ಎಚ್ ಪಿವಿ ಲಸಿಕಾ ಅಭಿಯಾನ

Contributed bysheshu0147@gmail.com|Vijaya Karnataka

ಮಂಡ್ಯ ಜಿಲ್ಲೆಯಲ್ಲಿ 14ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಮುಂದಿನ ಒಂದು ತಿಂಗಳು ನಡೆಯುವ ಈ ಅಭಿಯಾನದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಲಸಿಕೆ ದೊರೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಪ್ರಯೋಜನಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಈ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

importance of hpv vaccination campaign free vaccine for girls aged 14 15

ವಿಕ ಸುದ್ದಿಲೋಕ ಮಂಡ್ಯ

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್ ಪಿವಿ ಲಸಿಕೆಯನ್ನು 14ರಿಂದ 15 ವರ್ಷದೊಳಗಿನ ಬಾಲಕಿಯರು ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸಾರ್ವತ್ರಿಕ ಲಸಿಕಾ ಕಾರ ್ಯಕ್ರಮದ ಪ್ರಗತಿ, ದಡಾರ ರುಬೆಲ್ಲಾನಿರ್ಮೂಲನಾ ಕಾರ ್ಯಕ್ರಮ ಹಾಗೂ ಎಚ್ ಪಿವಿ ಲಸಿಕಾ ಅಭಿಯಾನದ ಅನುಷ್ಠಾನ ಸಂಬಂಧ ಭಾನುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ಎಚ್ ಪಿವಿ ಲಸಿಕೆಯು 14ರಿಂದ 15 ವಷÜರ್ ದೊಳಗಿನ ಬಾಲಕಿಯರಲ್ಲಿಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ರಕ್ಷಣಾತ್ಮಕ ಔಷಧ. ಜಿಲ್ಲೆಯಲ್ಲಿಮುಂದಿನ ಒಂದು ತಿಂಗಳು ಲಸಿಕಾ ಅಭಿಯಾನ ನಡೆಯಲಿದ್ದು, ಎಲ್ಲಾಹೆಣ್ಣು ಮಕ್ಕಳನ್ನು ಗುರುತಿಸಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿ,’’ ಎಂದು ಹೇಳಿದರು.

‘‘ಮಕ್ಕಳಲ್ಲಿತಪ್ಪು ಗ್ರಹಿಕೆ ಮತ್ತು ಗೊಂದಲವನ್ನು ಹೋಗಲಾಡಿಸುವ ದೃಷ್ಟಿಯಿಂದ ಎಲ್ಲಾ(ಪ್ರಾಥಮಿಕ ಆರೋಗ್ಯ ಕೇಂದ್ರ) ಪಿಎಚ್ ಸಿಗಳಲ್ಲಿಲಸಿಕೆಯ ಪ್ರಯೋಜನದ ತಿಳಿಸಬೇಕು. ಅಲ್ಲಿನ ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ತಿಳಿವಳಿಕೆ ಜಾಗೃತಿ ಕಾರ ್ಯಕ್ರಮವನ್ನು ಮಾಡಬೇಕು. ಎಚ್ ಪಿವಿ ಲಸಿಕೆ ಸುರಕ್ಷಿತ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲ. ದೇಹದಲ್ಲಿರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಮಹತ್ವದ ಮಾಹಿತಿಯನ್ನು ನೀಡಬೇಕು,’’ಎಂದು ಸಲಹೆ ನೀಡಿದರು.

‘‘ಎಲ್ಲಾಪ್ರಾಥಮಿಕ, ಸಮುದಾಯ, ಜಿಲ್ಲಾಆರೋಗ್ಯ ಕೇಂದ್ರಗಳು ಹಾಗೂ ಸರಕಾರಿ ಆಸ್ಪತ್ರೆಗಳು ಎಚ್ ಪಿವಿ ಲಸಿಕೆ ನೀಡಲಿವೆ. ಮುಂದಿನ ಒಂದು ತಿಂಗಳ ಅಭಿನಯದಲ್ಲಿಇದನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ದೊರೆಯುವಂತೆ ಕ್ರಮ ವಹಿಸಬೇಕು. ಇದಕ್ಕೆ ಶಿಕ್ಷಣ ಇಲಾಖೆ ಸಹಕರಿಸಬೇಕು,’’ ಎಂದು ಸೂಚಿಸಿದರು.

ಡಿಎಚ್ ಒ ಡಾ.ಕೆ.ಮೋಹನ್ , ಆರ್ ಸಿಎಚ್ ಒ ಡಾ.ಕೆ.ಪಿ.ಅಶ್ವಥ್ , ಜಿಲ್ಲಾಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಎಂ.ಎನ್ .ಆಶಾಲತಾ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ , ಟಿಎಚ್ ಒ ಡಾ.ಜವರೇಗೌಡ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಎನ್ .ಜಿ.ವೇಣುಗೋಪಾಲ್ ಭಾಗವಹಿಸಿದ್ದರು.

ಎಸ್ ಎಂಡಿವೈ-ಎಸ್ -15-2

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿಸಾರ್ವತ್ರಿಕ ಲಸಿಕಾ ಕಾರ ್ಯಕ್ರಮದ ಪ್ರಗತಿ, ದಡಾರ ರುಬೆಲ್ಲಾನಿರ್ಮೂಲನಾ ಕಾರ ್ಯಕ್ರಮ ಹಾಗೂ ಎಚ್ ಪಿವಿ ಲಸಿಕಾ ಅಭಿಯಾನದ ಅನುಷ್ಠಾನ ಸಂಬಂಧ ಭಾನುವಾರ ಸಭೆ ನಡೆಯಿತು.