- ಕ್ಯಾಬಿನೇಟ್ ತೀರ್ಮಾನ ಎಂದ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ
ವಿಕ ಸುದ್ದಿಲೋಕ ಮಂಡ್ಯ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗಾಗಿ ರಾಜ್ಯ ಸರಕಾರ 100 ಕೋಟಿ ರೂ. ಮಂಜೂರು ಮಾಡಿ ಕ್ಯಾಬಿನೆಟ್ ತೀರ್ಮಾನ ಮಾಡಿದೆ ಎಂದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ತಿಳಿಸಿದರು.
ಜಲಸಂಪನ್ಮೂಲ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಇನ್ನೊಂದು ತಿಂಗಳಲ್ಲಿಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಕಳೆದ 50 ವರ್ಷಗಳಿಂದ ಆಧುನೀಕರಣಗೊಳ್ಳದೆ ನನೆಗುದಿಗೆ ಬಿದ್ದಿದ್ದ ವಿಶ್ವೇಶ್ವರಯ್ಯ ನಾಲೆ ವ್ಯಾಪ್ತಿಯ ಕೆರೆಗೋಡು, ಶಿಂಷಾ, ಹೊಸ ಮದ್ದೂರು ಶಾಖೆ ನಾಲೆಗಳು ಮತ್ತವುಗಳ ಸಂಪರ್ಕ ನಾಲೆಗಳು ಅಭಿವೃದ್ಧಿಗೊಳ್ಳಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.
‘‘ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಈಗಾಗಲೇ 200 ಕೋಟಿ ರೂ. ವೆಚ್ಚದಲ್ಲಿನಾಲೆಗಳ ಕಾಮಗಾರಿ ನಡೆಯುತ್ತಿದ್ದು, ಶೇ.50ರಷ್ಟು ಪೂರ್ಣಗೊಂಡಿದೆ. 40 ಕೋಟಿ ರೂ. ವೆಚ್ಚದ ಮತ್ತೊಂದು ಪ್ಯಾಕೇಜ್ ನ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಇದರೊಂದಿಗೆ ಬಸರಾಳು ಹೋಬಳಿ ವ್ಯಾಪ್ತಿಯ ಹೇಮಾವತಿ ನಾಲೆಗಳ ಅಭಿವೃದ್ಧಿಗೆ 350 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಗೊಂಡಿದ್ದು, ಸರಕಾರದಿಂದ ತಾಂತ್ರಿಕ ಅನುಮೋದನೆಯೂ(ಟಿವಿಸಿ) ದೊರೆತಿದೆ,’’ಎಂದು ವಿವರಿಸಿದರು.
‘‘ಮಂಡ್ಯ ನಗರಕ್ಕೆ ಹೊಸ ರೂಪ ಕೊಡುವ ಕಾರ ್ಯ ಮತ್ತೊಂದು ತ್ವರಿತಗತಿಯಲ್ಲಿನಡಯುತ್ತಿದೆ. ಮಹಾನಗರಪಾಲಿಕೆ ವ್ಯಾಪ್ತಿಗೆ ಮಾತ್ರ ದೊರೆಯುತ್ತಿದ್ದ ಡೆಲ್ಟಾ ಅನುದಾನವನ್ನು ಮಂಡ್ಯಕ್ಕೆ ತಂದು 6.50 ಕೋಟಿ ರೂ. ವೆಚ್ಚದಲ್ಲಿನೂರಡಿ ರಸ್ತೆಯ ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣಮಂಟಪದವರೆಗೆ ಫುಟ್ಬಾತ್ ಅಭಿವೃದ್ಧಿಪಡಿಸಿ, ಸೈಕಲ್ ಬೇ ನಿರ್ಮಿಸಲಾಗುವುದು,’’ ಎಂದು ತಿಳಿಸಿದರು.
‘‘ನೂರಡಿ ರಸ್ತೆಯ ಕನ್ಯಕಾಪರಮೇಶ್ವರಿ ದೇವಾಲಯ ಬಳಿಯ ವೃತ್ತವನ್ನು ವಿದೇಶಿ ಮಾದರಿಯಲ್ಲಿ55 ಲಕ್ಷ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗುತ್ತಿದೆ. ಹೊಸಹಳ್ಳಿ ಸರ್ಕಲ್ ಅಭಿವೃದ್ಧಿಗೆ 1.50 ಕೋಟಿ ರೂ. ಬಿಡುಗಡೆಯಾಗಿದೆ. ಅದಕ್ಕೆ ಅತ್ಯುತ್ತಮ ವಿನ್ಯಾಸವನ್ನು ಮಾಡಿಸಲಾಗಿದೆ,’’ಎಂದು ಮೊಬೈಲ್ ನಲ್ಲಿಸರ್ಕಲ್ ನ ವಿನ್ಯಾಸ ಮಾದರಿಯನ್ನು ಪ್ರದರ್ಶಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಮಂಡ್ಯ ತಾ.ಪಂ. ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಜರಿದ್ದರು.
.............................
ಶಾಸಕರು ಹೇಳಿದ್ದೇನು..?
- ಮಂಡ್ಯ ನಗರದ ವಿ.ವಿ.ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಿ, ವೆಬಿಕಲ್ ಫ್ರೀಝೋನ್ (ವಾಹನ ಮುಕ್ತ ವಲಯ) ಮಾಡಲಾಗುವುದು. ಇದಕ್ಕಾಗಿ ತಜ್ಞರೊಂದಿಗೆ ಈಗಾಗಲೇ ಸಮಾಲೋಚನೆ ನಡೆದಿದೆ. ವರ್ತಕರು, ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡಲಾಗುವುದು.
