ಲೋಕ್ ಅದಾಲತ್ ನಲ್ಲಿ56,235 ಪ್ರಕರಣ ಇತ್ಯರ್ಥ

Contributed byragh.pkn@gmail.com|Vijaya Karnataka

ಕೋಲಾರ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ 56,235 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 37,75,80,506 ರೂ. ಪರಿಹಾರ ಮೊತ್ತ ಪಾವತಿಸಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇದ್ದ 6,260 ಪ್ರಕರಣಗಳು ಹಾಗೂ 49,975 ವ್ಯಾಜ್ಯ ಪೂರ್ವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಕ್ರಿಮಿನಲ್, ಚೆಕ್‌ಬೌನ್ಸ್, ಕೌಟುಂಬಿಕ, ಮೋಟಾರು ವಾಹನ ಅಪಘಾತ ಪ್ರಕರಣಗಳು ಸೇರಿ ಹಲವು ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ.

56235 cases resolved in lok adalat in kolar district

ಲೋಕ್ ಅದಾಲತ್ ನಲ್ಲಿ56,235 ಪ್ರಕರಣ ಇತ್ಯರ್ಥ

ವಿಕ ಸುದ್ದಿಲೋಕ ಕೋಲಾರ

ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿಒಟ್ಟು 56,235 ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್ .ನಟೇಶ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಈ ಬಾರಿಯ ಲೋಕ್ ಅದಾಲತ್ ನಲ್ಲಿಒಟ್ಟು 37,75,80,506 ರೂ. ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ.ಒಟ್ಟು 56,235 ಪ್ರಕರಣಗಳಿದ್ದು, ಅವುಗಳಲ್ಲಿನ್ಯಾಯಾಲಯದಲ್ಲಿಬಾಕಿ ಇದ್ದ ಪ್ರಕರಣಗಳು: 6,260. ವ್ಯಾಜ್ಯ ಪೂರ್ವ ಪ್ರಕರಣಗಳು: 49,975 (ಬ್ಯಾಂಕ್ , ಟ್ರಾಫಿಕ್ ಹಾಗೂ ಸಾರ್ವಜನಿಕ ಉಪಯುಕ್ತತೆ ಪ್ರಕರಣಗಳು ಸೇರಿ) ಎಂದು ಹೇಳಿದ್ದಾರೆ.

ಪ್ರಮುಖವಾಗಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ, ಕ್ರಿಮಿನಲ್ ಪ್ರಕರಣಗಳು 43, ಚೆಕ್ ಬೌನ್ಸ್ ಪ್ರಕರಣಗಳು 265, ಕೌಟುಂಬಿಕ ಪ್ರಕರಣಗಳು 15,ವಿಭಾಗದ ದಾವೆಗಳು 91,ಮೋಟಾರು ವಾಹನ ಅಪಘಾತ ಪರಿಹಾರ 23,

ಇತರ ಸಿವಿಲ್ ಪ್ರಕರಣಗಳು 444,ಇತರ ಕ್ರಿಮಿನಲ್ ಪ್ರಕರಣಗಳು 5,379 ಎಂದು ತಿಳಿಸಿದ್ದಾರೆ.

ಕೋಲಾರ ಜಿಲ್ಲಾಕೇಂದ್ರ ಹಾಗೂ ಎಲ್ಲಾತಾಲೂಕು ನ್ಯಾಯಾಲಯಗಳಲ್ಲಿಏರ್ಪಡಿಸಲಾಗಿದ್ದ ಈ ಅದಾಲತ್ ಗೆ ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ಎಂ.ಆನಂದ ಶೆಟ್ಟಿ ಚಾಲನೆ ನೀಡಿದರು.

ಬೃಹತ್ ಲೋಕ್ ಅದಾಲತ್ ನ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷ ಎಲ್ .ಶ್ರೀನಿವಾಸ್ , ಕಾರ್ಯದರ್ಶಿ ಕೆ.ವಿ.ಆದರ್ಶ, ಜಿಲ್ಲೆಯ ಎಲ್ಲಾನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು ಹಾಗೂ ಕಕ್ಷಿದಾರರಿಗೆ ಆರ್ .ನಟೇಶ ಅಭಿನಂದನೆ ಸಲ್ಲಿಸಿದ್ದಾರೆ.

=

ಫೋಟೋಕ್ಯಾಪ್ಷನ್ : ಜಿಲ್ಲಾನ್ಯಾಯಾಲಯದ ಆವರಣದಲ್ಲಿನಡೆದ ರಾಷ್ಟ್ರೀಯ ಲೋಕ್ ಅದಾಲತ್ ಗೆ ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರು ಚಾಲನೆ ನೀಡಿದರು. (15ಕೆಪಿಎಚ್ 1)