ದೇಶಿ ಆಟಗಳತ್ತ ಒಲವು ಇರಲಿ
ವಿಕ ಸುದ್ದಿಲೋಕ ಅಳ್ನಾವರ
ಯುವಕರು ಮೊಬೈಲ್ ಗಳನ್ನು ಬದಿಗಿಟ್ಟು ದೇಶಿ ಆಟಗಳತ್ತ ಒಲವು ಹರಿಸಬೇಕು, ಅಂದಾಗ ಮಾತ್ರ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ ಎಂದು ಪಪಂ ಮಾಜಿ ಸದಸ್ಯ ಯಲ್ಲಾರಿ ಹುಬ್ಬಳಿಕರ ಹೇಳಿದರು.
ಪಟ್ಟಣದ ಜೈ ಹನುಮಾನ ತಾಲೀಮ್ ಸಂಘದವರು ಆಯೋಜಿಸಿದ ಮೂರು ದಿನದ ಹೊನಲು ಬೆಳಕಿನ ಅಳ್ನಾವರ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ದೇಶಿ ಆಟಗಳು ಮನರಂಜನೆಯ ಜತೆಗೆ ನಮ್ಮ ದಣಿವನ್ನು ನಿವಾರಿಸುತ್ತವೆ. ಹಿರಿಯರು ಯುವಕರಿಗೆ ಸಾಹಸ ಕ್ರೀಡೆ, ಬೌದ್ಧಿಕ ಕ್ರೀಡೆಗಳ ತರಬೇತಿ ನೀಡಬೇಕು ಹಾಗೂ ಇಂದಿನ ಯುವ ಸಮೂಹ ಮಾತ್ರ ದುಷ್ಟಟಗಳಿಗೆ ದಾಸರಾಗುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.
ಕ್ರೀಡಾಪ್ರೇಮಿ ಮಂಜುನಾಥ ನರಸನ್ನವರ ಮಾತನಾಡಿ, ಯುವಕರು ಪಾಠದ ಜತೆಗೆ ಆಟದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಗ್ರಾಮೀಣ ಭಾಗದ ಯುವಕರು ತಮ್ಮ ನಿರಂತರ ಆಟದ ತಾಲೀಮಿನ ಮೂಲಕ ವಿದೇಶಿ ನೆಲದಲ್ಲಿಯೂ ಸ್ವದೇಶಕ್ಕೆ ಕೀರ್ತಿ ತರುವಂತವರಾಗಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಕ ಸಂಘದ ಶಿಕ್ಷಕರು ನಿರ್ಣಾಯಕರಾಗಿದ್ದಾರೆ. ನಾರಾಯಣ ಮೋರೆ, ರಮೇಶ ಕುನ್ನೂರಕರ, ರಾಹುಲ್ ಶಿಂಧೆ, ವಿವೇಕ ಪಾಟೀಲ, ವಿನಾಯಕ ಬರಗುಂಡಿ, ಯತೇಶ ಖಿರೋಜಿ, ಶಿವರಾಜ ಬರಗುಂಡಿ, ಸಚಿನ ಲಿಂಗನಮಠ, ಯಲ್ಲಾರಿ ಹುಬ್ಳಳಿಕರ, ಓಂಕಾರ ನಿಟ್ಟೂರಕರ, ನಾರಾಯಣ ಕಂಗ್ರಾಳಕರ, ರಾಹುಲ್ ಮಿಟಗಾರ, ಜಯವಂತ ಪೆಡ್ನೇಕರ, ವಿಶಾಲ ಕಾಕತ್ಕರ, ಕಿರಣ ಗಡಕರ ಇದ್ದರು.
ಹಸನ್ ಅಲಿ ಶೇಖ, ಲಖನ ಬರಗುಂಡಿ, ವಿವೇಕ ಪಾಟೀಲ, ಬಸವರಾಜ ಕಕ್ಕೇರಿಕರ, ಅಣ್ಣಾ ಟ್ರೇಡರ್ಸ್ , ಅಂಬಿಕಾ ಬೇಕರಿಯವರು ಬಹುಮಾನ ಹಾಗೂ ಟ್ರೋಫಿಗಳ ಪ್ರಾಯೋಜಕತ್ವ ವಹಿಸಿದ್ದಾರೆ.
ಪೋಟೊ ಕ್ಯಾಫ್ಷನ್ 14 ಎ ಎಲ್ ಎನ್ 1
ಅಳ್ನಾವರದಲ್ಲಿಜೈ ಹನುಮಾನ ತಾಲೀಮ್ ಸಂಘವು ಹಮ್ಮಿಕೊಂಡ ಹೊನಲು ಬೆಳಕಿನ ಅಳ್ನಾವರ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯನ್ನು ಕ್ರೀಡಾ ಪ್ರೇಮಿಗಳು ಉದ್ಘಾಟಿಸಿದರು.

