ಶರಾವತಿಯಲ್ಲಿತಡೆಬಿದ್ದರೂ ವರಾಹಿಯಲ್ಲಿಮುಂದುವರಿದ ಆತಂಕ
ವರಾಹಿ ಯೋಜನೆಗೆ ಕೇಂದ್ರದ್ದೆ ಕಾಮಗಾರಿ
ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ
್ಝakshಞಜಿka್ಞಠಿhak್ಠಞa್ಟ.ಚಿಟ್ಟaಜಿahಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಎರಡು ಹಂತದಲ್ಲಿತಡೆ ಎದುರಾದರೆ, ಅದೇ ಮಾದರಿಯ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಮಾರಕವಾದ ವರಾಹಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್ ) ಸಿದ್ಧವಾಗುತ್ತಿದೆ.
ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್ )ವು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯದ ಅಂಗ ಸಂಸ್ಥೆಯಾದ ಜಲ ಮತ್ತು ವಿದ್ಯುತ್ ಸಮಾಲೋಚನಾ ಸೇವಾ ಸಂಸ್ಥೆ(ಡಬ್ಲ್ಯೂಎಪಿಸಿಓಎಸ್ )ಗೆ ಜವಾಬ್ದಾರಿ ನೀಡಿದೆ. ಡಿಪಿಆರ್ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ್ ಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ರಾಜ್ಯ ಸರಕಾರವು ವಿದ್ಯುತ್ ಸ್ವಾವಲಂಬನೆ ಹಿನ್ನೆಲೆಯಲ್ಲಿರಾಜ್ಯದ ವಿವಿಧೆಡೆ ಪಂಪ್ ್ಡ ಸ್ಟೋರೇಜ್ , ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ ಕೇಂದ್ರದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(ಎನ್ ಟಿಪಿಸಿಎಲ್ )ದ ಅಂಗ ಸಂಸ್ಥೆಯಾದ ತೆಹ್ರಿ ಹೈಡ್ರೊ ಡೆವೆಲಪ್ ಮೆಂಟ್ ಕಾರ್ಪೋರೇಷನ್ (ಟಿಎಚ್ ಡಿಸಿಎಲ್ ) ಸಂಸ್ಥೆಯೊಂದಿಗೆ ಕೆಪಿಸಿಎಲ್ 15,000 ಕೋಟಿ ರೂ. ವೆಚ್ಚದ ಒಡಂಬಡಿಕೆ ಮಾಡಿಕೊಂಡಿದೆ. ಇದರಲ್ಲಿ1500 ಮೆ.ವ್ಯಾ ಸಾಮರ್ಥ್ಯದ 4,267.80 ಕೋಟಿ ರೂ. ವೆಚ್ಚದ ವರಾಹಿ ಪಂಪ್ ್ಡ ಸ್ಟೋರೇಜ್ ಯೋಜನೆ ಸಹ ಸೇರಿದೆ.
ಯೋಜನೆಯು ಮೂಕಾಂಬಿಕಾ ಮತ್ತು ಸೋಮೇಶ್ವರ ವನ್ಯಜೀವಿ ಧಾಮಗಳು, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ನಡುವೆ ಬರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್ ಬಿಡಬ್ಲ್ಯೂಎಲ್ )ಗೆ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಎನ್ ಬಿಡಬ್ಲ್ಯೂಎಲ್ ಹಲವು ಸುತ್ತಿನ ಸಭೆ ನಡೆಸಿ ಅಂತಿಮವಾಗಿ ಒಪ್ಪಿಗೆ ಸೂಚಿಸಿದೆ. ಇದಾದ ಬಳಿಕವೇ ಡಿಪಿಆರ್ ತಯಾರಿಸಲು ಟೆಂಡರ್ ನೀಡಲಾಗಿದೆ.
ಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಸ್ಥಳೀಯರಿಂದ ಅಲ್ಲದೆ ಪರಿಸರವಾದಿಗಳು, ತಜ್ಞರಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಎಲ್ಲಹಂತಗಳಲ್ಲೂಪ್ರತಿಭಟನೆ, ಹೋರಾಟಗಳು ನಡೆದಿದ್ದಲ್ಲದೆ ಕಾನೂನು ಹೋರಾಟದಲ್ಲೂಪರಿಸರವಾದಿಗಳು ಮುನ್ನಡೆ ಸಾಧಿಸಿದ್ದಾರೆ. ದೊಡ್ಡ ಹೋರಾಟದ ಮೂಲಕ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ತಜ್ಞರ ತಂಡ ಸ್ಥಳಕ್ಕೆ ಬರುವಂತೆ ಮಾಡಿದ್ದಲ್ಲದೆ ಅವರ ಮೂಲಕ ಯೋಜನೆಗೆ ಅನುಮತಿ ಬೇಡವೆಂದು ಶಿಫಾರಸ್ಸು ಕೊಡಿಸುವಲ್ಲೂಯಶಸ್ವಿಯಾಗಿದ್ದಾರೆ. ಅಲ್ಲದೆ ಕಾನೂನು ಹೋರಾಟದಲ್ಲೂಹೈಕೋರ್ಟ್ ನಲ್ಲಿಕಾಮಗಾರಿಗೆ ತಡೆಯಾಜ್ಞೆ ತಂದಿದ್ದಾರೆ.
