ಡಿಸಿ ನಕಲಿ ಸಹಿ, ಐವರ ಬಂಧನ

Contributed byravimgl.kumar13@gmail.com|Vijaya Karnataka

ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಡಿಸಿ, ಎಡಿಸಿ ಸಹಿ ನಕಲು ಮಾಡಿ 15 ಲಕ್ಷ ರೂ. ಲಪಟಾಯಿಸಲು ಯತ್ನಿಸಿದ್ದಾರೆ. ಖಜಾನೆ ಅಧಿಕಾರಿಗಳ ಎಚ್ಚರಿಕೆಯಿಂದ ವಂಚನೆ ತಪ್ಪಿದೆ. ಡಾಟಾ ಎಂಟ್ರಿ ಆಪರೇಟರ್‌ ಸೈಯದ್‌ ಸಾಧಿಕ್‌ ಪರಾರಿಯಾಗಿದ್ದಾನೆ. ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ.

fake dc signature five arrested in theft case

ಕಿಕ್ಕರ್ : ಡಿಸಿ, ಎಡಿಸಿ ಸಹಿ ಫೋರ್ಜರಿ ಮಾಡಿ 15 ಲಕ್ಷ ಹಣ ದೋಚಲು ಯತ್ನ | ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ವಂಚನೆ ಬಯಲು

---

ಡಿಸಿ ನಕಲಿ ಸಹಿ , ಐವರ ಬಂಧನ

ವಿಕ ಸುದ್ದಿಲೋಕ ಚಿತ್ರದುರ್ಗ

ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾನಗರಾಭಿವೃದ್ಧಿ ಕೋಶದ ಎಫ್ ಡಿಎ, ಹೊರಗುತ್ತಿಗೆ ನೌಕರರು ಸೇರಿ ಫೋರ್ಜರಿ ಸಹಿ ಮೂಲಕ ಲಕ್ಷಾಂತರ ರೂ. ಲಪಟಾಯಿಸಲು ಮುಂದಾಗಿದ್ದ ಪ್ರಕರಣವೊಂದು, ಜಿಲ್ಲಾಖಜಾನೆ ಇಲಾಖೆ ಅಧಿಕಾರಿಗಳ ಸೂಕ್ಷತ್ರ್ಮ ಗ್ರಹಿಕೆಯಿಂದಾಗಿ ತಪ್ಪಿದೆ.

ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿ ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ಹೊರಗುತ್ತಿಗೆ ನೌಕರರ ವೇತನದ 15 ಲಕ್ಷ ರೂ. ಬಿಲ್ ಅನ್ನು ಖಜಾನೆಗೆ ರವಾನಿಸಿದ್ದ ನಗರಾಭಿವೃದ್ಧಿ ಕೋಶದ ಹೊರ ಗುತ್ತಿಗೆ ನೌಕರರಾದ ಸೈಯದ್ ಸಾಧಿಕ್ , ವಿಜಯಕುಮಾರ್ , ಎಫ್ ಡಿಎ ಮೆಹಬೂಬ್ ಬಾಷಾ ಹಾಗೂ ನಕಲಿ ದಾಖಲೆ ಒದಗಿಸಿದ ನಗರದ ವಿಎಂಎಚ್ ಎಂಟರ್ ಪ್ರೈಸಸ್ ಮಾಲೀಕ ವೆಂಕಟೇಶ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.

ಡಾಟಾ ಎಂಟ್ರಿಯೊಬ್ಬ ಪರಾರಿ:

ಚಿತ್ರದುರ್ಗ ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನನ್ವಯ, ವಿಎಂಎಚ್ ಎಂಟರ್ ಪ್ರೈಸಸ್ ಮಾಲೀಕ ವೆಂಕಟೇಶ, ಜಿಲ್ಲಾನಗರಾಭಿವೃದ್ಧಿ ಕೋಶದ ಹೊರಗುತ್ತಿಗೆ ನೌಕರರರಾದ ಫೈನಾನ್ಸ್ ಸ್ಪೆಷಲಿಸ್ಟ್ ವಿಜಯಕುಮಾರ್ , ಹೌಸಿಂಗ್ ಎಂಜಿನಿಯರ್ ವಿನಯ ಶರ್ಮಾ, ಸಾಮಾಜಿಕ ತಜ್ಞ ಬಸವರಾಜ್ ಹಾಗೂ ಜಿಲ್ಲಾನಗರಾಭಿವೃದ್ಧಿ ಕೋಶದ ಎಫ್ ಡಿಎ ಮೆಹಬೂಬ್ ಬಾಷಾ ಬಂಧಿತ ಆರೋಪಿಗಳು. ನಗರಾಭಿವೃದ್ಧಿ ಕೋಶದ ಡಾಟಾ ಎಂಟ್ರಿ ಆಪರೇಟರ್ ಸೈಯದ್ ಸಾಧಿಕ್ ಪರಾರಿಯಾಗಿದ್ದಾನೆ.

