ಮೂತ್ರಪಿಂಡ ಆರೋಗ್ಯ ಜಾಗೃತಿ ಇಂದು ಕಲಬುರಗಿ: ಚಿರಾಯು ಆಸ್ಪತ್ರೆಯಿಂದ ಮಾ.12ರಂದು ಬೆಳಗ್ಗೆ 8ರಿಂದ 10ರ ವರೆಗೆ ನಗರದಲ್ಲಿವಿಶ್ವ ಮೂತ್ರಪಿಂಡ ದಿನದ ಪ್ರಯುಕ್ತ ಮೂತ್ರಪಿಂಡ ಆರೋಗ್ಯ ಜಾಗೃತಿ ವಾಕ್ ಥಾನ್ ಜರುಗಲಿದೆ. ಸಾರ್ವಜನಿಕರಲ್ಲಿಮೂತ್ರಪಿಂಡ ಆರೋಗ್ಯದ ಮಹತ್ವ ಹಾಗೂ ಮೂತ್ರಪಿಂಡ ರೋಗಗಳ ಆರಂಭಿಕ ಪತ್ತೆಯ ಕುರಿತು ಜಾಗೃತಿ ಮೂಡಿಸಲಾಗುವುದು. ಹೀಗಾಗಿ ಬೆಳಗ್ಗೆ 8ರಿಂದ 10ರ ವರೆಗೆ ನಗರದ ಚಿರಾಯು ಆಸ್ಪತ್ರೆಯಿಂದ ಎಸ್ ವಿಪಿ ಚೌಕ್ , ಮಿನಿ ವಿಧಾನಸೌಧ ಮಾರ್ಗವಾಗಿ ಜಗತ್ ವೃತ್ತದವರೆಗೆ ಜಾಗೃತಿ ವಾಕ್ ಥಾನ್ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.7411569093ಕ್ಕೆ ಸಂಪರ್ಕಿಸಬಹುದು ಎಂದು ಚಿರಾಯು ಆಸ್ಪತ್ರೆಯು ಪ್ರಕಟಣೆಯಲ್ಲಿತಿಳಿಸಿದೆ.

