ಗ್ರಾಮ ಒನ್ ಕೇಂದ್ರಕ್ಕೆ ಅರ್ಜಿ ಆಹ್ವಾನ

Contributed bypramod.harikant@timesofindia.com|Vijaya Karnataka

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 53 ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಗ್ರಾಮ ಒನ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅಂಕೋಲಾ, ಭಟ್ಕಳ, ದಾಂಡೇಲಿ, ಹಳಿಯಾಳ, ಹೊನ್ನಾವರ, ಕಾರವಾರ, ಕುಮಟಾ, ಮುಂಡಗೋಡ, ಸಿದ್ದಾಪುರ, ಶಿರಸಿ, ಜೋಯಿಡಾ, ಯಲ್ಲಾಪುರ ತಾಲೂಕುಗಳ ಗ್ರಾಮಗಳು ಇದರಲ್ಲಿ ಸೇರಿವೆ. ಆಸಕ್ತರು ನಿಗದಿತ ವೆಬ್‌ಸೈಟ್ ಮೂಲಕ ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಹಸೀಲ್ದಾರ್ ಕಚೇರಿ ಸಂಪರ್ಕಿಸಬಹುದು.

application invited for 53 grama one centers in uttara kannada district

(ಇಂಗ್ಲಿಷ್ ಅಕ್ಷರಗಳಿವೆ)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 53 ಗ್ರಾಮ ಪಂಚಾಯಿತಿಗಳಲ್ಲಿಸಮಗ್ರ ನಾಗರಿಕ ಸೇವೆ ಒದಗಿಸುವ ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಕೋಲಾ ತಾಲೂಕಿನ ಅಗಸೂರ, ಅಲಗೇರಿ, ಬೆಳಂಬರ, ಬೆಳಸೆ; ಭಟ್ಕಳ ತಾಲೂಕಿನ ಕೊಪ್ಪಾ, ಮಾವಿನಕುರ್ವೆ; ದಾಂಡೇಲಿ ತಾಲೂಕಿನ ಆಲೂರ, ಅಂಬೇವಾಡಿ, ಅಂಬಿಕಾನಗರ; ಹಳಿಯಾಳ ತಾಲೂಕಿನ ಬೆಳವಟಗಿ, ಯಾಡೋಗಾ; ಹೊನ್ನಾವರ ತಾಲೂಕಿನ ಚಿಕ್ಕನಕೊಡ, ಕೆಳಗಿನೂರ, ಕೊಡಾಣಿ, ಮುಗ್ವಾ, ನಗರಬಸ್ತಿಕೇರಿ, ಉಪೊ್ಪೕಣಿ; ಕಾರವಾರ ತಾಲೂಕಿನ ಚೆಂಡಿಯಾ, ಘಡಸಾಯಿ, ಕೆರವಡಿ; ಕುಮಟಾ ತಾಲೂಕಿನ ಅಲಕೊಡ, ಬರ್ಗಿ, ದೀವಗಿ, ಕಲಾಭಾಗ, ಮಿರ್ಜಾನ, ಮುರೂರ, ಸೊಪ್ಪಿನಹಳ್ಳಿ; ಮುಂಡಗೋಡ ತಾಲೂಕಿನ ಚವಡಳ್ಳಿ, ಗುಂಜಾವತಿ, ಇಂದೂರ, ಕಾತೂರ, ಮೈನಳ್ಳಿ, ನಾಗನೂರ, ನಂದಿಕಟ್ಟಾ; ಸಿದ್ದಾಪುರ ತಾಲೂಕಿನ ಅನಲೆಬೈಲ್ , ಹಲಗೇರಿ, ಇಟಗಿ, ಮಾನಮನೆ, ನಿಲ್ಕುಂದ; ಶಿರಸಿ ತಾಲೂಕಿನ ಭೈರುಂಬೆ, ಬಿಸಲಕೊಪ್ಪ, ಮಂಜಗುಣಿ, ಹುಲೆಕಲ್ , ನೆಗ್ಗು, ಸಾಲ್ಕಣಿ, ಸುಗಾವಿ; ಜೋಯಿಡಾ ತಾಲೂಕಿನ ಗಂಗೋಡಾ, ಅಣಶಿ, ಬಂಜಾರ್ ಕುನಂಗ್ , ಶಿಂಗಾರಗಾಂವ, ನಾಗೋಡಾ, ಉಳವಿ; ಯಲ್ಲಾಪುರ ತಾಲೂಕಿನ ನಂದೋಳ್ಳಿ ಸೇರಿದಂತೆ ಒಟ್ಟು 53 ಗ್ರಾಮ ಪಂಚಾಯಿತಿಗಳಲ್ಲಿಹೊಸದಾಗಿ 53 ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು *kಣಣಠಿ*://*hñಚಿ*åಟಿಜO*hಡಿñåಛಿh*.ಞಚಿಡಿಟಿಚಿಣಚಿಞಚಿ.Ãsñ.åಟಿ* ಮೂಲಕ ಮಾ.15 ರೊಳಗಾಗಿ ಅರ್ಜಿಸಲ್ಲಿಸಬಹುದು. ಮಾಹಿತಿಗಾಗಿ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿ ಸಂಪರ್ಕಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.