ಪ್ರಕರಣದಲ್ಲಿಐವರೂ ಆರೋಪಿಗಳನ್ನು ದಸ್ತಗಿರಿ ಮಾಡಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಲೆಮರೆಸಿಕೊಂಡ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಪ್ರಕರಣದಲ್ಲಿಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹಾಗೂ ಎಎಸ್ ಪಿ ಡಾ.ಆರ್ .ಶಿವಕುಮಾರ್ ಮಾರ್ಗದರ್ಶನದಲ್ಲಿ, ಚಿತ್ರದುರ್ಗ ಡಿವೈಸ್ ಪಿ ಅರುಣ ನಾಗೇಗೌಡ ನೇತೃತ್ವದಲ್ಲಿತನಿಖಾಧಿಕಾರಿ, ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕ ನಹೀಂ ಅಹಮದ್ ಒಳಗೊಂಡಂತೆ ತನಿಖಾ ಸಹಾಯಕ ಸಿಬ್ಬಂದಿ, ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.

-----

ಬಾಕ್ಸ್ ...

ಸಿಸಿ ಕ್ಯಾಮೆರಾದಲ್ಲಿಕೃತ್ಯ ಸೆರೆ

ಮಾ.12ರಂದು ಬೆಳಗ್ಗೆ 6.15ರಿಂದ 6.20ರ ಸಮಯದಲ್ಲಿಕಂದಾಯ ಶಾಖೆಗೆ ಅಕ್ರಮ ಪ್ರವೇಶ ಮಾಡಿದ ಡಾಟಾ ಎಂಟ್ರಿ ಆಪರೇಟರ್ ಸೈಯದ್ ಸಾಧಿಕ್ , ಕಳ್ಳತನದಿಂದ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯ ‘ಡಿಎಸ್ ಸಿ ಕೀ’ ತೆಗೆದುಕೊಂಡು, ಡಿಡಿಒ ಮತ್ತು ಮೇಲು ಸಹಿಗಳನ್ನು ಫೋರ್ಜರಿ ಮಾಡಿಕೊಂಡಿದ್ದಲ್ಲದೆ, ಜಿಲ್ಲಾಧಿಕಾರಿಯ ಡಿಎಸ್ ಸಿ ಕೀಯನ್ನು ದುರುಪಯೋಗ ಪಡಿಸಿಕೊಂಡು ಬಿಲ್ ಗಳನ್ನು ಖಜಾನೆಗೆ ಸಲ್ಲಿಸಿದ್ದಾನೆ.

ಜಿಲ್ಲಾನಗರಾಭಿವೃದ್ಧಿ ಕೋಶದ ನಗರ ಹಂತದ ತಾಂತ್ರಿಕ ಕೋಶದ ಸಿಬ್ಬಂದಿ ವೇತನದ ಹೆಸರಿನಲ್ಲಿಆರೋಪಿಗಳು ಸುಮಾರು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸಲ್ಲಿಸಿದ್ದಾರೆ. ಖಜಾನೆ ಇಲಾಖೆ ಅಧಿಕಾರಿಗಳು ಬಿಲ್ ನಲ್ಲಿದ್ದ ಸಹಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಹಿ ನಕಲು ಆಗಿರುವುದು ಕಂಡುಬಂದಿದೆ. ಕೂಡಲೆ ಅಧಿಕಾರಿಗಳು, ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಬಿಲ್ ಮತ್ತು ಡಿಸಿ ಕಚೇರಿಯಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ.

‘ಹೊರಗುತ್ತಿಗೆ ಏಜೆನ್ಸಿಯಿಂದ ಸೇವೆ ಪಡೆದಿರುವ ಕುರಿತಂತೆ ಯಾವುದೇ ದಾಖಲೆಗಳಿಲ್ಲವೆಂದು ಹೇಳಿ, 2023ರ ಏಪ್ರಿಲ್ ನಿಂದ 2024ರ ಮಾರ್ಚ್ವರೆಗೆ ವೇತನ ಪಾವತಿಗೆ ಡಿಯುಡಿಸಿ ನಿರಾಕರಿಸಿದ್ದರು. ಆರೋಪಿತ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಿ, ಎಫ್ ಡಿಎ ನೌಕರನನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ’ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸಸ್ಪೆಂಡ್ ಆದ ಎಫ್ ಡಿಎ ಹೆಸರಲ್ಲಿಹಣ ಲೂಟಿಗೆ ಸಿಬ್ಬಂದಿ ಇಳಿದಿದ್ದರು ಎನ್ನಲಾಗಿದೆ.

---

ಫೋಟೊ/ವೆಂಕಟೇಶ

ಫೋಟೊ/ಮೆಹಬೂಬ್ ಬಾಷಾ

ಫೋಟೊ/ಬಸವರಾಜ್

ಫೋಟೊ/ವಿನಯ ಶರ್ಮ

ಫೋಟೊ/ವಿಜಯಕುಮಾರ್