ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ

Contributed bydmpatilp18@gmail.com|Vijaya Karnataka

ಆಳಂದ ಪಟ್ಟಣದಲ್ಲಿ ರಂಜಾನ್‌ ಉಪವಾಸವನ್ನು ಆಚರಿಸುವವರಿಗಾಗಿ ಇಫ್ತಾರ್‌ ಕೂಟವನ್ನು ಆಯೋಜಿಸಲಾಯಿತು. ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕೂಟವು ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಸಾರುವಂತಿದೆ. ಈ ಸಂದರ್ಭದಲ್ಲಿ ಹಣ್ಣು ಹಂಪಲು ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅನೇಕ ಗಣ್ಯರು ಮತ್ತು ಯುವಕರು ಈ ಕೂಟದಲ್ಲಿ ಭಾಗವಹಿಸಿದ್ದರು.

ramadan iftar gathering an example of hindu muslim harmony

15 ಎಎಲ್ಡಿ 1:

ಆಳಂದ ಪಟ್ಟಣದ ಅಲ್ಲಾಕಟ್ಟಾ ಹತ್ತಿರ ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ ಅವರು ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ ಏರ್ಪಡಿಸಿದರು.

ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ

ವಿಕ ಸುದ್ದಿಲೋಕ ಆಳಂದ

ಪಟ್ಟಣದ ಅಲ್ಲಾಕಟ್ಟಾ ಹತ್ತಿರ ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ ಅವರು ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ ಏರ್ಪಡಿಸಿದರು.

ಬಳಿಕ ಮಾತನಾಡಿದ ಅವರು, ಪ್ರತಿವರ್ಷ ನಾವು ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಉಪಾಸಿಕರಿಗೆ ಇಫ್ತಾರ್ ಕೂಟ ಆಯೋಜಿಸಿ ಹಣ್ಣು ಹಂಪಲು, ಊಟ ನೀಡಲಾಗುತ್ತಿದೆ. ಇದೊಂದು ಹಿಂದೂ-ಮುಸ್ಲಿಂ ನಡುವಿನ ಸೌಹಾರ್ದ ಕೂಟವಾಗಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಫಿರ್ದೋಸ್ ಅನ್ಸಾರಿ, ಮಾಜಿ ಸದಸ್ಯ ಮಲ್ಲಪ್ಪ ಹತ್ತರಕಿ, ಗುಲಾಮಹುಸೇನ್ ಟಪ್ಪೆವಾಲೆ, ನ್ಯಾಯವಾದಿ ಮಹಾದೇವ ಹತ್ತಿ, ದಿಲೀಪ ಕ್ಷೀರಸಾಗರ ಕೊತನಹಿಪ್ಪರಗಿ, ಮುಖಂಡ ಮುನ್ನಾ ಹಡಗಿ, ರತ್ನಾಕರ ಕುಂಬಾರ, ಶಿವಾನಂದ ನಾಗೂರೆ, ಮಲ್ಲಿಕಾರ್ಜುನ ಮಾಳಿ, ದಿನೇಶ ಪಾಟೀಲ್ , ಬಸವರಾಜ ಪಾಟೀಲ್ , ಸತೀಶ ಪಾಟೀಲ್ , ಅಬುಲ್ ಖಾದಾರ್ , ಆಸೀಫ ಚೌಸ್ ಸೇರಿ ಮುಖಂಡರು, ಯುವಕರು ಇಧಿದ್ದಧಿರು.