ಬೂತ್ ಮಟ್ಟದಿಂದ ಕಾಂಗ್ರೆಸ್ ಬಲಪಡಿಸಲು ಒತ್ತು
((ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ))
ವಿಕ ಸುದ್ದಿಲೋಕ ತ್ಯಾಮಗೊಂಡ್ಲು
ಮುಂಬರವ ಚುನಾವಣೆ ಹಿನ್ನೆಲೆಯಲ್ಲಿಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸುತ್ತಿದ್ದು, ಇದಕ್ಕಾಗಿ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ ಎಂದು ತ್ಯಾಮಗೊಂಡ್ಲುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.
ತ್ಯಾಮಗೊಂಡ್ಲುಹೋಬಳಿಯ ಖಾಸಗಿ ರೆಸಾರ್ಟ್ ನಲ್ಲಿತ್ಯಾಮಗೊಂಡ್ಲುಬ್ಲಾಕ್ ಕಮಿಟಿ ವತಿಯಿಂದ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿಅವರು ಮಾತನಾಡಿದರು.
ಪಕ್ಷದ ಬಲರ್ವಧನೆಯನ್ನು ಬೂತ್ ಮಟ್ಟದಿಂದಲೇ ಪ್ರಾರಂಭ ಮಾಡಬೇಕು. ಬೂತ್ ಮಟ್ಟದಲ್ಲಿಪಕ್ಷ ಸಂಘಟನೆಯಾದರೆ ಯಾವ ಚುನಾವಣೆಯನ್ನು ಬೇಕಾದರೂ ನಾವು ಎದುರಿಸಬಹುದು ಎಂದರು.
ಕಳೆದ ಎರಡುವರೆ ವರ್ಷ ಅವಧಿಯಲ್ಲಿಶಾಸಕ ಎನ್ .ಶ್ರೀನಿವಾಸ್ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ ್ಯಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಗ್ಯಾಂರಟಿ ಯೋಜನೆಗಳು, ಅದರ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿ, ನಮ್ಮ ಜನಪರ ಆಡಳಿತವನ್ನು ಪರಿಚಯಿಸುವ ಕಾರ ್ಯವನ್ನು ಪ್ರತಿ ಬೂತ್ ಮಟ್ಟದಲ್ಲಿನಡೆಯಬೇಕು ಎಂದು ಹೇಳಿದರು.
ತ್ಯಾಮಗೊಂಡ್ಲುಹೋಬಳಿ ವ್ಯಾಪ್ತಿಯಲ್ಲಿನ ಮಣ್ಣೆ, ದೊಡ್ಡಬೆಲೆ, ಹಸಿರುವಳ್ಳಿ, ಕೋಡಿಗೇಹಳ್ಳಿ, ಕಳಲುಘಟ್ಟ, ಅರೆಬೊಮ್ಮನಹಳ್ಳಿ, ಕುಲುವನಹಳ್ಳಿ, ಮರಳಕುಂಟೆ ಹಾಗೂ ತ್ಯಾಮಗೊಂಡ್ಲುಗ್ರಾಮ ಪಂಚಾಯತಿಯಲ್ಲಿನ ಪ್ರತ ಬೂತ್ ಗಳಿಗೂ ಅಧ್ಯಕ್ಷ ಹಾಗೂ ಕಮಿಟಿಯನ್ನು ರಚಿಸಲಾಯಿತು. ಪಂಚಾಯತಿ ಮಟ್ಟದಲ್ಲಿಒಂದು ಬ್ಲಾಕ್ ಕಮಿಟಿಯನ್ನು ರಚಿಸಿ, ಇದರ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿತ್ಯಾಮಗೊಂಡ್ಲುಗ್ರಾಪಂ ಮಾಜಿ ಅಧ್ಯಕ್ಷರಾದ ಜಗದೀಶ್ , ಸಾದತ್ ಉಲ್ಲಾ, ವಾಸುದೇವ್ , ಎನ್ ಪಿಎ ಸದಸ್ಯ ಆಂಜನಮೂರ್ತಿ, ಮಾಜಿ ಸದಸ್ಯ ಪ್ರಕಾಶ್ ಬಾಬು, ಹಸಿರುವಳ್ಳಿ ಕುಮಾರ್ , ಅನಂತರಾಜು, ಪುರುಷೋತ್ತಮ್ ಗೌಡ, ಚಿಕ್ಕೇಗೌಡ, ಚನ್ನಕೃಷ್ಣ, ರಾಮಮೂರ್ತಿ, ಚಂದ್ರಣ್ಣ, ದೊಡ್ಡಬೆಲೆ ಗಂಗಣ್ಣ, ಕಳಲುಘಟ್ಟ ಗ್ರಾಪಂ ಮುಖಂಡರಾದ ನರಸಿಂಹಮೂರ್ತಿ, ಆಂಜನಮೂರ್ತಿ, ಧರಣೀಶ, ಭಾಸ್ಕರ್ , ಮಂಜುನಾಥ್ , ವಾದಕುಂಟೆ ಚನ್ನಕೃಷ್ಣ, ಸೋಮಶೇಖರ್ , ಹರೀಶ್ , ಕೃಷ್ಣಸ್ವಾಮಿ, ಮರಳಕುಂಟೆ ಮಾರುತಿ, ರವಿಕುಮಾರ್ ಭಾಗವಹಿಸಿದ್ದರು.
15ತ್ಯಾಮಪೋಟೊ1
ತ್ಯಾಮಗೊಂಡ್ಲುಬ್ಲಾಕ್ ಕಮಿಟಿ ಅಧ್ಯಕ್ಷ ಹನುಮಂತೇಗೌಡ ಹಾಗೂ ಮುಖಂಡರು ಬೂತ್ ಮಟ್ಟದ ಕಮಿಟಿಗೆ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಿದರು.

