ವಿಕ ಸುದ್ದಿಲೋಕ ಅಜ್ಜಂಪುರ
ಪಕ್ಷದ ಸಿದ್ಧಾಂತ, ಇತಿಹಾಸ, ವಿಕಾಸ, ಸಂಘಟನೆ, ಕಾರ್ಯಪದ್ಧತಿ, ಕೇಂದ್ರ ಸರಕಾರದ ಯೋಜನೆಗಳನ್ನು ತಿಳಿಸುವುದೇ ಪ್ರಶಿಕ್ಷಣ ಮಹಾಭಿಯಾನದ ಉದ್ದೇಶ ಎಂದು ಮಾಜಿ ಶಾಸಕ ಡಿ.ಎಸ್ .ಸುರೇಶ್ ಹೇಳಿದರು.
ಪಟ್ಟಣ ಸಮೀಪದ ಚಿಕ್ಕಾನವಂಗಲ ಗ್ರಾಮದಲ್ಲಿಕುಡ್ಲೂರು, ಅಜ್ಜಂಪುರ, ಶಿವನಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರಿಗೆ ಆಯೋಜಿಸಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-26ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕರ್ತರೇ ಬಿಜೆಪಿಯ ಶಕ್ತಿಯಾಗಿದ್ದು ಅವರಿಗೆ ಸಾಮಾಜಿಕ ಮಾಧ್ಯಮ, ಕೃತಕ ಬುದ್ಧಿಮತ್ತೆ, ನಮೋಸರಳ ಅಪ್ಲಿಕೇಷನ್ , ಬೂತ್ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ವಿಶೇಷ ತರಬೇತಿ ನೀಡುವುದರ ಮೂಲಕ ದೇಶದ ಎಲ್ಲಬೂತ್ ಗಳನ್ನು ಸಶಕ್ತಗೊಳಿಸುವುದು ನೂತನ ಅಧ್ಯಕ್ಷ ನಿತಿನ್ ನಬಿನ್ ಆಶಯ. ಅದರಂತೆ ತರೀಕೆರೆ ಮಂಡಲ ವತಿಯಿಂದ 2 ದಿನದ ತರಬೇತಿ ಆಯೋಜಿಸಲಾಗಿತ್ತು ಎಂದರು.
ಜಿಲ್ಲಾಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ ಮಾತನಾಡಿ, ಬೂತ್ ಮಟ್ಟದ ಪದಾಧಿಕಾರಿಗಳು ಯುವ ಮತದಾರರನ್ನು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಪಕ್ಷದ ಸಿದ್ಧಾಂತ, ಕಾರ್ಯೋದ್ದೇಶಗಳನ್ನು ಜನರಿಗೆ ತಲುಪಿಸಬೇಕೆಂದರು.
ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಡಾ.ಎ.ನರೇಂದ್ರ, ಪುಣ್ಯಪಾಲ್ , ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್ , ರೈತ ಮೋರ್ಚಾದ ದಿನೇಶ್ ಮುಗುಳುವಳ್ಳಿ, ಜಿಲ್ಲಾಉಪಾಧ್ಯಕ್ಷೆ ಸವಿತಾ ರಮೇಶ್ , ಜಿಲ್ಲಾಉಪಾಧ್ಯಕ್ಷ ಕನಕರಾಜ್ , ವಕೀಲೆ ಸಂಗೀತಾ ಪ್ರಸಾದ್ ತರಬೇತಿ ನೀಡಿದರು.
ಜಿ.ಪಂ. ಮಾಜಿ ಸದಸ್ಯರಾದ ಕೆ.ಆರ್ .ಆನಂದಪ್ಪ, ಎಂ.ಕೃಷ್ಣಮೂರ್ತಿ, ಎಸ್ .ಬಿ.ಆನಂದಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ.ಜಿ.ರೇವಣ್ಣ, ಸದಸ್ಯ ಬಿ.ರಂಗಸ್ವಾಮಿ, ಮಂಡಲ ಅಧ್ಯಕ್ಷ ಪ್ರತಾಪ್ , ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದೇಗೌv ಇತರರು ಇದ್ದರು.
10ಅಜ್ಜಂಪುರ02:
ಅಜ್ಜಂಪುರ ಸಮೀಪದ ಚಿಕ್ಕಾನವಂಗಲ ಗ್ರಾಮದಲ್ಲಿಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-26ರ ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಎಸ್ .ಸುರೇಶ್ ಉದ್ಘಾಟಿಸಿದರು.

