ವಿಕ ಸುದ್ದಿಲೋಕ ಶಿಗ್ಗಾವಿ
ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದಲ್ಲಿತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿನಡೆದ ರಾಷ್ಟಿ್ರೕಯ ಲೋಕ ಅದಾಲತ್ ನಲ್ಲಿವಿವಿಧ ವ್ಯಾಜ್ಯ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡು, ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಎರಡು ಜೋಡಿ ದಂಪತಿ ಒಂದಾಗಿಸಿದ ಪ್ರಸಂಗ ಶನಿವಾರ ನಡೆದಿದೆ.
ದಿವಾಣಿ ನ್ಯಾಯಾಧೀಶರು ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಅಶ್ವಿನಿ ಚಂದ್ರಕಾಂತ ನೇತೃತ್ವದಲ್ಲಿಬಾಕಿ ಇದ್ದ 458 ಪ್ರಕರಣಗಳಲ್ಲಿ439 ಪ್ರಕರಣಗಳು ಇತ್ಯರ್ಥಗೊಂಡಿವೆ. ದಾವೆ ಪೂರ್ವ 5198 ಪ್ರಕರಣದಲ್ಲಿ3938 ಪ್ರಕರಣಗಳು ರಾಜಿಯಾದವು.
ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ್ ಎಸ್ . ತಳವಾರ ಅವರ ನ್ಯಾಯಾಲಯದಲ್ಲಿಬಾಕಿ ಇದ್ದ 274 ಪ್ರಕರಣಗಳಲ್ಲಿ270 ಪ್ರಕರಣಗಳು ಇತ್ಯರ್ಥಗೊಂಡಿವೆ. ದಾವೆಪೂರ್ವ 4758 ಪ್ರಕರಣಗಳಲ್ಲಿ3514 ಪ್ರಕರಣಗಳು ರಾಜಿಯಾದವು. ಕೌಟುಂಬಿಕ ಕಲಹದಿಂದ ಬೇರ್ಪಟ್ಟು ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಸಿದ್ದ ಇಬ್ಬರು ದಂಪತಿ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳ ಸೇರಿ ಸಮಾಲೋಚನೆ ಕೈಗೊಂಡು ದಂಪತಿಗಳ ಮನವೊಲಿಸುವಲ್ಲಿಯಶಸ್ವಿಯಾದರು.
ನಂದಿನಿ ಮತ್ತು ಪ್ರಸಾದ್ ಹಾಗೂ ಶಾಹೀನಾ ಮತ್ತು ರಾಜೇಸಾಬ ಕಾನಮೌಲಿ ದಂಪತಿ Üಳು ಭಿನ್ನಾಭಿಪ್ರಾಯ ಮರೆತು ಹೂಮಾಲೆ ಬದಲಿಸಿಕೊಳ್ಳುವ ಮೂಲಕ ಮತ್ತೇ ಒಂದಾಗಿ ಸಂಸಾರ ನಡೆಸಲು ಸಮ್ಮತಿಸಿದರು. ವಕೀಲರಾದ ಕೆ.ಎನ್ .ಭಾರತಿ, ಎಸ್ .ವೈ.ಹಂಚಿನಮನಿ, ಆರ್ .ಎಂ.ಹಾರೋಗೇರಿ ಅವರು ಮಹತ್ತರ ಪಾತ್ರ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಹಿರಿಯ-ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.

