ಬಿಳಿಜೋಳ ಖರೀದಿ ಪ್ರಕ್ರಿಯೆ ಆರಂಭ
ರಾಯಚೂರು: ಜಿಲ್ಲೆಯಲ್ಲಿ2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಋುತುವಿನಲ್ಲಿಬಿಳಿಜೋಳ ಬೆಳೆದಿರುವ ರೈತರು ಈಗಾಗಲೇ ತಮ್ಮ ಎಫ್ ಐಡಿಯೊಂದಿಗೆ ನೋಂದಣಿ ಮಾಡಿಕೊಂಡಿದ್ದು, ಮಾ.17ರಿಂದ ಜಿಲ್ಲೆಯಲ್ಲಿರುವ ಎಲ್ಲಖರೀದಿ ಕೇಂದ್ರಗಳಲ್ಲಿವಿಧ್ಯುಕ್ತವಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.
ಖರೀದಿ ಕೇಂದ್ರಗಳಲ್ಲಿನೋಂದಾಯಿಸಲಾದ ಅನುಕ್ರಮವಾರು ಮೊದಲು ಮುಂಗಾರು ಋುತುವಿನಲ್ಲಿಬೆಳೆದ ರೈತರಿಂದ ಖರೀದಿ ಮಾಡಲಾಗುವುದು. ರೈತರು ಆತುರ ಪಡದೇ ಅಥವಾ ನೂಕು ನುಗ್ಗಲು ಮಾಡದೇ ತಮಗೆ ಖರೀದಿ ಕೇಂದ್ರದಿಂದ ನೀಡಲಾಗುವ ದಿನಾಂಕವಾರು ತಾವು ಬೆಳೆದಿರುವ ಜೋಳ ನೀಡಬೇಧಿಕು. ಅಲ್ಲದೇ ಖರೀದಿ ಕೇಂದ್ರಕ್ಕೆ ಬರುವ ಮುಂಚಿತವಾಗಿಯೇ ದಾಸ್ತಾನಿನ ಗುಣಮಟ್ಟ, ತೇವಾಂಶ ಹಾಗೂ ಸ್ವಚ್ಛತೆಯ ಬಗ್ಗೆ ಖಾತಧಿರಿ ಪಡಿಸಿಕೊಳ್ಳಧಿಬೇಕು. ಈಗಾಗಲೇ ಜಿಲ್ಲೆಯಲ್ಲಿನೋಂದಣಿಯಾಗಿರುವ ಸರ್ವೆ ನಂಬಧಿರ್ ಹಾಗೂ ಎಫ್ ಐಡಿಗಳನ್ನು ಬೆಳೆದರ್ಶಕ ಆಪ್ ಮುಖಾಂತರ ನೈಜತೆ ಪರಿಶೀಲಿಸಲಾಗಿ, ಸಂಶಯಾತ್ಮಕ ಹಾಗೂ ಬಿಳಿ ಜೋಳ ಬೆಳೆಯದೇ ಇರುವ ಸರ್ವೆ ನಂಬಧಿರ್ ವಾರು ಎಫ್ ಐಡಿಗಳನ್ನು ಬ್ಲಾಕ್ ಮಾಡಲು ಕ್ರಮವಹಿಸಲಾಗಿದೆ. ಇದಕ್ಕೆ ಆಕ್ಷೇಪಣೆಗಳೇನಾದರೂ ಇದ್ದರೆ ಸಮರ್ಥನೀಯ ದಾಖಲೆಗಳೊಂದಿಗೆ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಬಿಳಿಜೋಳ ಬೆಳೆಯದೇ ನೋಂದಣಿ ಮಾಡಿಕೊಂಡು ಖರೀದಿ ಕೇಂದ್ರಗಳಿಗೆ ಜೋಳ ಸರಬರಾಜು ಮಾಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಖರೀದಿಯ ಹಣವನ್ನೂ ತಡೆಹಿಡಿಯಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.
* 16ಎಂಎಧಿಸ್ 05 ( ಜಿಲ್ಲಾಧಿಕಾರಿ ನಿತೀಶ್ ಕೆ.

