ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲು ನೀಡಿ

Contributed byPunith AR|Vijaya Karnataka

ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಶೇ.1ರಷ್ಟು ಮೀಸಲು ನೀಡಬೇಕೆಂದು ಎಸ್‌.ಜಿ.ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯಯುತವಾಗಿ ಸೌಲಭ್ಯ ದೊರಕಬೇಕೆಂಬುದು ಒಳಮೀಸಲಾತಿಯ ಉದ್ದೇಶವಾಗಿದೆ. ಕೊರಚ ಸಮುದಾಯ ಸೇರಿದಂತೆ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮಾಜಕ್ಕಾಗಿ ದುಡಿದ ಸಾಧಕರನ್ನು ಗುರುತಿಸಿ ಪುಸ್ತಕ ಹೊರತಂದಿರುವುದು ಶ್ಲಾಘನೀಯ.

it is essential to provide 1 reservation for the nomadic community
ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಶೇ.1ರಷ್ಟು ಮೀಸಲು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸಲು ಒಳಮೀಸಲಾತಿ ತರಲಾಗಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಈ ಸೌಲಭ್ಯ ಸಿಕ್ಕಿಲ್ಲ. ಕೊರಚ ಸಮುದಾಯ ಸೇರಿದಂತೆ ವಂಚನೆಗೊಳಗಾಗುತ್ತಿರುವ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಗುಡಿಸಲು ಪ್ರಕಾಶನ ಆಯೋಜಿಸಿದ್ದ ಗಿರಿಧರ ರಾವ್‌ ಹವಾಲ್ದಾರ್‌ ಅವರ ‘ಕೊರಚರು’, ‘ನೀವೂ ನಾಣ್ಯ ಸಂಗ್ರಹಕರಾಗಿ’, ‘ನಾಡು ನುಡಿ ಸಾಧಕರು’, ‘ಚಿಲ್ ಚಿಲ್ ಗುಬ್ಬಚ್ಚಿ’ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಈ ಮಾತುಗಳು ಕೇಳಿಬಂದವು.
ಪ್ರಸ್ತುತ ಹಣ ಕೊಟ್ಟರೆ ಪ್ರಶಸ್ತಿ, ಗೌರವ ಸಿಗುವ ಕಾಲದಲ್ಲಿ, ಸಮಾಜಕ್ಕಾಗಿ ದುಡಿದ ಸಾಧಕರನ್ನು ಗುರುತಿಸಿ ಹವಾಲ್ದಾರ್‌ ಅವರು ‘ನಾಡು ನುಡಿ ಸಾಧಕರು’ ಪುಸ್ತಕ ತಂದಿರುವುದು ಶ್ಲಾಘನೀಯ. ಇದು ಅವರ ಶ್ರಮಕ್ಕೆ ಸಲ್ಲುವ ಗೌರವ ಎಂದು ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.