- ಹಿಂದೆಲ್ಲಾನಗರದಲ್ಲಿಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದವು. ಆದರೀಗ ನಾನಾ ಇಲಾಖೆಗಳ ಸಮನ್ವತೆಯೊಂದಿಗೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಇದರಿಂದ ಕಾಮಗಾರಿಗಳು ಸ್ವಲ್ಪ ವಿಳಂಭವಾಗುತ್ತಿವೆ. ಆದರೆ, ಮುಂದಿನ ದಿನಗಳು ಚೆನ್ನಾಗಿರಬೇಕೆಂದರೆ ಕೆಲವು ದಿನಗಳ ಕಾಲ ಕಾಮಗಾರಿ ವಿಳಂಬದ ಸಮಸ್ಯೆಯನ್ನು ಸಹಿಸಿಕೊಳ್ಳುವುದು ಅನಿವಾರ ್ಯ.
- ಕಲ್ಲಹಳ್ಳಿ ಎಪಿಎಂಸಿ ರಸ್ತೆಯನ್ನು ಎಪಿಎಂಸಿ ಅನುದಾನ 2 ಕೋಟಿ ರೂ. ವೆಚ್ಚದಲ್ಲಿಡಾಂಬರೀಕರಣ ಮಾಡಲಾಗುವುದು. ಅದಕ್ಕೆ ಪೂರಕವಾಗಿ ನಗರಸಭೆ ಮತ್ತು ಜಲಮಂಡಳಿಯಿಂದ ಒಳಚರಂಡಿ, ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ನಗರಸಭೆಯಿಂದ 45 ಲಕ್ಷ ರೂ. ಹೆಚ್ಚುವರಿ ಅನುದಾನವನ್ನೂ ಮೀಸಲಿಡಲಾಗಿದೆ.
- ಮಂಡ್ಯ ಕ್ಷೇತ್ರಕ್ಕೆ 33 ಕೋಟಿ ರೂ. ವೆಚ್ಚದ ಶ್ರಮಿಕ ವಸತಿ ಶಾಲೆಯು ಬಜೆಟ್ ನಲ್ಲೇ ಘೋಷಣೆಯಾಗಿದೆ. ಇದಕ್ಕಾಗಿ ಜಾಗ ಹುಡುಕಲಾಗುತ್ತಿದೆ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 35 ಕೋಟಿ ರೂ. ವೆಚ್ಚದ ಅಬ್ದುಲ್ ಕಲಾಂ ಆಜಾದ್ ವಸತಿ ಶಾಲೆಯು ಕ್ಷೇತ್ರಕ್ಕೆ ಮಂಜೂರಾಗಿದೆ. ಬಿ.ಹೊಸೂರು ಕಾಲನಿ ಬಳಿ ಇದಕ್ಕಾಗಿ 5 ಎಕರೆ ಜಾಗ ಗುರುತಿಸಲಾಗಿದೆ.
- ಮುಂದಿನ 6 ತಿಂಗಳಲ್ಲಿಬಿ.ಹೊಸೂರು ಕಾಲೊನಿಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು. ಈ ಪ್ರದೇಶವನ್ನು ಆರೋಗ್ಯ ಮತ್ತು ಶಿಕ್ಷಣದ ಹಬ್ ಆಗಿ ಪರಿವರ್ತಿಸಲಾಗುವುದು.
- ಅಮೃತ್ ಯೋಜನೆಯಡಿ ಮಂಡ್ಯ ನಗರಕ್ಕೆ 24*7 ಶುದ್ಧ ಕಾವೇರಿ ನೀರು ಪೂರೈಸುವ ಯೋಜನೆ ನಡೆಯುತ್ತಿದೆ. ಈಗಾಗಲೇ 12 ವಾರ್ಡ್ ಗಳಲ್ಲಿಕಾಮಗಾರಿ ಪೂರ್ಣಗೊಂಡಿದೆ. ಬಾಕಿ 25 ವಾರ್ಡ್ ಗಳಲ್ಲಿಕಾಮಗಾರಿ ನಿರ್ವಹಣೆಗಾಗಿ 150 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೋಟ್ ..
ಮೈಶುಗರ್ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಸುಮಾರು 200 ಕೋಟಿ ರೂ. ಅನುದಾನ ನೀಡಿದೆ. ಈಗ ಹೊಸ ಬಾಯ್ಲರ್ ಹೌಸ್ ಅಳವಡಿಕೆಗಾಗಿ ಕ್ಯಾಬಿನೆಟ್ ನಲ್ಲಿ60 ಕೋಟಿ ರೂ. ಮಂಜೂರು ಮಾಡಿದೆ. ಇದರಿಂದ ನಿತ್ಯ 5000 ಟನ್ ಕಬ್ಬು ಅರೆಯಬಹುದು. ಕಾರ್ಖಾನೆಯಲ್ಲಿನ ಅವ್ಯವಹಾರಗಳ ತನಿಖೆಗಾಗಿ ಪ್ರತ್ಯೇಕ ತನಿಖಾ ಸಮಿತಿ ರಚನೆಯಾಗಿದ್ದು, ತನಿಖಾ ಕಾರ ್ಯ ಪ್ರಗತಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮವೂ ಆಗಲಿದೆ.
-ಪಿ.ರವಿಕುಮಾರ್ ಗೌಡ ಗಣಿಗ, ಶಾಸಕ, ಮಂಡ್ಯ
ಮಂಡ್ಯ: ಫೋಟೋ ಶೀರ್ಷಿಕೆಗಳು...
ಎಂಡಿವೈ15ಎನ್ 2
ಮಂಡ್ಯದ ಪ್ರವಾಸಿ ಮಂದಿರದಲ್ಲಿಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಮಾತನಾಡಿದರು.

