ವಿಕ ಸುದ್ದಿಲೋಕ ಚಾಮರಾಜನಗರ
ರಂಜಾನ್ ಹಬ್ಬದ ಹಿನ್ನೆಲೆ ನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಸಭಾಂಗಣದಲ್ಲಿಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಾನಾ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿ ಅಭಿನಂದಿಸಿ ಸಿಹಿ ಹಂಚಿದರು.
ಈ ಸಂದರ್ಭ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘‘ದೇಶದ್ಯಾಂತ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧÜವರು ಸಡಗರದಿಂದ ಆಚರಿಸುತ್ತಿದ್ದು, ಎಲ್ಲರಿಗೂ ಒಳಿತನ್ನು ಬಯಸುವುದು ಸರ್ವಧರ್ಮದ ಆಶಯ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ,’’ ಎಂದು ಶುಭಾಶಯ ಕೋರಿದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ , ಮಾಜಿ ಅಧ್ಯಕ್ಷರಾದ ಸಯ್ಯದ್ ರಫಿ, ಸುಹೇಲ್ ಆಲಿಖಾನ್ , ಮುಖಂಡರಾದ ಆಯುಬ್ ಖಾನ್ , ನಯಾಜ್ ಪಾಷಾ, ಇಬ್ರಾನ್ ಅಹಮದ್ , ಅಪ್ಸರ್ ಅಹಮದ್ , ಪರ್ವೇಜ್ ಸೈಯದ್ ಇರ್ಷದ್ , ನಗರಸಭಾ ನಾಮ ನಿರ್ದೇಕ ಸ್ವಾಮಿ, ರಾಜು ಸೇರಿದಂತೆ ಮುಸ್ಲಿಂ ಬಾಂಧÜವರು ಹಾಜರಿದ್ದರು.
ಸಿಎಚ್ ಎನ್ 15ಎಸ್ ಎಂಆರ್ 4
ರಂಜಾನ್ ಹಬ್ಬದ ಹಿನ್ನೆಲೆ ಚಾಮರಾಜನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಶಾಸಕ ಸಿ,ಪುಟ್ಟರಂಗಶೆಟ್ಟಿ ಅವರು ನಾನಾ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿ ಅಭಿನಂದಿಸಿದರು.

