ನಿವೃತ್ತ ನೌಕರರ ಬೇಡಿಕೆ ಈಡೇರಿಸದ ಸರಕಾರ

Contributed bybommekallu@gmail.com|Vijaya Karnataka

ರಾಜ್ಯದ ನಿವೃತ್ತ ಸರಕಾರಿ ನೌಕರರ ನ್ಯಾಯ ಸಮ್ಮತ ಬೇಡಿಕೆಗಳನ್ನು ಸರಕಾರ ಈಡೇರಿಸಿಲ್ಲ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ, ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಬಜೆಟ್‌ನಲ್ಲೂ ಯಾವುದೇ ಪ್ರಸ್ತಾಪ ಇಲ್ಲ. ಸರಕಾರ ಭರವಸೆ ನೀಡುತ್ತಿದೆಯೇ ಹೊರತು ಕಾರ್ಯಗತಗೊಳಿಸುತ್ತಿಲ್ಲ. ಸಾವಿರಾರು ನಿವೃತ್ತ ನೌಕರರು ಕಾದು ಕುಳಿತಿದ್ದಾರೆ.

government neglects retired employees rights

(ಸಂಘದ ನಿವೃತ್ತ ಅಧ್ಯಕ್ಷ ನಾರಾಯಣಸ್ವಾಮಿ ಅಸಮಾಧಾನ)

ವಿಕ ಸುದ್ದಿಲೋಕ ಚಿಂತಾಮಣಿ

ಕರ್ನಾಟಕ ರಾಜ್ಯದ ಈಗಿನ ಮತ್ತು ಈ ಹಿಂದಿನ ಸರಕಾರಗಳು ರಾಜ್ಯದ ನಿವೃತ್ತ ಸರಕಾರಿ ನೌಕರರ ನ್ಯಾಯ ಸಮ್ಮತವಾದ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರಕಾರಿ ನೌಕರರ ಭವನದ ಸಭಾಂಗಣದಲ್ಲಿನಡೆದ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿಮಾತನಾಡಿದ ಅವರು, ಮುಖ್ಯಮಂತ್ರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ರಾಜ್ಯ ಸಂಘದ ಪದಾಧಿಕಾರಿಗಳು ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಜೆಟ್ ನಲ್ಲೂಯಾವುದೇ ಪ್ರಸ್ತಾಪ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸರಕಾರವು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತದೆ ಎಂಬ ಭರವಸೆ ನೀಡುತ್ತಿದೆಯೇ ಹೊರತು ಅದನ್ನು ಕಾರ್ಯಗತಗೊಳಿಸುವಲ್ಲಿವಿಫಲವಾಗಿದೆ. ರಾಜ್ಯದಲ್ಲಿಸಾವಿರಾರು ಮಂದಿ ನಿವೃತ್ತ ನೌಕರರು ಛಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ದೇವರು ಇನ್ನಾದರೂ ಸರಕಾರಕ್ಕೆ ಒಳ್ಳೆಯ ಬುದ್ಧಿ ಕೊಡಲಿ ನಿವೃತ್ತ ಬಂಧುಗಳ ಬಹುದಿನಗಳ ಬೇಡಿಕೆ ಈಡೇರಿವಂತಾಗಲೆಂದು ಭಗವಂತನಲ್ಲಿಪ್ರಾರ್ಥಿಸಿದರು.

ಜಿಲ್ಲಾಸಂಘದ ಉಪಾಧ್ಯಕ್ಷ ಎನ್ . ಗೋಪಾಲರೆಡ್ಡಿ, ಸಾಮಾಜಿಕ ಚಿಂತಕರಾದ ಬಿ.ವಿ.ರಾಮಚಂದ್ರರೆಡ್ಡಿ, ಸಿಎಂ. ವೀರಭದ್ರೇಗೌಡ, ಗಾನ ಕಲಾವಿದರಾದ ಗೀತಾ ಮೂರ್ತಿ ಮತ್ತು ಮಂಜುಳಾ, ಶಿಕ್ಷಕರಾದ ಎ.ಎಸ್ . ರಾಮಚಂದ್ರಮೂರ್ತಿ, ಜಿಲ್ಲಾಸಂಘದ ಉಪಾಧ್ಯಕ್ಷ ಕೆ.ವಿ. ಚೌಡಪ್ಪ, ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶಿವರಾಂ, ಕಾರ್ಯದರ್ಶಿ ಎಸ್ . ಆಂಜಿನಪ್ಪ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

14ಸಿಎಮ್ ವೈವಿ1

ಚಿಂತಾಮಣಿ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘದ ಮಾಸಿಕ ಸಭೆಯಲ್ಲಿಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.