ನೀವೂ ಆಗಬಹುದು
ಸೂಪರ್ ಸ್ಟಾರ್ ರೈತ
ದಾವಣಗೆರೆ: ರೈತರ ಸಾಧನೆಗಳನ್ನು ಗುರುತಿಸಿ ವಿಜಯ ಕರ್ನಾಟಕ ದಿನ ಪತ್ರಿಕೆ ನೀಡುವ ಸೂಪರ್ ಸ್ಟಾರ್ ರೈತ 8ನೇ ವರ್ಷದ ಪ್ರಶಸ್ತಿಗಾಗಿ ದಾವಣಗೆರೆ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
---
* ಅರ್ಜಿ ಸಲ್ಲಿಕೆಗೆ ಮಾ.21 ಕೊನೆ ದಿನ
ಅರ್ಜಿ ಸಲ್ಲಿಸುವ ರೈತರು ತಮ್ಮ ಕೃಷಿ ಕುರಿತು ಸಮಗ್ರ ಮಾಹಿತಿ, ಅದಕ್ಕೆ ಸೂಕ್ತವಾದ ಪೋಟೋಗಳನ್ನು ಲಗತ್ತಿಸಬೇಕು. ಪೂರ್ಣ ವಿಳಾಸ, ಮೊಬೈಲ್ ನಂಬರನ್ನು ತಪ್ಪದೇ ನಮೂದಿಸಬೇಕು. ಎಲೆಮರೆ ಕಾಯಿಯಂತೆ ಮಾದರಿ ಕೃಷಿ ಮಾಡುತ್ತಿರುವ ರೈತರ ಬಗ್ಗೆ ಸಾರ್ವಜನಿಕರೂ ಮಾಹಿತಿ ಒದಗಿಸಬಹುದು. ಅರ್ಜಿ, ಫೋಟೊ, ವಿಡಿಯೊ ಹಾಗೂ ಪೂರಕ ದಾಖಲೆಗಳನ್ನು ಮಾರ್ಚ್ 21ರೊಳಗೆ ಕಚೇರಿಗೆ ಖುದ್ದಾಗಿ, ಅಂಚೆ ಅಥವಾ ವಾಟ್ಸ್ ಆ್ಯಪ್ ಮೂಲಕವೂ ಕಳುಹಿಸಬಹುದು.
----
* ಯಾರೆಲ್ಲಅರ್ಜಿ ಸಲ್ಲಿಸಬಹುದು?
ಸಾವಯವ ಕೃಷಿ , ಸಹಜ ಕೃಷಿ, ಸಮಗ್ರ ಕೃಷಿ, ನೈಸರ್ಗಿಕ ಸೇರಿದಂತೆ ನಾನಾ ಪದ್ಧತಿಯಲ್ಲಿಕೃಷಿ ಮತ್ತು ತೋಟಗಾರಿಕೆ ಮಾಡುತ್ತಿರುವವರು, ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆ, ಜೇನು, ರೇಷ್ಮೆ, ಮೀನು, ಮೊಲ ಸಾಕಣೆ, ಕುರಿ ಸಾಕಣೆ, ನರ್ಸರಿ, ಅಡಕೆ ಸಿಪ್ಪೆಯಲ್ಲಿಗೊಬ್ಬರ ತಯಾರಿಗೆ ಮಾಡುತ್ತಿರುವವರೂ ಅರ್ಜಿ ಸಲ್ಲಿಸಬಹುದು.
----ಲೋಗೋ---
* ಅರ್ಜಿ ಸಲ್ಲಿಸಬೇಕಾದ ವಿಳಾಸ:
ವಿಜಯ ಕರ್ನಾಟಕ, ಸೂಪರ್ ಸ್ಟಾರ್ ರೈತ ವಿಭಾಗ,
307/10, 3ನೇ ಮಹಡಿ, ಮೂರ್ತಪ್ಪ ಕಾಂಪ್ಲೆಕ್ಸ್ ,
ವಿದ್ಯಾರ್ಥಿ ಭವನ, ಹದಡಿ ರಸ್ತೆ, ದಾವಣಗೆರೆ- 577002
---
ವ್ಯಾಟ್ಸಪ್ ಸಂಖ್ಯೆ: 78998 73637

