13ಮಹೇಶ2
ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಾಳೆ
ವಿಕ ಸುದ್ದಿಲೋಕ ಧಾರವಾಡ
ವಿದ್ಯಾಗಿರಿ ಉಪನಗರ ಹಿಂದೂ ಸಮಾಜೋತ್ಸವ ಸಮಿತಿಯಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಮಾ. 15ರಂದು ಸಂಜೆ 5.30ಕ್ಕೆ ನಗರದ ಗಾಂಧಿನಗರ ಮೈದಾನದಲ್ಲಿಆಯೋಜಿಸಲಾಗಿದೆ ಎಂದು ವಿದ್ಯಾಗಿರಿ ಉಪನಗರ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಪರ್ಡೆ ಹೇಳಿದರು.
ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾರ್ಯಕ್ರಮದಲ್ಲಿದೇವರಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀ ನಾಗಭೂಷಣ ಶಿವಯೋಗಿಗಳು ಹಾಗೂ ಗರಗ ಶ್ರೀ ಜ.ಮಡಿವಾಳೇಶ್ವರ ಕಲ್ಮಠ ಉತ್ತರಾಧಿಕಾರಿ ಶ್ರೀ ಆತ್ಮಾರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತದ ಜೇಷ್ಠ ಪ್ರಚಾರಕ ಸು. ರಾಮಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಮಾ. 15ರಂದು ಮಧ್ಯಾಹ್ನ 3ಕ್ಕೆ ಎರಡು ಮಾರ್ಗಗಳಲ್ಲಿಶೋಭಾಯಾತ್ರೆ ನಡೆಯಲಿದ್ದು, ಮೊದಲ ಶೋಭಾಯಾತ್ರೆ ನಗರದ ಕೆಇಬಿ ಗಣಪತಿ ದೇವಸ್ಥಾನದಿಂದ ಗಾಂಧಿನಗರ ಕ್ರಾಸ್ , ಗಾಂಧಿನಗರ ಈಶ್ವರ ದೇವಸ್ಥಾನ, ಗಾಂಧಿನಗರ 5ನೇ ಕ್ರಾಸ್ (ಸಾಯಿ ಗಂಗಾ ಅಪಾಟ್ರ್ಮೆಂಟ್ ) ರುಟ್ಸಟ್ ರಸ್ತೆಯಿಂದ ಮಾರ್ಗವಾಗಿ ಗಾಂಧಿನಗರ ಮೈದಾನ ತಲುಪುವುದು. ಜತೆಗೆ ಇನ್ನೊಂದು ಮಾರ್ಗದಿಂದ ಬರುವ ಶೋಭಾಯಾತ್ರೆ ವರಸಿದ್ದಿ ವಿನಾಯಕ ದೇವಸ್ಥಾನ ರಜತಗಿರಿಯಿಂದ ವಾಟರ್ ಟ್ಯಾಂಕ್ , ಯಲ್ಲಮ್ಮ ದೇವಿ ಸೊಸೈಟಿ ರಸ್ತೆ, ಬಂಡೆಮ್ಮ ಗುಡಿ ಮಾರ್ಗವಾಗಿ ಗಾಂಧಿನಗರ 5ನೇ ಕ್ರಾಸ್ (ಸಾಯಿ ಗಂಗಾ ಅಪಾಟ್ರ್ಮೆಂಟ್ ) ರುಟ್ಸಟ್ ರಸ್ತೆಯಿಂದ ಮಾರ್ಗವಾಗಿ ಗಾಂಧಿನಗರ ಮೈದಾನ ತಲುಪಲಿದೆ.
ಕಾರ್ಯಕ್ರಮ ನಂತರ ಎಲ್ಲರಿಗು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿಗುರುರಾಜ ಹುನಸಿಮರದರ, ಎಂ.ಬಿ.ಪಾಟೀಲ್ , ಚಂದ್ರೀಕಾ ದೇಶಪಾಂಡೆ ಇದ್ದರು.

