ಮಳಖೇಡ ಪಿಡಿಒ ಸಸ್ಪೆಂಡ್

Contributed byvenkatesh.narasappa@timesgroup.com|Vijaya Karnataka

ಮಳಖೇಡ ಪಿಡಿಒ ದಶರಥ ಪಾತ್ರೆ ಅವರನ್ನು ಅಮಾನತುಗೊಳಿಸಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ, ಕರವಸೂಲಿಯಲ್ಲಿ ಲೋಪ, ಸರಕಾರಿ ನಿಯಮಗಳ ಉಲ್ಲಂಘನೆ, ಆರ್ಥಿಕ ನಷ್ಟ ಮಾಡಿದ ಆರೋಪಗಳು ಸಾಬೀತಾಗಿವೆ. ನಗದು ಪುಸ್ತಕ ನಿರ್ವಹಣೆ, ಕಟಾವಣೆ ಮಾಡದೆ ಹಣ ಪಾವತಿ, ಮಳಿಗೆಗಳ ಹರಾಜಿನಲ್ಲಿ ನಿಯಮ ಉಲ್ಲಂಘನೆ, ನಕಲಿ ಹೆಬ್ಬೆಟ್ಟು ಬಳಸಿ ಸಭೆ ನಡೆಸಿರುವುದು, ವಿಶೇಷಚೇತನರ ಅನುದಾನ ದುರುಪಯೋಗ ಸೇರಿದಂತೆ ಹಲವು ಆರೋಪಗಳು ತನಿಖೆಯಲ್ಲಿ ದೃಢಪಟ್ಟಿವೆ. ಸಿಇಒ ಭಂವರ್‌ಸಿಂಗ್‌ ಮೀನಾ ಈ ಆದೇಶ ಹೊರಡಿಸಿದ್ದಾರೆ.

malakhed pido suspended

ವಿಕ ಸುದ್ದಿಲೋಕ ಕಲಬುರಗಿ 15ನೇ ಹಣಕಾಸು ಯೋಜನೆಯಲ್ಲಿನ ಅವ್ಯವಹಾರ, ಕರವಸೂಲಿಯಲ್ಲಿಅವ್ಯವಹಾರ ಸೇರಿ ಹಲವು ವಿಷಯಗಳಲ್ಲಿಸರಕಾರಿ ನಿಯಮಗಳ ಉಲ್ಲಂಘನೆ, ಸರಕಾರಕ್ಕೆ ಆರ್ಥಿಕ ನಷ್ಟ ಮಾಡಿದ ಆರೋಪ ಹಿನ್ನೆಲೆಯಲ್ಲಿಸೇಡಂ ತಾಲೂಕಿನ ಮಳಖೇಡ ಪಿಡಿಒ ದಶರಥ ಪಾತ್ರೆಗೆ ಅಮಾನತು ಮಾಡಲಾಗಿದೆ. ಮಳಖೇಡ ಪಿಡಿಒ 15ನೇ ಹಣಕಾಸು ಯೋಜನೆಯಡಿ ಅವ್ಯವಹಾರ ಮಾಡಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿಸೇಡಂ ಇಒ ದೂರಿನ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ತನಿಖಾ ತಂಡದ ಅಧಿಕಾರಿಗಳು 2026 ಜ.13ರಂದು ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿ ತನಿಖಾ ವರದಿ ಸಲ್ಲಿಸಿದ್ದಾರೆ. ಈ ತನಿಖೆಯಲ್ಲಿ15ನೇ ಹಣಕಾಸು ಯೋಜನೆಯಲ್ಲಿನಿಯಮಗಳ ಪ್ರಕಾರ ನಗದು ಪುಸ್ತಕ ನಿರ್ವಹಿಸದಿರುವುದು, ನಗದು ಪುಸ್ತಕದಲ್ಲಿಪ್ರತಿ ತಿಂಗಳು ದೃಢೀಕರಣ ಸಹಿ ಮಾಡದಿರುವುದು, ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ219 ಓಚರ್ ಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಮಾಡಿರುವುದು, ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಲಾಗಿ ಸರಕಾರಕ್ಕೆ ಜಮಾ ಮಾಡಬೇಕಾದ ಶಾಸನಬದ್ಧ ಕಟಾವಣೆಗಳಾದ ಆದಾಯ ತೆರಿಗೆ, ಜಿಎಸ್ ಟಿ, ರಾಜಧನ ಮತ್ತು ಸಿಬಿಎಫ್ ಕಟಾವಣೆ ಮಾಡದೆ ಹಣ ಗುತ್ತಿಗೆದಾರರಿಗೆ ಪಾವತಿಸಿ ನಿಯಮ ಉಲ್ಲಂಘಿಸಿರುವುದು ಸಾಬೀತಾಗಿದೆ. ಮಳಿಗೆಗಳ ಹರಾಜಿನಲ್ಲಿಏಳು ವಾಣಿಜ್ಯ ಮಳಿಗೆಗಳ ಬಾಡಿಗೆ ಕರಾರು ಒಪ್ಪಂದ ಅವಧಿ ಮುಕ್ತಾಯವಾಗಿರುವುದರಿಂದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಉಚ್ಚ ನ್ಯಾಯಾಲಯದ ಆದೇಶ ನೀಡಿದ್ದರೂ ನೋಟಿಸ್ ನೀಡಿಲ್ಲ. ಮರು ಒಡಂಬಡಿಕೆ ಮಾಡಿಕೊಂಡು ಕರ್ತವ್ಯಲೋಪ ಎಸಗಿದ್ದಾರೆ. ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿಹೈಕೋರ್ಟ್ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವುದಲ್ಲದೆ ನಿಯಮ ಬಾಹಿರವಾಗಿ ದೀರ್ಘಾವಧಿಗೆ ಬಾಡಿಗೆ ಕರಾರು ಪತ್ರ ಮಾಡಿರುತ್ತಾರೆ. ಸದಸ್ಯರನ್ನು ಕರೆಯದೆ ಅಕ್ರಮವಾಗಿ ಪಂಚತಂತ್ರ 2.0 ರಲ್ಲಿಸದಸ್ಯರ ನಕಲಿ ಹೆಬ್ಬೆಟ್ಟುಗಳನ್ನು ತಾವೇ ನಮೂದಿಸಿ ಕೊಂಡು ಹಾಜರಾತಿ ಮಾಡಿ ಕೊಂಡು ಅಕ್ರಮವಾಗಿ ಸಾಮಾನ್ಯ ಸಭೆ ನಡೆಸಿ ಪಂಚತಂತ್ರದಲ್ಲಿನಮೂದಿಸಿರುವುದು, ಗ್ರಾಪಂ ಸದಸ್ಯರಿಗೆ ಸಭಾ ನೋಟಿಸ್ ಜಾರಿ ಮಾಡದಿರುವುದು, ಸಭೆ ನಡೆದಾಗ ದಾಖಲೆಗಳನ್ನು ಹಾಜರು ಪಡಿಸದಿರುವುದು, ಕರವಸೂಲಿಯಲ್ಲಿವಿಶೇಷಚೇತನರಿಗೆ ಮೀಸಲಿರಿರುವ ಶೇ.5ರಷ್ಟು ಅನುದಾವನ್ನು ದುರುಪಯೋಗ ಮಾಡಿರುವುದು ಸೇರಿದಂತೆ ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿಸಿಇಒ ಭಂವರ್ ಸಿಂಗ್ ಮೀನಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.