(ವಿಕ ವಿಶೇಷ)
ಗೋಟೂರು-ಜೇವರ್ಗಿ ಮಾರ್ಗದಲ್ಲಿಸಂಚಾರವೇ ನರಕ | ಸರಕಾರ, ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ
ಸುಶಾಂತ ಜಮಖಂಡಿಕರ್ ಚಿಕ್ಕೋಡಿ
ಒaಞkha್ಞdಜಿka್ಟ.s್ಠsha್ಞಠಿ080ಃಜಞaಜ್ಝಿ.್ಚಟಞ
ಮುರಗುಂಡಿಯಿಂದ ಚಿಕ್ಕೋಡಿ ಮಾರ್ಗವಾಗಿ ಗೋಟೂರು-ಜೇವರ್ಗಿ ರಾಷ್ಟಿ್ರೕಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಹೆಸರಿಗಷ್ಟೇ ಮೇಲ್ದರ್ಜೆಗೇರಿದ ರಸ್ತೆ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ಜಾಣ ಕುರುಡುತನಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು, ರಸ್ತೆಯಲ್ಲಿಸಂಚಾರವೇ ದುಸ್ಸಾಹಸವಾಗಿದೆ.
ಗಣ್ಯರ ಆಗಮನಕ್ಕೆ ತೇಪೆ ನಾಟಕ:
ಜನರು ಕಾರ್ಯ ನಿಮಿತ್ತ ಜಿಲ್ಲಾಕೇಂದ್ರ ಬೆಳಗಾವಿಗೆ ಬರಬೇಕಾದರೆ ದಿನನಿತ್ಯ ಗುಂಡಿಗಳ ಮಧ್ಯೆ ರಸ್ತೆ ಹುಡುಕುತ್ತಾ ಪ್ರಾಣ ಕೈಯಲ್ಲಿಹಿಡಿದು ಸಂಚರಿಸುತ್ತಿದ್ದಾರೆ. ಒಂದು ವರ್ಷದಲ್ಲಿರಸ್ತೆ ಅಪಘಾತದಲ್ಲಿಸುಮಾರು 20ಕ್ಕೂ ಹೆಚ್ಚು ಜೀವಹಾನಿಯಾಗಿದ್ದು, ಸಣ್ಣಪುಟ್ಟ ಅಪಘಾತಗಳೂ ಹೆಚ್ಚಾಗಿವೆ. ಯಾವಾಗಲಾದರೂ ಉಚ್ಚ ಹಾಗು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಅಥವಾ ಸರಕಾರದ ಗಣ್ಯ ವ್ಯಕ್ತಿಗಳು ಸಂಚರಿಸುವ ಸಂದರ್ಭದಲ್ಲಿಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಂಡು ರಾತ್ರೋರಾತ್ರಿ ‘ತೇಪೆ’ ಹಚ್ಚುವ ಕೆಲಸ ಮಾಡುತ್ತಾರೆ. ಇದರಿಂದ ಗಣ್ಯರಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ ಎಂದು ಸ್ಥಳೀಯರು ಪ್ರಶ್ನೆ ಜತೆಗೆ ಆಕ್ರೋಶ ಹೊರಹಾಕಿದ್ದಾರೆ.
