ಬ್ಯಾರೀಸ್ ನಲ್ಲಿಇಪ್ತಾರ್ ಕೂಟ

Contributed byjohn.dsouza@timesofindia.com|Vijaya Karnataka

ಕುಂದಾಪುರದ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಶಿಸ್ತು ಮತ್ತು ಉತ್ಸಾಹದಿಂದ ಕೂಟವನ್ನು ಸಂಘಟಿಸಿದರು. ಇದು ಸೌಹಾರ್ದತೆಯ ಸಂಕೇತವಾಯಿತು. ಡಾ. ಆಸೀಫ್ ಬ್ಯಾರಿ, ಅಶ್ವಿನಿ ಶೆಟ್ಟಿ, ಮತ್ತು ಹಾಜಿ ಕೆ.ಎಂ ಅಬ್ದುಲ್‌ ರೆಹಮಾನ್‌ ಬ್ಯಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

iftar gathering at barys

ಕುಂದಾಪುರ : ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿಇಫ್ತಾರ್ ಕೂಟ ಸಡಗರದಿಂದ ಜರುಗಿತು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿ ಮಾತನಾಡಿ, ವಿದ್ಯಾರ್ಥಿಗಳು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಉತ್ಸಾಹದಿಂದ ಈ ಇಫ್ತಾರ್ ಕೂಟವನ್ನು ಸಂಘಟಿಸಿರುವುದು ಶ್ಲಾಘನೀಯ ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಈ ಸಂಯೋಜನೆ ಸೌಹಾರ್ದತೆಯ ಮೆಟ್ಟಿಲು ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಉಪಸ್ಥಿತರಿದ್ದರು.

ಪೋಟೊ//14ಕೆ-ಇಎಫ್ ಟಿ//. ಇಪ್ತಾರ್ ಕೂಟ