ವಿಕ ಸುದ್ದಿಲೋಕ ಶ್ರೀನಿವಾಸಪುರ
ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಏರ್ಪಡಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಸದ್ಬಳಕೆ ಮಾಡಿಕೊಂಡು ಆರೋಗ್ಯ ಮತ್ತು ಆರ್ಥಿಕ ಸಬಲರಾಗಬೇಕೆಂದು ಆರ್ಟಿಒ ಪಿ.ಕೃಷ್ಣಾನಂದ ತಿಳಿಸಿದರು.
ತಾಲೂಕಿನ ದಳಸನೂರು ಹೋಬಳಿ ಗಾಂಡ್ಲಹಳ್ಳಿ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿಕಂಕರಿ ಮಹಿಳಾ ಸೇವಾ ಸಂಸ್ಥೆ ಮತ್ತು ಟ್ರೀನಿಟಿ ಕೇರ್ ಪೌಂಡೇಷನ್ ಹಾಗೂ ದಳಸನೂರು ಸರಕಾರಿ ಆರೋಗ್ಯ ಪ್ರಾಥಮಿಕ ಕೇಂಧ್ರದ ಆಶ್ರಯದಲ್ಲಿಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಆರೋಗ್ಯವೇ ನಿಜವಾದ ಸಂಪತ್ತು. ಗ್ರಾಮೀಣ ಜನರು ತಮ್ಮ ಕೆಲಸಗಳ ಒತ್ತಡಗಳಲ್ಲಿಆರೋಗ್ಯದ ಬಗ್ಗೆ ಗಮನಹರಿಸದೆ ಆರೋಗ್ಯ ಕ್ಷೀಣಿಸಿದ ಕೊನೆ ಕ್ಷಣದಲ್ಲಿಕಷ್ಟ ಅನುಭವಿಸುತ್ತಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದ್ಬಳಕೆ ಮಾಡಿಕೊಂಡು ವೈದ್ಯಕೀಯ ಸೇವೆ ಪಡೆದು ಆರೋಗ್ಯವಂತರಾಗಿ. ನುರಿತ ತಜ್ಞರಿಂದ ಶಿಬಿರ ನಡೆಲಾಗುತ್ತಿದೆ. ಕಾಯಿಲೆಗಳು ಬಂದಾಗ ಆಸ್ಪತ್ರೆಗಳಿಗೆ ಹೋಗಿ ದುಪ್ಪಟ್ಟು ಹಣ ವೆಚ್ಚ ಮಾಡುವುದು ಬೇಡ. ನಾನಾ ಕಾಯಿಲೆಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಲು ವೈದ್ಯರು ಬಂದಿದ್ದಾರೆ. ಅದರ ಪ್ರಯೋಜನ ಪಡೆಯಿರಿ ಎಂದರು.
