ಮತದಾರರನ್ನು ಜೋಡಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ’’ ಎಂದು ತಿಳಿಸಿದರು.
‘‘ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಗಳ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 208-ಮಡಿಕೇರಿ ಕ್ಷೇತ್ರಕ್ಕೆ ಉಪವಿಭಾಗಧಿಕಾರಿ ನಿತೀನ್ ಚಕ್ಕಿ, 209-ವಿರಾಜಪೇಟೆ ಕ್ಷೇತ್ರಕ್ಕೆ ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್ .ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ. ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ತಾಲೂಕು ತಹಸೀಲ್ದಾರ್ ಗಳನ್ನು ನೇಮಕ ಮಾಡಲಾಗಿದೆ’’ ಎಂದರು.
‘‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿಜಿಲ್ಲೆಯಲ್ಲಿ552 ಬಿಎಲ್ ಒಗಳು ಹಾಗೂ 96 ಬಿಎಲ್ ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ’’’ ಎಂದು ಜಿಲ್ಲಾಚುನಾವಣಾಧಿಕಾರಿ ಮಾಹಿತಿ ನೀಡಿದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ತೆನ್ನಿರ ಮೈನಾ ಮಾತನಾಡಿ, ‘‘ಕೊಡಗಿನಲ್ಲಿ2002 ಮತ್ತು ಅದಕ್ಕಿಂತ ಹಿಂದೆ ಮನೆತನದ ಹೆಸರಿನೊಂದಿಗೆ ಮತದಾರ ಹೆಸರು ನೋಂದಣಿಯಾಗಿದ್ದು, ಪ್ರಸ್ತುತ ಇನ್ಷಿಯಲ್ ನೊಂದಿಗೆ ನೋಂದಣಿ ಇದೆ. ಇದರಿಂದ ಸಮಸ್ಯೆಯಾಗದಂತೆ ಜಾಗೃತಿ ವಹಿಸಬೇಕು’’ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿಜಿಲ್ಲಾಧಿಕಾರಿ ಮಾತನಾಡಿ, ‘‘ಈ ಸಮಸ್ಯೆ ಗಣನೆಗೆ ಬಂದಿದ್ದು, ಜಾಗೃತಿ ವಹಿಸುವುದಾಗಿ’’ ಭರವಸೆ ನೀಡಿದರು.
ಸಭೆಯಲ್ಲಿಬಿಧಿಜೆಪಿ ಮುಖಂಡರಾದ ರಾಬಿನ್ ದೇವಯ್ಯ, ಸಜಿಲ್ ಕೃಷ್ಣ, ಜೆಡಿಎಸ್ ಪಕ್ಷದ ಮುಖಂಡರಾದ ತೆಕ್ಕಡೆ ಗುಲಾಬಿ ಜನಾರ್ಧನ್ , ಬಿಎಸ್ ಪಿ ಮುಖಂಡರಾದ ದಿವಿಲ್ ಕುಮಾರ್ , ಮಾಚಿಮಂಡ ರಮೇಶ್ ಪೂವಯ್ಯ, ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಎಚ್ .ಬಿ.ರಮೇಶ್ , ಸಿಪಿಐ ಕಾರ್ಯದರ್ಶಿ ರಮೇಶ್ ಮಾಯಮುಡಿ ಇತರರು ಇದ್ದರು.
ಪ್ರಧಿಮುಖ ಅಂಶಧಿಗಧಿಳು))
ಜೂ.20 ರಿಂದ - ಪೂರ್ವತಯಾರಿ
ಜೂ.30 ರಿಂದ ಜು.29 - ಮತಗಟ್ಟೆ ಅಧಿಕಾರಿಯಿಂದ ಮನೆ ಮನೆ ಭೇಟಿ
ಆ.5 - ಕರಡು ಮತದಾರರ ಪಟ್ಟಿ ಪ್ರಕಟ
ಆ.5 ರಿಂದ ಸೆ.4 -ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ
ಆ.5 ರಿಂದ ಅ.3ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ
ಅ.7 - ಅಂತಿಮ ಮತದಾರರ ಪಟ್ಟಿ ಪ್ರಕಟ
ಫೋಧಿಟೊ:ಎಂಡಿಧಿಕೆ05ಜಿ-ಎಧಿಸ್ ಧಿಐಧಿಆರ್ ಮೀಧಿಟಿಂಗ್
ಕ್ಯಾಧಿಪ್ಷಧಿನ್ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್ .ಜೆ.ಸೋಮಶೇರ್ ಶುಕ್ರವಾರ ಸಭೆ ನಡೆಸಿದರು.

