ವಿಕ ಸುದ್ದಿಲೋಕ ಮೂಡುಬಿದಿರೆ
ಇಲ್ಲಿನ ಜೈನ ಮಠ ದ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾರಥ್ಯದಲ್ಲಿಭಾರತೀಯ ಸಂತ ಮಹಾ ಪರಿಷತ್ತು ಮತ್ತು ಧವಳತ್ರಯ ಟ್ರಸ್ಟ್ ಶ್ರೀ ದಿಗಂಬರ ಜೈನ ಮಠ ಜಂಟಿ ಆಯೋಜನೆಯಲ್ಲಿ ಮಹಾವೀರ ಭವನದಲ್ಲಿನಡೆಯಲಿರುವ ಸಂತ ಸಮ್ಮೇಳನ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಡಾ.ಚಾರುಕೀರ್ತಿ ಸ್ವಾಮೀಜಿ ಮಠದಲ್ಲಿಬಿಡುಗಡೆಗೊಳಿಸಿದರು. ಸಮಿತಿಯ ಸಂಚಾಲಕ ಎಂ. ಬಾಹುಬಲಿ ಪ್ರಸಾದ್ , ಸಹ ಸಂಚಾಲಕ ಎಂ. ದಯಾನಂದ ಪೈ ಅಲಂಗಾರು, ಪ್ರಧಾನ ಕಾರ್ಯದರ್ಶಿ ಎಂ. ಶಾಂತಾರಾಮ ಕುಡ್ವ, ಜಂಟಿ ಕಾರ್ಯದರ್ಶಿಗಳಾದ ಎಂ. ರಾಘವೇಂದ್ರ ಭಂಡಾರ್ಕರ್ , ಕೆ.ಶಿವ ಭಂಡಾರ್ಕರ್ , ಡಾ. ಪ್ರಸನ್ನ ಕಾಕುಂಜೆ, ನಮಿರಾಜ… ಜೈನ್ , ನ್ಯಾಯವಾದಿಗಳಾದ ಕೆ. ಆರ್ . ಪಂಡಿತ್ , ಚೇತನ್ ಕುಮಾರ್ ಶೆಟ್ಟಿ, ಕಾಳಿಕಾಂಬಾ ದೇವಳದ ಮೊಕ್ತೇಸರ ಶಿವರಾಂ ಆಚಾರ್ಯ, ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಳದ ಮೊಕ್ತೇಸರ ದಯಾನಂದ ಹೆಗ್ಡೆ,ಉದ್ಯಮಿ ಯೋಗೀಶ್ ಆಚಾರ್ಯ,ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