ಬೇಜವಾಬ್ದಾರಿಗೆ ಜನಾಕ್ರೋಶ:
ವಿಜಯಪುರದಿಂದ ಮುಂಡರಗಿವರೆಗಿನ ರಸ್ತೆ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ,ಮುಂಡರಗಿಯಿಂದ ಚಿಕ್ಕೋಡಿ ಸೇರಿ ಹುಕ್ಕೇರಿ, ಕಾಗವಾಡ ಕ್ಷೇತ್ರ ವ್ಯಾಪ್ತಿಗೊಳಪಡುವ ರಸ್ತೆ ಅಭಿವೃದ್ಧಿಪಡಿಸಬೇಕಾದ ಮೂಲಭೂತ ಜವಾಬ್ದಾರಿಯನ್ನು ಮರೆತಿರುವ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬರುತ್ತದೆ. ಒಂದು ಮತ ಕೇಳಲು ಬರುವ ಜನಪ್ರತಿನಿಧಿಗಳಿಗೆ ವಾಹನ ಸವಾರರ ಪ್ರಾಣಕ್ಕಿಂತ ರಾಜಕೀಯವೇ ಮುಖ್ಯವಾಯಿತೇ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಒಬ್ಬರ ಮೇಲೊಬ್ಬರ ಆರೋಪ:
ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯನ್ನು ಕೇಳಿದರೆ, ‘‘ನಾವು ರಸ್ತೆಯನ್ನು ರಾಷ್ಟಿ್ರೕಯ ಹೆದ್ದಾರಿ ಇಲಾಖೆಗೆ ಒಪ್ಪಿಸಿದ್ದೇವೆ. ಈಗ ನಮಗೂ ಅದಕ್ಕೂ ಸಂಬಂಧವಿಲ್ಲ’’ ಎಂದು ಕೈತೊಳೆದುಕೊಳ್ಳುತ್ತಾರೆ. ಇತ್ತ ರಾಷ್ಟಿ್ರೕಯ ಹೆದ್ದಾರಿ ಪ್ರಾಧಿಕಾರದವರನ್ನು ಕೇಳಿದರೆ, ‘‘ಕಾಮಗಾರಿ ನಡೆಯುತ್ತಿದೆ’’ ಎಂಬ ಹಳೇ ರಾಗವನ್ನೇ ಹಾಡುತ್ತಿದ್ದಾರೆ. ಇಲಾಖೆಗಳ ನಡುವಿನ ಹಗ್ಗ ಜಗ್ಗಾಟದ ಮದ್ಯೆ ಸಾರ್ವಜನಿಕರ ಬಲಿಯಾಗುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆಯು ಕೂಡಲೇ ಈ ರಸ್ತೆ ದುರಸ್ತಿಗೊಳಿಸಿ, ಸಂಚಾರಕ್ಕೆ ಯೋಗ್ಯವಾಗಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ನಾನಾ ಘಟನೆಗಳು ಎಚ್ಚರಿಸಿವೆ.
ಕ್ವೋಟ್ ...1
ಗಣ್ಯರ ಆಗಮನ ಸಂದರ್ಭದಲ್ಲಿಸ್ಥಳೀಯ ಗುತ್ತಿಗೆದಾರರಿಗೆ ಮನವಿ ಮಾಡಿ ದುರಸ್ತಿ ಕಾರ್ಯ ಮಾಡಲಾಗಿತ್ತು. ತಗ್ಗು- ಗುಂಡಿ ಮುಚ್ಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿದುರಸ್ತಿ ಕಾಮಗಾರಿ ಆರಂಭಿಸಲಾಗುವುದು.
-ವಿಜಯ ಪಾಟೀಲ | ಇಇ ರಾಷ್ಟಿ್ರೕಯ ಹೆದ್ದಾರಿ ವಿಜಯಪುರ
ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚರಿಸುವಾಗ ಭಯವಾಗುತ್ತಿದೆ. ಅಡ್ಡಬರುವ ಗುಂಡಿ ತಪ್ಪಿಸುತ್ತ ಸಾಗುವ ಅನಿರ್ವಾರ್ಯತೆ ಇದ್ದು, ಸಂಪೂರ್ಣ ಹದಗೆಟ್ಟರೂ ಸಂಬಂಧಿಸಿದವರು ಇತ್ತ ಕಣ್ಣು ತೆರೆದು ನೋಡದಿರುವುದು ದುರಂತವಲ್ಲದೇ ಮತ್ತೇನು?
-ಆನಂದ ಮಾಳಿ | ಬೈಕ್ ಸವಾರ
15ಸಿಕೆಡಿ1ಡಿ,ಸಿ: ರಸ್ತೆಯಲ್ಲಿತಗ್ಗು-ಗುಂಡಿಗಳು ನಿರ್ಮಾಣವಾಗಿರುವುದು.

