ವಸತಿಶಾಲೆ ಪ್ರಿನ್ಸಿಪಾಲ್ ಅಮಾನತು
ಚನ್ನಗಿರಿ: ತಾಲೂಕಿನ ಮಾವಿನಹೊಳೆಯ ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲ ವಿ.ಎನ್ .ಗುರುಮೂರ್ತಪ್ಪರನ್ನು ಕಾರ್ಯಲೋಪ ಆಧಾರದಲ್ಲಿಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮಾವಿನಹೊಳೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿಕರ್ತವ್ಯ ನಿರ್ವಹಿಸುವಾಗ ಆಹಾರ ಸಾಮಗ್ರಿ ದಾಸ್ತಾನು ವ್ಯತ್ಯಾಸದ ಹಿನ್ನೆಲೆ ಗುರುಮೂರ್ತಪ್ಪನನ್ನು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ನಂತರವೂ ಪ್ರಭಾರ ಪ್ರಾಂಶುಪಾಲರಿಗೆ ದಾಖಲೆ ಹಸತಾಂತರಿಸದೆ, ಶಾಲೆಯ ದಿನ ನಿತ್ಯದ ಕಾರ್ಯಗಳಲ್ಲಿಹಸ್ತಕ್ಷೇಪ ಮಾಡುತ್ತದ್ದ ಹಿನ್ನೆಲೆಯಲ್ಲಿಕರ್ನಾಟಕ ನಾಗರಿಕ ಸೇವಾ ನಿಯಾಮವಳಿ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಘಗಳ ತಿದ್ದುಪಡಿ ನಿಯಮಗಳಂತೆ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್ .ಕಾಂತರಾಜು, ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಗುರುಮೂರ್ತಪ್ಪ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಇಲಾಖೆಯಿಂದ ವಿತರಣೆಯಾದ ಮಂಚಗಳು ಮತ್ತು ಬೆಡ್ ಗಳನ್ನು ವಿದ್ಯಾರ್ಥಿಗಳಿಗೆ ನೀಡದೆ, ದಾಸ್ತಾನು ಕೊಠಡಿಯಲ್ಲೇ ಇರಿಸಿದ್ದಲ್ಲದೆ, ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿರಲಿಲ್ಲ. ಈ ಹಿನ್ನಲೆಯಲ್ಲಿಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಗೆ ನೀಡಿದ ಸಮಜಾಯಿಷಿ ಸಮಂಜಸವಾಗಿರದ ಕಾರಣ, ಕರ್ತವ್ಯ ಲೋಪದ ಆಧಾರದಲ್ಲಿಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿತಿಳಿಸಲಾಗಿದೆ.
--
15ಸಿಎಚ್ ಎನ್ ಪಿ3
ವಿ.ಎನ್ .ಗುರುಮೂರ್ತಪ್ಪ.

