ಹಾಸ್ಟೆಲ್ ಗಳಿಗೆ ಬರುವ ಸರಕಾರಿ ಸೌಕರ್ಯ ಕಾಳಸಂತೆಯಲ್ಲಿಮಾರಾಟ

Contributed bysathyabudikote@gmail.com|Vijaya Karnataka

ಬಂಗಾರಪೇಟೆ ಕೆಜಿಎಫ್ ತಾಲೂಕಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳಲ್ಲಿ ಸರಕಾರಿ ಸೌಕರ್ಯಗಳ ಕಳ್ಳಸಾಗಣೆ ನಡೆದಿದೆ. ವಾರ್ಡನ್ ಶಿವಲೀಲ ಮತ್ತು ಅಡುಗೆಯವರು ಮಕ್ಕಳ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಅಂಬೇಡ್ಕರ್ ವೀರಸೇನೆ ಕಾರ್ಯಕರ್ತರು ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

allegations of government property sale in hostels

ವಾರ್ಡನ್ , ಅಡುಗೆಯವರ ವಿರುದ್ಧ ಆರೋಪ

ವಿಕ ಸುದ್ದಿಲೋಕ ಬಂಗಾರಪೇಟೆ

ಬಂಗಾರಪೇಟೆ, ಕೆಜಿಎಫ್ ತಾಲೂಕಿನಲ್ಲಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳಲ್ಲಿನ ವಾರ್ಡನ್ ಗಳು, ಅಡುಗೆಯವರು ಸರಕಾರದಿಂದ ಬರುವ ಮೂಲಸೌಕರ್ಯಗಳನ್ನು ಕಾಳ ಸಂತೆಯಲ್ಲಿಮಾರಾಟ ಮಾಡಿ ಮಕ್ಕಳ ಹಕ್ಕು ಕಸಿಯುತ್ತಿದ್ದಾರೆಂದು ಅಂಬೇಡ್ಕರ್ ವೀರಸೇನೆ ಕಾರ್ಯಕರ್ತರು ಆರೋಪಿಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಕುಮಾರಿ ಅವರಿಗೆ ಮನವಿ ನೀಡಿ, ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಬಟ್ರಕುಪ್ಪ ಅರುಣ್ ಅವರು, ಪಟ್ಟಣದ ಅಂಬೇಡ್ಕರ್ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಲೀಲ ಎಂಬುವವರು ಅಲ್ಲಿನ ಮಕ್ಕಳ ಬೆಡ್ ಗಳು, ಫ್ಯಾನ್ ಇತ್ಯಾದಿ ವಸ್ತುಗಳನ್ನು ಕಾಳಸಂತೆಯಲ್ಲಿಮಾರಾಟ ಮಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿವೆ. ಆದರೆ ಶಿವಲೀಲ ಅವರು ಅಡುಗೆಯವರಾದ ಮಹೇಶ್ ಅವರಿಗೆ ಇಲ್ಲಿನ ವಸ್ತುಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದು, ಸಹಾಯಕ ನಿರ್ದೇಶಕರಿಗೆ ಯಾವುದೇ ರೀತಿ ಪತ್ರ ವ್ಯವಹಾರ ಹಾಗೂ ಅನುಮತಿ ಪಡೆಯದೆ ಇಲ್ಲಿನ ವಸ್ತುಗಳನ್ನು ಮಾರಾಟ ಮಾಡಿದ್ದು ಸರಕಾರದ ಕೆಲಸವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಮಹೇಶ್ ಅವರು ಶಿವಲೀಲ ಅವರಿಗೆ ನೀಡಿರುವ ಪತ್ರದಲ್ಲಿನಾನು ಪ್ರಭಾರ ವಾರ್ಡನ್ ಎಂದು ಸಹಿ ಮಾಡಿ ಇಲ್ಲಿನ ವಸ್ತುಗಳನ್ನು ಎತ್ತುವಳಿ ಮಾಡಿಕೊಂಡು ಹೋಗಿದ್ದಾರೆ. ಮಹೇಶ್ ಅವರಿಗೆ ವಾರ್ಡನ್ ಆಗಿ ಮುಂಬಡ್ತಿ ನೀಡಿ ಆದೇಶ ಮಾಡಿರುವುದು ಯಾರು? ಆದರೆ ಇಷ್ಟೆಲ್ಲಾನಡೆದ ತಕ್ಷಣ ಶಿವಲೀಲ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಕೈತೊಳೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.

ಇದರ ಬಗ್ಗೆ ವಿಸ್ತಾರವಾಗಿ ತನಿಖೆ ಮಾಡಿ ವಾರ್ಡನ್ ಶಿವಲೀಲ ಹಾಗೂ ಅಡುಗೆಯವರಾದ ಮಹೇಶ್ ಅವರನ್ನು ಈ ಕೂಡಲೇ ಅಮಾನತು ಮಾಡಿ ಸರಕಾರದ ಕೆಲಸ ದುರುಪಯೋಗಪಡಿಸಿಕೊಂಡಿರುವುದರ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಿ ಕೆಲಸದಿಂದ ವಜಾ ಮಾಡಬೇಕೆಂದು ನಮ್ಮ ಸಂಘಟನೆ ಒತ್ತಾಯಿಸುತ್ತದೆ. 10 ದಿನಗಳೊಳಗೆ ತಾವು ಕ್ರಮ ಕೈಗೊಳ್ಳದೆ ಇದ್ದಲ್ಲಿಇಲಾಖೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿಅಂಬರೀಷ್ , ಸುಮಂತ್ , ರವಿಕುಮಾರ್ , ಹಾಗೂ ಇನ್ನಿತರರು ಇದ್ದರು.

17 ಬಂಗಾರಪೇಟೆ: ಅಂಬೇಡ್ಕರ್ ವೀರಸೇನೆ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಕುಮಾರಿಗೆ ಮನವಿ ಪತ್ರ ಸಲ್ಲಿಸಿದರು.