ವಿಕ ಸುದ್ದಿಲೋಕ ರಾಮದುರ್ಗ
ನಗರದ ನಾರಾಯಣ ಪೇಟೆ ವಿಠ್ಠಲ ಹರಿಮಂದಿರ ಸಪ್ತಾಹ ಮಹೋತ್ಸವ ಅಂಗವಾಗಿ ಬುಧವಾರ ಪಾಂಡುರಂಗ ದೇವರ ರಥೋತ್ಸವ ಜರುಗಿತು.
ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ರಥದಲ್ಲಿಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿಪಾಲ್ಗೊಂಡಿದ್ದರು. ಸಂತರ ದಿಂಡಿಯು ನಗರ ಪ್ರದಕ್ಷಿಣೆ ಹಾಕಿ ಸಂಜೆ ರಥೋತ್ಸವದಲ್ಲಿಪಾಲ್ಗೊಂಡಿತು.
ಒಂದು ವಾರದಿಂದ ಸಪ್ತಾಹ ಆಚರಣೆ, ಕೀರ್ತನೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೊನೆಯ ದಿನವಾದ ಬುಧವಾರ ಪಲ್ಲಕ್ಕಿ ಉತ್ಸವ ಕೂಡ ಜರುಗಿತು.
ಫೋಟೊ: (11ಆರ್ ಡಿ2): ರಾಮದುರ್ಗದಲ್ಲಿಪಾಂಡುರಂಗ ದೇವರ ರಥೋತ್ಸವ ಅದ್ಧೂರಿಯಾಗಿ ಜರುಗಿತು.

