ಆಳಂದ ಪರಿಶುದ್ಧ ಗೆಳೆಯರ ಬಳಗದಿಂದ 15 ನೂರು ಸ್ಟೀಲ್ ತಟ್ಟೆಗಳನ್ನು ಕೊಪ್ಪಳ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಗವಿಶ್ರೀ ಮಠಕ್ಕೆ ದೇಣಿಗೆ
1,500 ಸ್ಟೀಲ್ ತಟ್ಟೆ ಆಳಂದ: ಪಟ್ಟಣದಲ್ಲಿರುವ ಪರಿಶುದ್ಧ ಗೆಳೆಯರ ಬಳಗದಿಂದ 1,500 ಸ್ಟೀಲ್ ತಟ್ಟೆಗಳನ್ನು ಕೊಪ್ಪಳ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ದೇಣಿಗೆ ನೀಡಿ ಹಸ್ತಾಂತರಿಸಿದರು. ಬಳಿಕ ಶ್ರೀಗಳು ಮಾತನಾಡಿ, ಸಮಾಜಮುಖಿ ಕಾರ್ಯಗಳು ನಡೆದಾಗ ಮಾತ್ರ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಸ್ಪಂದನೆ ಮಾಡಲು ಸಹಕಾರಿಯಾಗುತ್ತದೆ ಎಂದರು. ಬಳಗದ ಪ್ರಮುಖ ಅಪ್ಪಾಸಾಹೇಬ ತೀರ್ಥೆ, ಶ್ರೀಶೈಲ್ ಕರ್ , ವೀರಯ್ಯಸ್ವಾಮಿ, ಶಿವಲಿಂಗಪ್ಪ ಮಂಟಗಿ, ಮಲ್ಲಿಕಾರ್ಜುನ ಮಾಳಿ, ರಾಚಯ್ಯಸ್ವಾಮಿ, ಶಿವಕುಮಾರ ಕರ್ , ಮಲ್ಲಿಕಾರ್ಜುನ ಯರಗಲ್ , ಗುರುನಾಥ ಅಷ್ಟಗಿ ಇವರು ಪೂಜ್ಯರಿಗೆ ತಟ್ಟೆಗಳು ನೀಡಿ ಆಶೀರ್ವಾದ ಪಡೆದುಕೊಂಡರು. ಆಳಂದ ಹಾಗೂ ತಾಲೂಕಿನ ಕೆಲ ಗ್ರಾಮಗಳ ಯುವಕರು ಸೇರಿ 112 ಜನರು ತಮ್ಮ ಕೈಲಾದಷ್ಟು ಸಹಾಯ ಮಾಡಿರುವುದರಿಂದಲೇ 15 ನೂರು ಸ್ಟೀಲ್ ತಟ್ಟೆಗಳು ಖರೀದಿ ಮಾಡಿ ಗವಿಸಿದ್ದೇಶ್ವರ ಮಠಕ್ಕೆ ನೀಡಿದ್ದು, ತಟ್ಟೆಗಳು ಮಠದಿಂದ ಬಾಲಕಿಯರ ವಸತಿ ನಿಲಯ ಆರಂಭಿಸುವುದರಿಂದ ಪ್ರಸಾದಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ಪರಿಶುದ್ಧ ಗೆಳೆಯರ ಬಳಗದಿಂದ ದೇಣಿಗೆಯಾಗಿ ನೀಡಲಾಗಿದೆ. ಈ ಸಮಾಜ ಕಾರ್ಯಕ್ಕೆ ಸಹಕರಿಸಿದ ಗೆಳೆಯರ ಬಳಗಕ್ಕೆ ಅಭಿನಂಧಿಸಿದರು.

