ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

Contributed byganeshbyd143@gmail.com|Vijaya Karnataka

ಬ್ಯಾಡಗಿ ಕನ್ನಡ ಸಾಹಿತ್ಯ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ರಂಗೋಲಿ, ಅಡುಗೆ, ಉತ್ತಮ ಉಡುಗೆ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳೆಯರ ಸಾಧನೆ, ಆತ್ಮವಿಶ್ವಾಸ, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮಾತನಾಡಲಾಯಿತು. ಬೇಬಕ್ಕ ಬಾರಂಗಿ, ಸ್ನೇಹಾ ಇಮ್ಮಡಿ ಅವರನ್ನು ಗೌರವಿಸಲಾಯಿತು.

international womens day celebration honoring achievers womens achievements courage and self confidence

ವಿಕ ಸುದ್ದಿಲೋಕ ಬ್ಯಾಡಗಿ

ಮಹಿಳೆಯರು ಎಲ್ಲಕ್ಷೇತ್ರಗಳಲ್ಲಿಯೂ ಸಾಧನೆಯತ್ತ ಮುನ್ನುಗ್ಗುತ್ತಿರುವುದು ಸಂತಸದ ವಿಚಾರ. ಆದರೆ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಕಳಂಕ ಅಳಿಸಿಹಾಕಿದಾಗ ಮಾತ್ರ ಮಹಿಳೆ ಗೌರವದಿಂದ ಮತ್ತು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯ ಎಂದು ವೈದ್ಯೆ ಡಾ.ಅಲಕಾ ಕುಲಕರ್ಣಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಭವನದಲ್ಲಿಉತ್ಸಾಹಿ ಹೆಣ್ಣುಮಕ್ಕಳ ಬಳಗ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಾಗಿ ಇಂದು ಎಲ್ಲಕ್ಷೇತ್ರಗಳು ಸಹ ಕೈಬೀಸಿ ಕರೆಯುತ್ತಿವೆ. ಅದನ್ನ ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ಮಹಿಳೆ ಮೇಲಿದೆ. ಈಗಾಗಲೇ ವಿವಿಧ ಕ್ಷೇತ್ರದಲ್ಲಿಮಹಿಳೆ ಸಾಕಷ್ಟು ಸಾಧನೆ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪಿಎಸ್ ಐ ಭಾರತಿ ಕುರಿ ಮಾತನಾಡಿ, ಮಹಿಳೆಯರು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿದಾಗ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಕುಟುಂಬದ ಶ್ರೇಯೋಭಿವೃದ್ಧಿ ಮತ್ತು ಸಮಾಜದ ಸುಧಾರಣೆಯಲ್ಲಿಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಮಾತನಾಡಿ, ಮಹಿಳೆ ಕೀಳರಿಮೆ ತೊರೆದು ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಜೀವನದಲ್ಲಿಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿಕಸಾಪ ಅಧ್ಯಕ್ಷ ಬಿ.ಎಂ.ಜಗಾಪೂರ, ಎಪಿಎಂಸಿ ಕಾರ್ಯದರ್ಶಿ ಡಾ.ವಿ.ಬಿ.ಆದರ್ಶ, ನಿವೃತ್ತ ಶಿಕ್ಷಕಿ ಸುವರ್ಣ ಉಪಾಸಿ, ಕಾಶಿನಾಥ ಕಮ್ಮಾರ ಅವರು ಮಹಿಳೆಯರ ಸಾಧನೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾತನಾಡಿದರು.ದ್ರಾಕ್ಷಾಯಿಣಿ ಹರಮಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಯಲಿ ಸ್ವಾಗತಿಸಿದರು. ಸುಶೀಲಾ ಕಲಾಶೆಟ್ಟಿ ವಂದಿಸಿದರು. ಶ್ವೇತಾ ಲಿಂಬಿಕಾಯಿ ನಿರೂಪಿಸಿದರು.

ಕಾರ ್ಯಕ್ರಮದಲ್ಲಿಸಾವಯವ ಕೃಷಿಯಲ್ಲಿಸಾಧನೆ ಮಾಡಿದ ಹಿರೇಅಣಜಿಯ ರೈತ ಮಹಿಳೆ ಬೇಬಕ್ಕ ಬಾರಂಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಸಾಧನೆ ಮಾಡಿದ ಸ್ನೇಹಾ ಇಮ್ಮಡಿ ಅವರನ್ನು ಗೌರವಿಸಲಾಯಿತು.

ವಿವಿಧ ಸ್ಪರ್ಧೆ:

ಮಹಿಳಾ ದಿನಾಚರಣೆ ಅಂಗವಾಗಿ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ ಹಾಗೂ ಉತ್ತಮ ಉಡುಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಹಾಡು, ನೃತ್ಯ, ಹಾಸ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲಮಹಿಳೆಯರೂ ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಪೋಟೊ-15ಬಿವೈಡಿ1

ಬ್ಯಾಡಗಿ ಕನ್ನಡ ಸಾಹಿತ್ಯ ಭವನದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.