ವಿಕ ಸುದ್ದಿಲೋಕ ರಾಯಚೂರು ‘‘ಮಹಿಳೆಯರು ಎಚ್ ಪಿವಿ ಲಸಿಕೆ ಪಡೆಯುವ ಮೂಲಕ ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯ ನ್ನಾಗಿಸಲು ಸಹಕರಿಸಬೇಕು,’’ ಎಂದು ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದೂ ಹೇಳಿದರು. ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಜಿಲ್ಲಾಡಳಿತ, ಜಿ.ಪಂ., ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ14 ವರ್ಷದ ಹೆಣ್ಣು ಮಕ್ಕಳಿಗೆ ಎಚ್ ಪಿವಿ ಲಸಿಕೆ ವಿತರಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ‘‘ಮಹಿಳೆಯರು ಎದುರಿಸುತ್ತಿರುವ ಗಂಭೀರ ಅನಾರೋಗ್ಯ ಸಮಸ್ಯೆಗಳಲ್ಲಿಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ. 14 ವರ್ಷದ ಶಾಲಾ ಮಕ್ಕಳಿಗೆ ಸರಕಾರದಿಂದ ಲಸಿಕೆ ನೀಡುವ ಈ ಅಭಿಯಾನ 2 ಹಂತಗಳಲ್ಲಿನಡೆಯಲಿದೆ. ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿಲಸಿಕೆ ಪಡೆಯುವ ಮೂಲಕ ಗರ್ಭಕಂಠದ ಕ್ಯಾನ್ಸರ್ ದೂರ ಮಾಡಬೇಕು. ಲಸಿಕೆ ತೆಗೆದುಕೊಳ್ಳಲು ಯಾವುದೇ ಭಯ, ಆತಂಕ ಪಡಬಾರದು. ಜಿಲ್ಲೆಗೆ ನಿಗದಿಯಾದ ಗುರಿ ಸಾಧಿಸಲು ಸಹಕರಿಸಬೇಕು,’’ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಆರ್ ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್ . ಮಾತನಾಡಿ, ‘‘ಜಿಲ್ಲೆಯ ನಾನಾ ತಾಲೂಕುಗಳಲ್ಲಿ14 ವರ್ಷದ ಅಂದಾಜು 22 ಸಾವಿರ ಹುಡುಗಿಯರಿಗೆ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿಈ ಲಸಿಕೆ ಹಾಕಲಾಗುತ್ತದೆ. ಈ ಅಭಿಯಾನ ಮೂರು ತಿಂಗಳು ನಡೆಯಲಿದೆ’’ ಎಂದರು. ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು, ಡಿಡಿಪಿಐ ಕೆ.ಡಿ.ಬಡಿಗೇರ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮೃತ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಜ್ವಲ್ , ಮಕ್ಕಳ ತಜ್ಞರಾದ ಡಾ.ಇಮ್ರಾನ್ , ಡಾ.ಅನುಷಾ, ಐಎಂಎ ನ ಡಾ.ಶ್ರೀಲತಾ ಪಾಟೀಲ್ , ಡಾ.ತೃಪ್ತಿ, ವೈದ್ಯರಾದ ಡಾ.ಗುಂಡಮ್ಮ, ಡಾ.ಸುನೀಲ್ , ಡಾ.ಶ್ವೇತಾಂಬರಿ, ಡಾ.ಅಷ್ಪಾಕ್ ಹುಸೇನ್ , ಡಿಎಚ್ ಇಒ ಈಶ್ವರ ದಾಸಪ್ಪನವರ, ಶುಶ್ರೂಷಾಧಿಕಾರಿ ಸಲೋಮಿ, ಸಿಆರ್ ಪಿ ಮಾರೆಪ್ಪ ಬಲ್ಲಟಗಿ, ಬಿಎಚ್ ಇಒ ನಾಗರಾಜ್ , ಸರೋಜಾ ಕೆ., ಮುಖ್ಯೋಪಾಧ್ಯಾಯರಾದ ಈರಮ್ಮ, ಕವಿತಾ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸುರೇಶ್ , ಈರಮ್ಮ, ವಿಜಯಾ, ನಾನಾ ಶಾಲೆಯ ಮಕ್ಕಳು ಇದ್ದರು.

