ಲೀಡ್ ಸುದ್ದಿಗೆ ಬಾಕ್ಸ್ ....

Contributed bymudholvk@gmail.com|Vijaya Karnataka

ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧದಿಂದ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಇದಕ್ಕೆ ಪರ್ಯಾಯವಾಗಿ ಎಥಿನಾಲ್‌ ಸ್ಟೋ ಬಳಕೆಯನ್ನು ಸರಕಾರ ಪ್ರೋತ್ಸಾಹಿಸಬೇಕು ಎಂದು ಮುರುಗೇಶ ನಿರಾಣಿ ಹೇಳಿದ್ದಾರೆ. ಈ ಸ್ಟೋ ಪರಿಸರ ಸ್ನೇಹಿ ಮತ್ತು ಸುರಕ್ಷಿತವಾಗಿದ್ದು, ಕಬ್ಬು, ಮೆಕ್ಕೆಜೋಳದಿಂದ ಎಥಿನಾಲ್‌ ಉತ್ಪಾದಿಸಬಹುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ.

government encouraged to promote ethanol stove use an alternative fuel for a prosperous nation

ಎಥಿನಾಲ್ ಸ್ಟೋ ಬಳಕೆಗೆ ಪ್ರೋತ್ಸಾಹಿಸಿ

ಮುಧೋಳ: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರಣದಿಂದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿಕೊರತೆ ಉಂಟಾಗಿದ್ದು, ಪರ್ಯಾಯವಾಗಿ ಎಥಿನಾಲ್ ಸ್ಟೋ ಬಳಕೆಗೆ ಸರಕಾರ ಪ್ರೋತ್ಸಾಹಿಸಬೇಕು ಎಂದು ನಿರಾಣಿ ಉದ್ಯಮ ಸಮೂಹದ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ನಗರದಲ್ಲಿಪತ್ರಿಕಾ ಹೇಳಿಕೆ ನೀಡಿದ ಅವರು, ಕೆರೋಸಿನ್ ಸ್ಟೋ ಮಾದರಿಯಲ್ಲಿಎಥಿನಾಲ್ ಸ್ಟೋ ಅಭಿವೃದ್ಧಿಪಡಿಸಲಾಗಿದೆ. ಇದು ಸರಳ ತಂತ್ರಜ್ಞಾನ ಹೊಂದಿದ್ದು, ದೇಶದ ನಾನಾ ಭಾಗಗಳಲ್ಲಿ24 ಲಕ್ಷ ಕುಟುಂಬಗಳು ಈ ಮಾದರಿಯ ಸ್ಟೋ ಬಳಕೆ ಮಾಡುತ್ತಿವೆ. ಇದು ಪರಿಸರ ಸ್ನೇಹಿ ಹಾಗೂ ಸುರಕ್ಷಿತವಾಗಿದೆ. ಕಬ್ಬು, ಮೆಕ್ಕೆಜೋಳ, ಸಿಹಿಜೋಳ ಇತ್ಯಾದಿಗಳಿಂದ ಎಥಿನಾಲ್ ಉತ್ಪಾದಿಸಬಹುದಾಗಿದ್ದು, ರೈತರಿಗೆ ದೊಡ್ಡ ಪ್ರಮಾಣದಲ್ಲಿಅನುಕೂಲವಾಗಲಿದೆ. ಆದ್ದರಿಂದ ಸರಕಾರ ಎಥಿನಾಲ್ ಸ್ಟೋ ಬಳಕೆಗೆ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಫೋಟೊ ಮುರುಗೇಶ ನಿರಾಣಿ