ವೀರಶೈವ ಲಿಂಗಾಯತರ ಪರಂಪರೆ ಹಿರಿದು

Contributed byvenkatesh.pavitra@gmail.com|Vijaya Karnataka

ಅಜ್ಜಂಪುರ ಸಮೀಪದ ಮೆಣಸಿನಕಾಯಿ ಹೊಸಹಳ್ಳಿ ಗ್ರಾಮದಲ್ಲಿ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿತು. ವೀರಶೈವ ಲಿಂಗಾಯತರ ಪರಂಪರೆ ಹಿರಿದು ಎಂದು ಗುರುಮೂರ್ತಿ ಶಿವಾಚಾರ್ಯರು ತಿಳಿಸಿದರು. ಬಸವಣ್ಣನವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಯುವಕರಿಗೆ ಕಿವಿಮಾತು ಹೇಳಿದರು. ಗುರುಸಿದ್ಧರಾಮೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಎಂ.ಸಿ. ಶಿವಾನಂದಸ್ವಾಮಿ ಕರೆ ನೀಡಿದರು. ಗ್ರಾಮದ ಯುವಕರು ಉತ್ತಮ ಕೆಲಸ ಮಾಡಿದ್ದಾರೆ.

unveiling of basavannas statue unification of veerashaiva lingayat community

ವೀರಶೈವ ಲಿಂಗಾಯತರ ಪರಂಪರೆ ಹಿರಿದು

ವಿಕ ಸುದ್ದಿಲೋಕ ಅಜ್ಜಂಪುರ

ಈ ನೆಲದಲ್ಲಿವೀರಶೈವ ಲಿಂಗಾಯತರ ಪರಂಪರೆ ಶತಮಾನಗಳಷ್ಟು ಪ್ರಾಚೀನವಾದದ್ದು ಎಂದು ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರು ಹೇಳಿದರು.

ಪಟ್ಟಣ ಸಮೀಪದ ಮೆಣಸಿನಕಾಯಿ ಹೊಸಹಳ್ಳಿ ಗ್ರಾಮದಲ್ಲಿಮಂಗಳವಾರ ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಜಗಜ್ಯೋತಿ ಬಸವೇಶ್ವರರು ಇವನಾರವ, ಇವನಾರವ, ಇವನಮ್ಮವ, ಇವನಮ್ಮವ ಎಂದೆಣಿಸಯ್ಯ ಕೂಡಲಸಂಗಮದೇವ ಎಂದು ಹೇಳುವ ಮೂಲಕ ವೀರಶೈವ ಲಿಂಗಾಯತರೆಲ್ಲರನ್ನು ಒಗ್ಗೂಡಿಸಲು ಸಾಣೆ ಹಿಡಿದು ಮತ್ತಷ್ಟು ಹೊಳಪು ಮಾಡಿದರು. ಗ್ರಾಮದ ಯುವಕರು ಮಾಡಿರುವ ಪುತ್ಥಳಿ ಅನಾವರಣ ಒಳ್ಳೆಯ ಕೆಲಸ. ಜತೆಗೆ ಬಸವಣ್ಣನವರ ಒಂದಿಷ್ಟು ವಿಚಾರಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಂಡು ಸಮಾಜ ಮತ್ತು ಊರಿನ ಗೌರವವನ್ನು ಕಾಪಾಡಬೇಕೆಂದರು.

ಜಿಲ್ಲಾಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ನಾವೆಲ್ಲರೂ ಇತಿಹಾಸವನ್ನು ಮೆಲುಕು ಹಾಕುತ್ತಾ ಮುನ್ನಡೆಯಬೇಕು. ಮಳೆಯ ದೇವರೆಂದು ಹೆಸರಾಗಿರುವ ಗುರುಸಿದ್ಧರಾಮೇಶ್ವರರನ್ನು ಊರಿಗೆ ಕರೆತಂದು, ಗ್ರಾಮದೇವತೆ ಚೌಡೇಶ್ವರಿಯೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸುತ್ತೇವೆ. ಇಂತಹ ಜಾತ್ರೆಗೆ ಗ್ರಾಮದ ಹಿರಿ ಕಿರಿಯರೊಂದಿಗೆ ಮಹಿಳೆಯರಿಗೆ ತವರಿಗೆ ಬರುವ ಭಾಗ್ಯ ಸಿಕ್ಕುತ್ತದೆ. ಇಂತಹ ಭಾಗ್ಯವಂತರಲ್ಲಿನಾನು ಕೂಡ ಒಬ್ಬ. ನಮ್ಮ ಆರಾಧ್ಯದೈವ ಗುರುಸಿದ್ಧರಾಮೇಶ್ವರರ ಪುತ್ಥಳಿ ನಿರ್ಮಿಸಲು ಮುಂದಾಗೋಣ ಎಂದರು.

ಶಿವಯೋಗಿ ಯುವಕರ ಬಳಗದ ಅಧ್ಯಕ್ಷ ಎಂ.ಎನ್ .ನಿರಂಜನ್ , ನಿವೃತ್ತ ಉಪನ್ಯಾಸಕ ಎಂ.ಈಶ್ವರಪ್ಪ ಇತರರು ಇದ್ದರು.

11ಅಜ್ಜಂಪುರ01: ಅಜ್ಜಂಪುರ ಪಟ್ಟಣ ಸಮೀಪದ ಮೆಣಸಿನಕಾಯಿ ಹೊಸಹಳ್ಳಿ ಗ್ರಾಮದಲ್ಲಿಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಲಾಯಿತು.