ಕೋಲಿ ಸಮಾಜ ಎಸ್ ಟಿ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿ

Contributed byvenkatesh.narasappa@timesgroup.com|Vijaya Karnataka

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಒತ್ತಾಯಿಸಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಯಾವುದೇ ಅಡ್ಡಿಯಿಲ್ಲ ಎಂದು ವರದಿಗಳು ತಿಳಿಸಿವೆ. ಈ ಬಾರಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸಚಿವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

new proposal for inclusion of koli community in st

ಕೋಲಿ ಎಸ್ ಟಿ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿ ವಿಕ ಸುದ್ದಿಲೋಕ ಕಲಬುರಗಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಇತರೆ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಸದನದಲ್ಲಿಗಮನ ಸೆಳೆದರು. ಕುಲಶಾಸ್ತ್ರೀಯ ಅಧ್ಯಯನವಾಗಿ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಹೋಗಿದೆ. ಚೆನ್ನಪ್ಪರೆಡ್ಡಿ ಸೇರಿ ಎಲ್ಲಆಯೋಗಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮುದಾಯಗಳು ದುರ್ಬಲರಿದ್ದಾರೆ. ಇವರಿಗೆ ಪರಿಶಿಷ್ಟ ಪಂಗಡದಲ್ಲಿಸೇರಿಸಲು ಯಾವುದೇ ಅಭ್ಯಂತರವಿಲ್ಲಎಂದು ಈಗಾಗಲೇ ವರದಿ ಕೊಟ್ಟಿವೆ. ಪ್ರತಿ ಗುರುವಾರ ಕ್ಯಾಬಿನೆಟ್ ಸಭೆ ಮಾಡಲಾಗುತ್ತದೆ. ಬಹಳ ದಿನಗಳ ಬೇಡಿಕೆಯಿದೆ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದರೆ ಸಾಕು. ಅಲ್ಲಿಮಾಡಿಕೊಳ್ಳು ತ್ತೇವೆ. ಆಗದಿದ್ದರೆ ಬಿಜೆಪಿಯವರ ಮೇಲೆ ಅವರ ಪೊಳ್ಳು ಭರವಸೆಗಳಾದರೂ ಗೊತ್ತಾಗಬೇಕಲ್ಲ. ಮೋದಿ ಕಲಬುರಗಿಗೆ ಬಂದು ‘ತುಮ್ ಲೋಗೋಂಕ ಯಾದ್ ರಕೂಂಗ’ ಎಂದು ಹೇಳಿದ್ದರು. ಈಗಾಗಲೇ ಕೇಂದ್ರಕ್ಕೆ ಮೂರು ಬಾರಿ ಹೋಗಿ ಫೈಲ್ ವಾಪಸ್ ಬಂದಿದೆ. ಆದ್ದರಿಂದ ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಮನವಿ ಮಾಡಿದರು. ಎಲ್ಲಸಮಾಜದವರ ಒಪ್ಪಿಗೆ ಇದೆ. ಕಷ್ಟಕಾಲದ ಸಮಾಜಕ್ಕೆ ಕಣ್ಣೀರು ಒರೆಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದರೆ ಸಾಕು. ಈ ಬಾರಿಯ ಕ್ಯಾಬಿನೆಟ್ ನಲ್ಲಿನಿರ್ಣಯ ತೆಗೆದುಕೊಂಡು ಕಳುಹಿಸಬೇಕು ಎಂದು ಮನವಿ ಮಾಡಿದರು. ಸಚಿವ ಎನ್ .ಎಸ್ .ಭೋಸರಾಜು ಪ್ರತಿಕ್ರಿಯಿಸಿ, ಈಗಾಗಲೇ ನಿಯಮಗಳ ಪ್ರಕಾರ ಸ್ಟಷ್ಟೀಕರಣ ಕೇಳಿದ್ದಾರೆ. ಪರಿಶೀಲನೆ ಮಾಡಿ ವರದಿ ಬಂದ ತಕ್ಷಣ ಕಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.