ಎಚ್ .ಪಿ. ಪುಣ್ಯವತಿ ಬೆಂಗಳೂರು p್ಠ್ಞyavaಠಿhಜಿ.hpಃಠಿಜಿಞಛಿsಟ್ಛಜ್ಞಿdಜಿa.್ಚಟಞ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಅಭಾವದ ಚರ್ಚೆ ಮನೆ-ಮನಗಳಲ್ಲಿಜೋರಾಗಿದೆ. ಇಂತಹ ಸಮಯದಲ್ಲಿ‘ನಮ್ಮ ಅಡುಗೆಗೆÜ ಪರರಾಷ್ಟ್ರಗಳ ಇಂಧನವನ್ನೇ ಏಕೆ ಅವಲಂಬಿಸಬೇಕು?’ ಎಂಬ ಪ್ರಶ್ನೆಗೆ ಬೆಂಗಳೂರಿನ ‘ಅದಮ್ಯ ಚೇತನ’ ಸಂಸ್ಥೆ ಕಳೆದ 15 ವರ್ಷಗಳಿಂದ ರಚನಾತ್ಮಕ ಉತ್ತರ ಹಾಗೂ ಪರಿಹಾರ- ಎರಡನ್ನೂ ಕಂಡುಕೊಂಡಿದೆ. ಕೇಂದ್ರದ ಮಾಜಿ ಸಚಿವ ಅನಂñಧಿÜಧಿಕುಮಾರ್ ಅವರು ಆರಂಭಿಸಿದ ಈ ಸಂಸ್ಥೆ, ಇಂದು ವಿಶ್ವದ ಗಮನ ಸೆಳೆಧಿಯುತ್ತಿದೆ. 2009ರಿಂದಲೂ ಸಂಸ್ಥೆ ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸುತ್ತಿದ್ದು, ಇದುವರೆಗೆ ಇಲ್ಲಿನ ಅಡುಗೆಮನೆಗೆ ಒಂದೇ ಒಂದು ಎಲ್ ಪಿಜಿ ಸಿಲಿಂಡರ್ ಪ್ರವೇಶಿಸಿಲ್ಲ. ಬದಲಿಗೆ, ನವೀಕರಿಸಬಹುದಾದ ಇಂಧನ ಮೂಲಗಳನ್ನೇ ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ತ್ಯಾಜ್ಯದಿಂದ ತಯಾರಿಸಿದ ಬ್ರಿಕೆಟ್ ಗಳಿಂದ ಹಬೆ
ಆಧಾರಿತ ವ್ಯವಸ್ಥೆಯಡಿ ಬಿಸಿಯೂಟ ರೆಡಿ ಮಾಡಲಾಗುತ್ತಿದೆ ! ಪ್ಲಾಸ್ಟಿಕ್ , ಲೋಹ ಮತ್ತು ಕಲ್ಲು-ಮಣ್ಣು ಇಲ್ಲದ ಕೃಷಿ ತ್ಯಾಜ್ಯ, ತುಂಡಾದ ನೋಟ್ ಗಳು, ಕೋಟಾ ನೋಟುಗಳನ್ನು ಪುಡಿ ಮಾಡಿ ಬ್ರಿಕೆಟ್ ಗಳನ್ನು ತಯಾರಿಸಲಾಗುತ್ತಧಿದೆ. ಜತೆಗೆ ತೌಡಿನಿಂದ (ಧಾನ್ಯಗಳ ಹೊಟ್ಟು) ತಯಾರಿಸಿದ ಪೆಲೆಟ್ಸ್ ಗಳು, ತೆಂಗಿನ ಚಿಪ್ಪುಗಳನ್ನು ಬಧಿಳಧಿಸಿ ನವೀಕರಿಸಬಹುದಾದ ಇಂಧನ ತಯಾರಿಸಲಾಗುತ್ತಿದೆ. 120 ಸಿಲಿಂಡರ್ ಗಳ ಉಳಿತಾಯ ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅದಮ್ಯ ಚೇತನ ಫೌಂಡೇಷನ್ ನ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ , ‘‘ಅನ್ನ-ಅಕ್ಷರ- ಆರೋಗ್ಯ ಎಂಬ ಘೋಷವಾಕ್ಯದೊಂದಿಗೆ ತಮ್ಮ ತಾಯಿ ಗಿರಿಜಾಶಾಸ್ತ್ರಿ ಸ್ಮರಣಾರ್ಥವಾಗಿ 1998ರಲ್ಲಿಅನಂತಕುಮಾರ್ ‘ಅದಮ್ಯ ಚೇತನ’ ಆರಂಭಿಸಿದರು. ಪ್ರತಿ ದಿನ ಸುಮಾರು 2 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದೇವೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 5 ಅಡುಗೆ ಮನೆಗಳಿವೆ. ಪ್ರತಿದಿನ 3 ಟನ್ ಬ್ರಿಕೆಟ್ ಗಳನ್ನು ಬಳಸುತ್ತೇವೆ. ಒಟ್ಟಾರೆ 120 ಗ್ಯಾಸ್ ಸಿಲಿಂಡರ್ ಗಳಷ್ಟು ನಿತ್ಯ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಿ ಅಡುಗೆ-ತಿಂಡಿ ಮಾಡಲಾಗುತ್ತದೆ,’’ ಎಂದು ತಿಳಿಸಿದರು. ಅದಮ್ಯ ಚೇತನ ನಡೆಸುತ್ತಿರುವ ‘ಅನ್ನಪೂರ್ಣ’ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಫಲ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಧಿಗಿ, ರಾಣೆಬೆನ್ನೂರು, ಜೋಧಪುರ, ಉದಯಪುರಗಳಲ್ಲಿ1.60 ಲಕ್ಷ ಮಂದಿ ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಸೇರಿದಂತೆ 10 ಸ್ಥಳಗಳಲ್ಲಿ
ಸಹಸ್ರಾರು ಮಂದಿಗೆ ಅನ್ನದಾಸೋಹ ನಡೆಯುತ್ತಿದೆ ಎಂದರು. ಚಪಾತಿ ಬೇಯಿಸಲು ಹೊಗೆ ರಹಿತ ಒಲೆ ಚಪಾತಿ ಮಾಡಲು ಯಂತ್ರ ಹೊಂದಿದ್ದು, ಚಪಾತಿ ಒತ್ತಲು ಸೋಲಾರ್ ಪವರ್ ಬಳಸಲಾಗುತ್ತಿದೆ. ಬೇಯಿಸಲು ತೆಂಗಿನ ಚಿಪ್ಪುಗಳ ಹೊಗೆ ರಹಿತ ಒಲೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಕ್ಷಾಂತರ ಮಂದಿಗೆ ಅಡುಗೆ ತಯಾರಿಸಿದರೂ ಯಾವುದೇ ತ್ಯಾಜ್ಯವನ್ನು ಈವರೆಗೆ ಹೊರಗೆ ಹಾಕಿಲ್ಲ. ಶೂನ್ಯ ತ್ಯಾಜ್ಯದ ಕಿಚನ್ ನಲ್ಲಿಅಚ್ಚುಕಟ್ಟಾಗಿ ಅಡುಗೆ ತಯಾರಾಗುತ್ತಿದೆ. ಇದಕ್ಕೆ ಬೇಕಾದ ಪರಿಸರಪೂರಕ ವ್ಯವಸ್ಥೆಯನ್ನು ಅಳವಡಿಸಿಧಿಕೊಳ್ಳಲಾಗಿದೆ. ಈ ಕುರಿತು ಆಸಕ್ತಿಯುಳ್ಳವರಿಗೆ ತರಬೇತಿಯನ್ನೂ ನೀಡಲಾಗುವುದು. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆರಂಭದಲ್ಲಿಸ್ವಲ್ಪ ಕಷ್ಟ ಎನಿಸಿದರೂ, ನಂತರ ತುಂಬಾ ಅನುಕೂಲಕರವಾಗಿರುತ್ತದೆ ಎನ್ನುತ್ತಾರೆ ತೇಜಸ್ವಿನಿ ಅನಂತಕುಮಾರ್ .

