ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ
ವಿಕ ಸುದ್ದಿಲೋಕ ಎಚ್ .ಡಿ.ಕೋಟೆ
ಎಲ್ಲಾದಾನಕ್ಕಿಂತ ರಕ್ತದಾನ ಶ್ರೇಷ್ಠ. ಈ ಬಗ್ಗೆ ಸಮಾಜದಲ್ಲಿಅರಿವು ಮತ್ತು ಜಾಗೃತಿ ಮೂಡಿಸುತ್ತಿದ್ದರೂ ರಕ್ತದಾನಿಗಳ ಸಂಖ್ಯೆ ಏರಿಕೆ ಆಗುತ್ತಿಲ್ಲಎಂದು ಸಾರ್ವಜನಿಕ ಆಸ್ಪತ್ರೆಯ ಆಪ್ತಸಮಾಲೋಚಕ ರಾಮು ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸಾರ್ವಜನಿಕ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿವಿಜೇತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
‘‘ಒಬ್ಬರು ಕೊಡುವ ರಕ್ತದಾನದಿಂದ 4 ಜನರ ಜೀವ ಉಳಿಸಬಹುದು. ಮೈಸೂರಿನ ಕೆ.ಆರ್ .ಆಸ್ಪತ್ರೆಯಲ್ಲಿದಿನ ನಿತ್ಯ 80ರಿಂದ 100 ಯೂನಿಟ್ ರಕ್ತ ಬೇಕಿರುತ್ತದೆ. ಆದರೆ, ಆಸ್ಪತ್ರೆಯಲ್ಲಿ40ರಿಂದ 50 ಯೂನಿಟ್ ವರೆಗೆ ಮಾತ್ರ ರಕ್ತ ಸಂಗ್ರಹವಾಗಿರುತ್ತದೆ,’’ ಎಂದರು.
‘ಇಂದಿನ ಯುವ ಸಮೂಹ ರಕ್ತದಾನಕ್ಕೆ ಮುಂದಾಗಬೇಕು. ಆರೋಗ್ಯವಂತರು 18 ವರ್ಷ ಮೇಲ್ಪಟ್ಟ ಮತ್ತು 60 ವರ್ಷದ ಒಳಗಿನ ಮಂದಿ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ ಕೆಲವೇ ಗಂಟೆಗಳಲ್ಲಿರಕ್ತ ದೇಹದಲ್ಲಿಮರುಸೃಷ್ಠಿಯಾಗುತ್ತದೆ. ರಕ್ತದಾನ ಮಾಡುವುದರಿಂದ ಹೃದಯಾಘಾತ ತಪ್ಪಿಸಬಹುದು. ಒಟ್ಟಾರೆ ರಕ್ತದಾನದಿಂದ ಅನುಕೂಲಗಳೇ ಹೆಚ್ಚು’’ ಎಂದರು.
ಮತ್ತೊಬ್ಬ ಸಂಯೋಜಕ ರಾಹುಲ್ ಮಾತನಾಡಿ, ‘‘ಏಡ್ಸ್ ಎನ್ನುವುದು ಮಾರಕ ಕಾಯಿಲೆ. ಈ ರೋಗಕ್ಕೆ ಯಾರೂ ತುತ್ತಾಗಬಾರದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ರೋಗ ಬರಲಿದೆ. ಹಿಂದಿನ ವರ್ಷರ್ ಗಳಿಗೆ ಹೋಲಿಸಿದಲ್ಲಿಏಡ್ಸ್ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ,’’ ಎಂದರು.
ಈ ಬಗ್ಗೆ ವಿದ್ಯಾರ್ಥಿಗಳಲ್ಲಿಅರಿವು ಮತ್ತು ಜಾಗೃತಿ ಮೂಡಿಸಲು ರಕ್ತದಾನ ಮತ್ತು ಏಡ್ಸ್ ನಿಯಂತ್ರಣದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಿತು. ಕಾಲೇಜಿನ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿದ್ವಿತೀಯ ಬಿಎ ವಿದ್ಯಾರ್ಥಿನಿ ಪ್ರತಿಭಾ (ಪ್ರ), ದ್ವಿತೀಯ ಬಿಕಾಂನ ಸ್ಪೂರ್ತಿ(ದ್ವಿ) ಮತ್ತು ತೃತೀಯ ಬಿಕಾಂನ ಅನನ್ಯಗೌಡ(ತೃ) ಸ್ಥಾನ ಪಡೆದರು.
ಪ್ರಾಂಶುಪಾಲ ಡಾ.ಜೆ.ಎನ್ . ವೆಂಕಟೇಶ್ , ಉಪನ್ಯಾಸಕರಾದ ಚೆನ್ನಕೇಶವನಾಯಕ, ಮಹೇಂದ್ರ, ಅವೀನ, ಸಿದ್ದರಾಜು, ಮಂಜು, ಮಹೇಶ್ , ಪ್ರಕಾಶ್ ನಾಯಕ್ ಹಾಜರಿದ್ದರು.
ಪೋಟೋ ಇದೆ;ಋ್ಗಖ11ಏಈಓ2ಇ
ಎಚ್ .ಡಿ.ಕೋಟೆ ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ಕಾರ್ಯಕ್ರಮದಲ್ಲಿವಿಜೇತರಿಗೆ ಪ್ರೋತ್ಸಾಹ ಧನ ನೀಡಲಾಯಿತು.

