ವಿಕ ಸುದ್ದಿಲೋಕ ಕಲಬುರಗಿ ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನಮ್ ಬಧವಾರ ಬೆಳಗ್ಗೆ ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿಎಸ್ ಎಸ್ ಎಲ…ಸಿ ಪರೀಕ್ಷೆ ಬರೆಯಲು ಅಣಿಯಾಗಿರುವ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಲ್ಲಿನ ಜಗತ್ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಇದೇ ಮಾರ್ಚ್ 18 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿಜಿಲ್ಲೆಯ ಸಮಾರು 20 ಶಾಲೆಗಳ 40 ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಕಿವಿಯಾಗಿದಲ್ಲದೆ ಪರೀಕ್ಷೆ ಎದುರಿಸಲು ಇರುವ ಆತಂಕಗಳನ್ನು, ಸವಾಲು, ಸಮಯ ಪರಿಪಾಲನೆ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಸಂವಾದದಲ್ಲಿಭಾಗವಹಿಸಿದ ಅನೇಕ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಕ್ರ್ಯಾಕ್ ಮಾಡಲು ಎಷ್ಟು ಸಮಯ ಓದಿಗೆ ಮೀಸಲಿಡಬೇಕು, ಸಮಯ ಪರಿಪಾಲನೆ ಹೇಗೆ, ಮಾದರಿ ಮತ್ತು ಪೂರ್ವಭಾವಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳೆ ಮುಖ್ಯ ಪರೀಕ್ಷೆಗೆ ಕೇಳಲಾಗುತ್ತಾ ಹೀಗೆ ಅನೇಕ ಪ್ರಶ್ನೆಗಳನು ಡಿ.ಸಿ. ಮುಂದಿಟ್ಟು ಪರಿಹಾರ ಪಡೆದುಕೊಂಡರು. ನಂತರ ಜಿಲ್ಲಾಧಿಕಾರಿ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ಪ್ರೌಢ ಶಿಕ್ಷಣ ಭದ್ರ ಬುನಾದಿಯಾಗಿದೆ. ಮುಂದೆ ನೀವು ಮೆಡಿಕಲ…, ಎಂಜಿನಿಯರಿಂಗ್ ಐಐಟಿದಂತಹ ಉನ್ನತ ಶಿಕ್ಷಣ ಕೋರ್ಸ್ ಪಡೆಯುವುದಕ್ಕಾಗಲಿ ಅಥವಾ ಕೆಎಎಸ್ , ಐಎಎಸ್ , ಐಪಿಎಸ್ ಪರೀಕ್ಷೆ ಎದರಿಸಬೇಕಾದರೆ ಎಸ್ ಎಸ್ ಎಲ…ಸಿ, ಪಿಯುಸಿ ಅಂಕ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ದೆಸೆಯ ಪ್ರಮುಖ ಘಟ್ಟ ಇದಾಗಿದೆ. ಸಹಪಾಠಿ ಅಥವಾ ಶಾಲೆಗೆ ಟಾಪರ್ ಆಗಬೇಕೆಂಬ ಸಣ್ಣ ಸವಾಲುಗಳನ್ನು ಬದಿಗೊತ್ತಿ ನಿಮ್ಮ ಉಜ್ವಲ ಭವಿಷ್ಯಕ್ಕೆ, ಒಳ್ಳೆಯ ಹುದ್ದೆಯ ನೌಕರಿ ಪಡೆಯಲು, ಹೆತ್ತವರ ಆಸೆ ಈಡೇರಿಸಲು, ಮಂದೆ ಏನನ್ನಾದರು ಸಾಧನೆಗೆ ದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಬೇಕು. ಇದಕ್ಕಾಗಿ ಜ್ಞಾನಾರ್ಜನೆ, ಕೌಶಲ, ಉತ್ತಮ ಅಂಕ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಲಬುರಗಿಯಲ್ಲಿಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಹತೇಕ ಅಧಿಕಾರಿಗಳೇ ಇಲ್ಲಿಗೆ ಬರುತ್ತಾರೆ, ನೀವ್ಯಾಕ್ಯಾಗಬಾರದು ಎಂದು ವಿದ್ಯಾರ್ಥಿಗಳನ್ನು ಮರು ಪ್ರಶ್ನಿಸಿದ ಡಿ.ಸಿ.ಬಿ.ಫೌಜಿಯಾ ತರನ್ನಮ್ ನೀವು ದೊಡ್ಡ ಗುರಿ, ಕನಸು ಇಟ್ಟುಕೊಳ್ಳಿ. ಅದನ್ನು ಈಡೇರಿಸಲು ಹಗಲು ರಾತ್ರಿ ಶ್ರಮಪಟ್ಟು ಓದಿದಲ್ಲಿಯಶಸ್ಸು ಕಟ್ಟಿಟ್ಟಬುತ್ತಿ. ಗುರಿ ಬೆನ್ನತ್ತಿ ಸಾಗಬೇಕು. ಸಾಗುವಾಗ ಶಾಟ್ಕಟ್ ದಾರಿ ಬೇಡ. ನಾವು ಹಿಂದುಳಿದವರು, ಹಳ್ಳಿಯಿಂದ ಬಂದವರು, ನಮ್ಮಿಂದ ಆಗಲ್ಲಎಂಬಿತ್ಯಾದಿ ಕೀಳರಿಮೆ ಬಿಟ್ಟು ನಾವು ಮುಂದೆ ಸಾಗಬೇಕಿದೆ. ತಾನು ಸಹ ದಿಲ್ಲಿಕೋಚಿಂಗ್ ಪಡೆಯದೆ ಲೈಬ್ರರಿ ಸಹಾಯ ಪಡೆದುಕೊಂಡೆ ಮನೆಯಲ್ಲಿಯೇ ಓದಿಕೊಂಡು ಐಎಎಸ್ ಪರೀಕ್ಷೆ ಪಾಸಾದೆ ಎಂದು ಬಿ.ಫೌಜಿಯಾ ತರನ್ನುಮ್ ಹೇಳಿಕೊಂಡರು. ಇನ್ನು ಕೊನೆಗೆ ಡಿ.ಸಿ.ಬಿ.ಫೌಜಿಯಾ ತರನ್ನುಮ್ ಸಂವಾದದಲ್ಲಿಭಾಗವಹಿಸಿದ ಶಾಲಾ ಮಕ್ಕಳಿಗೆ ಪೆನ್ , ಬಿಸ್ಕತ್ , ಚಾಕಲೇಟ್ , ಜ್ಯೂಸ್ , ಹಣ್ಣುಗಳನ್ನು ನೀಡಿ ಸರಿಯಾಗಿ ಪರೀಕ್ಷೆ ಬರೆಯುವಂತೆ ಶುಭ ಕೋರಿದೆ. ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ, ವಿಷಯ ನಿರ್ವಾಹಕ ರಮೇಶ ಇದ್ದರು.

