ಅಂಧÜತ್ವ ನಿವಾರಣೆಗೆ ಸಹಕರಿಸಿ

Contributed byvijendraprabhubr@gmail.com|Vijaya Karnataka

ಬನ್ನೂರಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ರೋಟರಿ ಸಂಸ್ಥೆ, ಲಯನ್ಸ್ ಕ್ಲಬ್ ಮತ್ತು ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು. 170ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಪೊರೆ, ಗ್ಲಾಕೋಮ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಯಿತು. ಕಣ್ಣಿನ ಪೊರೆ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಲಾಯಿತು.

free eye check up camp a new path for the visually impaired

ಬನ್ನೂರಿನಲ್ಲಿಉಚಿತ ಕಣ್ಣು ತಪಾಸಣಾ ಶಿಬಿರ

ವಿಕ ಸುದ್ದಿಲೋಕ ಬನ್ನೂರು

ಕತ್ತಲಿಂದ ಬೆಳಕಿನೆಡೆಗೆ ಸಾಗಲು, ಅಂದತ್ವದಲ್ಲಿಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರು, ದೃಷ್ಟಿಹೀನರಿಗಾಗಿ ನಡೆಸುತ್ತಿರುವಂತ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಜೀವನ ನಡೆಸಿ ಎಂದು ಮಾಜಿ ರೋಟರಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.

ಪಟ್ಟಣದ ರೋಟರಿ ಸಂಸ್ಥೆ , ಕಾನ್ ಸಿಂಗ್ ಜೀ ರಾಜ್ ಪುರೋಹಿತ್ , ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್ , ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿದೃಷ್ಟಿಹೀನರ ಸಂಖ್ಯೆ ಅದರಲ್ಲೂಗ್ರಾಮೀಣ ಪ್ರದೇಶದಲ್ಲಿರುವಂತ ದೃಷ್ಟಿಹೀನರ ಸಂಖ್ಯೆ ಅಧಿಕವಾಗಿದ್ದು, ಅವರಿಗೆ ಅನುಕೂಲವಾಗಬೇಕು ಎನ್ನುವಂತ ಮಹತ್ವಾಕಾಂಕ್ಷೆಯಿಂದ ಈ ಸೇವಾ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.

ಪ್ರತಿ ತಿಂಗಳ 2ನೇ ಶನಿವಾರ ಈ ಶಿಬಿರ ನಡೆಯುತ್ತಿದ್ದು, ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿಗೀಜು ಬರುವುದು, ಹತ್ತಿರ ಮತ್ತು ದೂರ ದೃಷ್ಟಿ ದೋಷ, ಕಣ್ಣಿನಲ್ಲಿಬಿರುಕು ಉಂಟಾಗುವುದು, ವಾರೆ ಕಣ್ಣು, ರಾತ್ರಿ ಕುರುಡುತನಕ್ಕೆ ಇಲ್ಲಿಚಿಕಿತ್ಸೆ ನೀಡಲಾಗುವುದು. ನುರಿತ ವೈದ್ಯರಿಂದ ಶಿಬಿರಾರ್ಥಿಗಳ ಕಣ್ಣನ್ನು ಪರೀಕ್ಷಿಸಿ, ಕಣ್ಣಿನ ಪೊರೆ ಇರುವವರನ್ನು ಆಯ್ಕೆ ಮಾಡಿ, ಅವರ ಆರೋಗ್ಯವನ್ನು ಪರೀಕ್ಷೆ ಮಾಡಿ, ನಂತರ ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ, ಶಸ್ತ್ರ ಚಿಕಿತ್ಸೆ ಮಾಡಿಸಿ ಪುನಃ ಸ್ವಸ್ಥಳಕ್ಕೆ ತಂದು ಬಿಡಲಾಗುವುದು ಎಂದು ತಿಳಿಸಿದರು.

ವಿವಿಧ ಗ್ರಾಮದಿಂದ ಸುಮಾರು 170ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡರು. ಲಯನ್ ಕೆ.ರಾಜೇಶ್ ಕುಮಾರ್ , ವಿಜಯ್ ಕುಮಾರ್ , ಡಾ.ವಿಕಾಸ್ ಕುಮಾರ್ , ಡಾ. ಧರ್ಮೇಂದ್ರ ಕುಮಾರ್ , ವನ್ಯ ರಾಜ್ ಪುರೋಹಿತ್ , ವಿರಾಟ್ ರಾಜ್ ಪುರೋಹಿತ್ , ಸಂತೋಷ್ ಕುಮಾರಿ, ಯಾಸೀನ್ , ನಂಜುಂಡಸ್ವಾಮಿ, ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿಸಿದ್ದರು.

15 ಬನ್ನೂರು 1

ಬನ್ನೂರಿನಲ್ಲಿರೋಟರಿ ಸಂಸ್ಥೆ , ಕಾನ್ ಸಿಂಗ್ ಜೀ ರಾಜ್ ಪುರೋಹಿತ್ , ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್ , ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.