ಕಂಕರಿ ಮಹಿಳಾ ಸೇವಾ ಸಂಸ್ಥೆ ಅಧ್ಯಕ್ಷೆ ಪವಿತ್ರಾ ರಾಮೇಗೌಡ ಮಾತನಾಡಿ, ನಮ್ಮ ಸಂಸ್ಥೆಯಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹಲವು ಉಚಿತ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಈ ಹಿಂದೆ ಮಹಿಳೆಯರಿಗೆ ಕ್ಯಾನ್ಸರ್ ಮತ್ತು ಶುಶ್ರೂಷೆ ಉಚಿತ ಕ್ಯಾಂಪ್ ಇದೇ ಗ್ರಾಮದಲ್ಲಿಹಮ್ಮಿಕೊಂಡು ಜನರಿಗೆ ಆರೋಗ್ಯ ಸೇವೆ ನೀಡಲಾಗಿತ್ತು. ಈಗ ಮತ್ತೆ ನಾವು ಇಂತಹ ಕ್ಯಾಪ್ ಮಾಡುತ್ತಿದ್ದೇವೆ. ಚಿಕ್ಕ ಮಕ್ಕಳಿಗೆ ಮೊಬೈಲ್ ಗಳು ಕೊಟ್ಟು ಅವರು ಅದಕ್ಕೆ ಅಡಿಕ್ಟ್ ಆಗಿ ಅವರಲ್ಲಿಖಿನ್ನತೆ ಹೆಚ್ಚಾಗುತ್ತಿದೆ. ದಢೂತಿಯಾಗಿ ನಾನಾ ಕಾಯಿಲೆಗಳು ಬರುತ್ತಿವೆ. ಪೋಷಕರ ಮೇಲೆ ಗಲಾಟೆ ಮಾಡುತ್ತಿರುತ್ತಾರೆ. ಹಿರಿಯರಲ್ಲಿಶುಗರ್ , ಬಿಪಿ, ತೂಕ ಹೆಚ್ಚಾಗಿ ಅವರು ಕೆಲಸ ಇಲ್ಲದೆ ಮನೆಯಲ್ಲಿರುವವರ ಮೇಲೆ ಗಲಾಟೆ ಮಾಡಿ ಮಧ್ಯ ವಯಸ್ಕರಿಗೆ ಕಿರಿಕಿರಿ ಉಂಟಾಗಿ ಸಂಬಂಧಗಳು ಕ್ಷೀಣಿಸುತ್ತಿವೆ. ಪ್ರತಿ ವ್ಯಕ್ತಿಗೆ ದುಡಿಮೆ ಇದ್ದರೆ ಆರೋಗ್ಯ ತಾನೇತಾನಾಗಿ ಸರಿಯಾಗಿರುತ್ತದೆ. ಹಿರಿಯರು, ಮಕ್ಕಳಿಗೆ ಮೊಬೈಲ್ ಕೊಡುವ ಅಭ್ಯಾಸ ಮಾಡಬೇಡಿ ಎಂದು ತಿಳಿಸಿದರು.
ಡಾ.ರಾಮೇಗೌಡ ಮಾತನಾಡಿ, ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲರೀತಿಯ ಕಾಯಿಲೆಗಳ ನಿವಾರಣೆಗೆ ಔಷಧಗಳಿಲ್ಲದೆ ಆರೋಗ್ಯ ಸದೃಢವಾಗಿಟ್ಟಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಒಂದೇ ಅಲ್ಲಾ, ನಾನಾ ರೀತಿಯ ನರನಾಡಿಗಳ ಮೇಲೆ ಒತ್ತಡಗಳು ಹೆಚ್ಚಾಗಿ ಧೃತಿಗೆಡುತ್ತಿದ್ದಾರೆ. ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಟ್ಟು, ವ್ಯಾಯಾಮ ಮಾಡಬೇಕು. ಈ ಶಿಬಿರದಲ್ಲಿ310 ಮಂದಿ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡಿದ್ದಾರೆಂದು ತಿಳಿಸಿದರು.
ಆರೋಗ್ಯಾಧೀಖಾರಿ ಬಾಬಾ ಜಾನ್ , ಟೋನಿ ಥಾಮಸ್ , ಧನಂಜಯ, ಸೇಂದಿಲ್ ಕುಮಾರ್ , ಎಂ.ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಕೆ.ಎಚ್ .ಸಂಪತ್ ಕುಮಾರ್ , ಎಂ.ನಂಜುಂಡೇಗೌಡ, ಎಂ.ನಾಗರಾಜ್ ಗೌಡ, ವೆಂಕಟೇಶಗೌಡ, ಬಚ್ಚೇಗೌಡ ಹಾಜರಿದ್ದರು.
12 ಶ್ರೀನಿವಾಸಪುರ 1: ಯಲ್ದೂರು ಬಸ್ ನಿಲ್ದಾಣದಲ್ಲಿನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪಿ.ಕೃಷ್ಣಾನಂದ ಚಾಲನೆ ನಿಡಿದರು.