ಕುತೂಹಲದ ಸಂಗತಿ ಎಂದರೆ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಕುಂದಾಪುರ ತಾಲೂಕು ಹೊಸಂಗಡಿ, ಮುಚ್ಚಟ್ಟು ಪ್ರದೇಶದಲ್ಲಿಅನುಷ್ಠಾನಗೊಳಿಸಲಾಗುತ್ತಿರುವ ವರಾಹಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಇದೂವರೆಗೆ ಸ್ಥಳೀಯರು ಮತ್ತು ಪರಿಸರವಾದಿಗಳಿಂದ ಪ್ರಭಾವಿ ಪ್ರತಿರೋಧ ವ್ಯಕ್ತವಾಗಿಲ್ಲ. ಮತ್ತೊಂದು ಕಡೆ ಈ ಯೋಜನೆಗೆ ಡಿಪಿಆರ್ ತಯಾರಿಕೆ ಅಲ್ಲದೆ ಕಾಮಗಾರಿ ಅನುಷ್ಠಾನದ ಜವಾಬ್ದಾರಿ ತೆಗೆದುಕೊಂಡಿರುವುದು ಸಹ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳೆ. ಹೀಗಾಗಿ ಯೋಜನೆಗೆ ಯಾವುದೇ ಅಡೆತಡೆ ಇಲ್ಲದಂತೆ ಸಿದ್ಧತೆಗಳು ನಡೆದಿವೆ.
--------------
ಹೊಸ ವಿದ್ಯುತ್ ಉತ್ಪಾದನಾ ಯೋಜನೆಗಳು
*2000 ಮೆ.ವ್ಯಾ. ಸಾಮರ್ಥ್ಯದ 10,240 ಕೋಟಿ ರೂ. ವೆಚ್ಚದ ಶರಾವತಿ ಪಂಪ್ ್ಡ ಸ್ಟೋರೇಜ್
*1500 ಮೆ.ವ್ಯಾ. ಸಾಮರ್ಥ್ಯದ 4267.80 ಕೋಟಿ ರೂ. ವೆಚ್ಚದ ವರಾಹಿ ಪಂಪ್ ್ಡ ಸ್ಟೋರೇಜ್
*ಬಿಡದಿಯಲ್ಲಿ20ಮೆ.ವ್ಯಾ. ಸಾಮಥ್ಯದ 97.3 ಕೋಟಿ ರೂ. ವೆಚ್ಚದ ಭೂ ಸ್ಥಾಪಿತ ಸೌರ ವಿದ್ಯುತ್ ಸ್ಥಾವರ
*ಆರ್ ಟಿಪಿಎಸ್ , ವೈಟಿಪಿಎಸ್ ಮತ್ತು ಬಿಟಿಪಿಎಸ್ ನಲ್ಲಿ100.1 ಸಾಮರ್ಥ್ಯದ 414.95 ಕೋಟಿ ರೂ. ವೆಚ್ಚದ ಭೂ ಸ್ಥಾಪಿತ ಸೌರ ವಿದ್ಯುತ್ ಸ್ಥಾವರ
*ಕದ್ರಾ ಜಲಾಶಯದಲ್ಲಿ100 ಮೆ.ವ್ಯಾ. ಸಾಮರ್ಥ್ಯದ ತೇಲುವ ಸೌರ ವಿದ್ಯುತ್ ಸ್ಥಾವರ
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಯೋಜನೆ
*ಪಾವಗಡ ಸೋಲಾರ್ ಪಾರ್ಕ್ನಲ್ಲಿಪ್ರಾಯೋಗಿಕವಾಗಿ 6.5 ಮೆ.ವ್ಯಾ ಸಾಮರ್ಥ್ಯದ ಬ್ಯಾಟರಿ ಶೇಖರಣೆ ವ್ಯವಸ್ಥೆ(ಬಿಇಎಸ್ ಎಸ್ ) ಸ್ಥಾಪನೆ
*ಪಾವಗಡ ಸೋಲಾರ್ ಪಾರ್ಕ್ನ ಸಾಮರ್ಥ್ಯವನ್ನು 2050 ಮೆ.ವ್ಯಾ.ನಿಂದ 2350 ಮೆ.ವ್ಯಾ.ಗೆ ವೃದ್ಧಿಸುವುದು
*ಕಲಬುರಗಿಯಲ್ಲಿ100ಮೆ.ವ್ಯಾ.ನ ಬಿಇಎಸ್ ಎಸ್ ಸ್ಥಾಪನೆ
*ಪಾವಗಡದಲ್ಲಿ2000 ಸಾಮರ್ಥ್ಯದ ಬಿಇಎಸ್ ಎಸ್ ಸ್ಥಾಪನೆ.
------------------
ಸಾಂದರ್ಭಿಕ ಚಿತ್ರ: 12ಎಸ್ ಎಂಜಿ50

