ಸರಳ ಸಹಜ ಜೀವನ ಸಮತೋಲಿತ
ವಿಕ ಸುದ್ದಿಲೋಕ ಅಜ್ಜಂಪುರ
ಯಾಂತ್ರಿಕ ಬದುಕಿನಲ್ಲಿಸಮತೋಲಿತ ಜೀವನ ಸಾಧನೆಯು ಸವಾಲಾಗಿದೆ ಎಂದು ಪ್ರಾಧ್ಯಾಪಕ ಡಾ.ಎನ್ .ಎಲ್ . ಆನಂದ ಹೇಳಿದರು.
ತಾಲೂಕಿನ ನಾಗವಂಗಲದ ಯೋಗವನದಲ್ಲಿಪತಂಜಲಿ ಯೋಗ ಚಿಕಿತ್ಸಾ ಕೇಂದ್ರದ ವತಿಯಿಂದ ‘ಜೀವನದಲ್ಲಿಸಮತೋಲನ-ನಿಜವಾದ ಯಶಸ್ಸು’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಮಾತನಾಡಿದರು.
ಜೀವನದಲ್ಲಿಸಮತೋಲನ ಎಂಬುದು ಎಲ್ಲವಿಚಾರಗಳಲ್ಲಿನ ಸ್ಥಿರತೆ ಮತ್ತು ಸಾಮರಸ್ಯವನ್ನು ಕಂಡುಕೊಳ್ಳುವ ಕೌಶಲವಾಗಿದ್ದು, ಬದುಕಿನಲ್ಲಿಮಿತಿಗಳನ್ನು ನಿಗದಿಪಡಿಸುವ, ಉತ್ತಮ ಆಯ್ಕೆ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ, ಸಕಾರಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಸಮತೋಲಿತ ಬದುಕು ಸಾಧಿಸಬಹುದು. ಸಹಜತೆ ಮತ್ತು ಸರಳತೆಯನ್ನು ಬದುಕಲ್ಲಿರೂಢಿಸಿಕೊಳ್ಳುವುದರ ಮೂಲಕ ಸಮತೋಲನ ಸಾಧಿಸಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್ .ಎ.ಬಿಪಿನ್ ಕುಮಾರ್ , ಆಧುನಿಕ ಜಗತ್ತಿನಲ್ಲಿಸಾಧನೆಯೆಂದರೆ, ಕೇವಲ ಹಣ, ಆಸ್ತಿಗಳ ಸಂಪಾದನೆ ಎಂಬ ಭ್ರಮೆಯಲ್ಲಿದ್ದೇವೆ. ಆದರೆ, ಸಾವಿರಾರು ಕೋಟಿ ಸಂಪತ್ತಿನ ಒಡೆಯರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಾಸ್ತವವನ್ನು ಜಗತ್ತಿಗೆ ಸಾರುತ್ತಿದೆ. ಹಾಗಾಗಿ, ನಿಜವಾದ ಯಶಸ್ಸೆಂದರೆ, ಬದುಕಲ್ಲಿಸೋಲು-ಗೆಲುವು, ದ್ವೇಷ-ಪ್ರೀತಿ, ಕೆಲಸ-ಕುಟುಂಬಗಳ ನಡುವೆ ಸಮತೋಲನ ಸಾಧಿಸುವುದಾಗಿದೆ ಎಂದರು.
ಮುಖಂಡ ಎ.ಟಿ.ಶ್ರೀನಿವಾಸ್ ಮಾತನಾಡಿ, ಸಮತೋಲಿತ ಜೀವನವೆಂಬುದು ಹಗ್ಗದ ಮೇಲಿನ ನಡಿಗೆಯಾಗಿದ್ದು, ಒಳ್ಳೆಯ ಅಭ್ಯಾಸಗಳು ಮತ್ತು ಅನುಭವಗಳಿಂದ ದೊರೆಯುವ ಕಲಿಕೆಯ ಮೂಲಕ ಅಸಮತೋಲನ ತಪ್ಪಿಸಬಹುದೆಂದರು.
ಯೋಗಸಾಧಕ ವಾಗೇಶ್ , ನಮ್ಮಲ್ಲಿನಿತ್ಯ ಎದುರಾಗುವ ಆರ್ಥಿಕ ಬಿಕ್ಕಟ್ಟುಗಳು, ಆರೋಗ್ಯ ಸಮಸ್ಯೆಗಳು, ಅನಾರೋಗ್ಯಕರ ಜೀವನ ಶೈಲಿಯಿಂದ ಬದುಕು ದುಸ್ತರವೆನಿಸುತ್ತದೆ. ಸೂಕ್ತ ನಿದ್ರೆ, ಸಮತೋಲಿತ ಆಹಾರ, ವ್ಯಾಯಾಮ, ಆರ್ಥಿಕ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಕಾಪಾಡಿಕೊಳ್ಳುವುದರ ಮೂಲಕ ಬದುಕನ್ನು ಚಂದವಾಗಿಟ್ಟುಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಜುನಾಥ್ , ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕಾರ ನೀಡಿ, ಸಮಸ್ಯೆಗಳನ್ನು ಎದುರಿಸುವ ಕೌಶಲಗಳನ್ನು ಬೆಳೆಸುವ ಮೂಲಕ ಮಕ್ಕಳನ್ನು ಸಶಕ್ತರನ್ನಾಗಿ ಮಾಡಬಹುದೆಂದರು.
ಯೋಧ ಕುಮಾರಸ್ವಾಮಿ, ಜಯಲಕ್ಷಿ ್ಮ, ಗೀತಾ, ವೀಣಾ, ಯೋಗಗುರು ಪ್ರಸಾದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
11ಅಜ್ಜಂಪುರ03:
ಅಜ್ಜಂಪುರ ತಾಲೂಕಿನ ನಾಗವಂಗಲದ ಯೋಗವನದಲ್ಲಿಪತಂಜಲಿ ಯೋಗ ಚಿಕಿತ್ಸಾ ಕೇಂದ್ರದ ವತಿಯಿಂದ ‘ಜೀವನದಲ್ಲಿಸಮತೋಲನ - ನಿಜವಾದ ಯಶಸ್ಸು ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

