ಮತಪಟ್ಟಿ ಪರಿಷ್ಕರಣೆಗೆ ಗಡುವು

Contributed byravi.gosavi@timesofindia.com|Vijaya Karnataka

ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಎಸ್‌ಐಆರ್‌ ಮ್ಯಾಪಿಂಗ್‌ ಕಾರ್ಯವನ್ನು ಭಾನುವಾರದೊಳಗೆ ಪೂರ್ಣಗೊಳಿಸಲು ಸಚಿವರು ಸೂಚಿಸಿದ್ದಾರೆ. ಕನಿಷ್ಠ ಶೇ.90ರಷ್ಟು ಮ್ಯಾಪಿಂಗ್‌ ಆಗಬೇಕು. ತಹಸೀಲ್ದಾರರು ವೈಯಕ್ತಿಕ ಆಸಕ್ತಿ ವಹಿಸಿ ಸರ್ವೆ ತ್ವರಿತಗೊಳಿಸಬೇಕು. ಇದುವರೆಗೆ ಶೇ.73.44ರಷ್ಟು ಪ್ರಗತಿಯಾಗಿದೆ. ಬಾಕಿ ಕಾರ್ಯ ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ.

deadline for voter list revision ministers instructions to officials

- ಜವಾಬ್ದಾರಿ ನಿರ್ವಹಿಸಲು ತಹಸೀಲ್ದಾರರಿಗೆ ಸಚಿವರ ಸೂಚನೆ

ವಿಕ ಸುದ್ದಿಲೋಕ ಬೆಳಗಾವಿ

ಜಿಲ್ಲೆಯಲ್ಲಿಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಎಸ್ ಐಆರ್ ಮ್ಯಾಪಿಂಗ್ ಪ್ರಕ್ರಿಯೆಯನ್ನು ಇದೇ ಭಾನುವಾರದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಗಡುವು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿಮಾತನಾಡಿದ ಅವರು, ‘‘ಜಿಲ್ಲೆಯಲ್ಲಿಕನಿಷ್ಠ ಶೇ.90ರಷ್ಟು ಎಸ್ ಐಆರ್ ಮ್ಯಾಪಿಂಗ್ ಕಾರ್ಯ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿಎಲ್ಲತಹಸೀಲ್ದಾರರು ವೈಯಕ್ತಿಕ ಆಸಕ್ತಿ ವಹಿಸಿ ಸರ್ವೆ ಕಾರ್ಯ ತ್ವರಿತಗತಿಯಲ್ಲಿಪೂರ್ಣಗೊಳಿಸಬೇಕು,’’ ಎಂದು ಸೂಚಿಸಿದರು.

ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಜಿಲ್ಲಾಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ತಹಸೀಲ್ದಾರರು ಹಾಗೂ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.

* ಬಾಕ್ಸ್

ಶೇ.73ರಷ್ಟು ಪ್ರಗತಿ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ‘‘ಜಿಲ್ಲೆಯಲ್ಲಿಈವರೆಗೆ ಶೇ.73.44 ರಷ್ಟು ಎಸ್ ಐಆರ್ ಮ್ಯಾಪಿಂಗ್ ಪೂರ್ಣಗೊಂಡಿದೆ. ಬೆಳಗಾವಿ ನಗರ ಪ್ರದೇಶದಲ್ಲಿಶೇ.84.26 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಉಳಿದಿರುವ ಶೇ.16 ರಷ್ಟು ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವೆಗೆ ಸ್ಪಂದಿಸದವರು ಅಥವಾ ಬೇರೆಡೆ ವಲಸೆ ಹೋಗಿರುವವರನ್ನು ಪತ್ತೆಹಚ್ಚಿ, ಅಂತಹವರಿಗೆ ನೋಟಿಸ್ ನೀಡಿ ನಿಯಮಾನುಸಾರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕ್ರಮ ಕೈಗೊಳ್ಳಬೇಕು,’’ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

*ಫೋಟೋ-13ರವಿಜಿ5

ಜಿಲ್ಲಾಧಿಕಾರಿ ಕಚೇರಿಯಲ್ಲಿನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು.