ಕ್ಷಯರೋಗಿಗಳಿಗೆ ಬೇಕು ಭರವಸೆ ಬೆಳಕು

Contributed bypbdkdl72@gmail.com|Vijaya Karnataka

ಕೊಡೇಕಲ್‌ನಲ್ಲಿ ಕ್ಷಯ ರೋಗಿಗಳಿಗೆ ನಿಕ್ಷಯ ಮಿತ್ರ ಯೋಜನೆಯಡಿ ಪೌಷ್ಟಿಕ ಆಹಾರ ವಿತರಿಸಲಾಯಿತು. ಜಿಪಂ ಸಿಇಒ ಲವೀಶ್‌ ಒರಡಿಯಾ ಅವರು ಮಾತನಾಡಿ, ಕ್ಷಯ ರೋಗ ಕೇವಲ ದೈಹಿಕ ಕಾಯಿಲೆಯಲ್ಲ, ಅದು ಮಾನಸಿಕ ಸ್ಥೈರ್ಯವನ್ನು ಪರೀಕ್ಷಿಸುತ್ತದೆ. ರೋಗಿಗಳಿಗೆ ಸಮಾಜದಿಂದ ಮರುಕದ ನೋಟವಲ್ಲ, ಬದಲಾಗಿ ಬದುಕುವ ಭರವಸೆ ಮೂಡಿಸುವ ಬೆಂಬಲ ಬೇಕು ಎಂದರು. ಕ್ಷಯ ರೋಗ ಗುಣಪಡಿಸಬಹುದಾದ ಕಾಯಿಲೆ ಎಂದು ವೈದ್ಯರು ತಿಳಿಸಿದರು.

nutritional food distribution for tb patients nikshay mitra program provides hope

ಚಿತ್ರ17ಕೆಡಿಎಲ್ 1

ಕೊಡೇಕಲ್ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿನಡೆದ ನಿಕ್ಷಯ ಮಿತ್ರ ಕಾರ್ಯಕ್ರಮದಲ್ಲಿಕ್ಷಯ ರೋಗಿಗಳಿಗೆ ಜಿಪಂ ಸಿಇಒ ಲವೀಶ್ ಒರಡಿಯಾ ಅವರು ಪೌಷ್ಟಿಕ ಆಹಾರ ವಿತರಿಸಿದರು. ಡಿಎಚ್ ಒ ಡಾ.ಮಹೇಶ ಬಿರಾದಾರ,ಟಿಎಚ್ ಒ ಡಾ.ಆರ್ .ವಿ.ನಾಯಕ್ ಸೇರಿ ಅನೇಕರಿದ್ದರು.

ಚಿತ್ರ17ಕೆಡಿಎಲ್ 1 ಎ

ಕೊಡೇಕಲ್ ಗ್ರಾಮದಲ್ಲಿನಡೆದ Ü ಕ್ಷಯ ರೋಗಿಗಳ ನಿಕ್ಷಯ ಮಿತ್ರ ಕಾರ್ಯಕ್ರಮದಲ್ಲಿಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿಪಾಲ್ಗೊಂಡ ಜನತೆ

****

ಕೊಡೇಕಲ್ ನಲ್ಲಿ ಕ್ಷಯ ರೋಗಿಗಳಿಗೆ ನಿಕ್ಷಯ ಮಿತ್ರಯೋಜನೆಯಡಿ ಪೌಷ್ಟಿಕ ಆಹಾರ ವಿತರಣೆ (ಕಿಕ್ಕರ್ )

ಕ್ಷಯರೋಗಿಗಳಿಗೆ ಬೇಕು ಭರವಸೆ ಬೆಳಕು

ವಿಕಸುದ್ದಿಲೋಕ ಕೊಡೇಕಲ್

ಕ್ಷಯರೋಗ ಕೇವಲ ಒಂದು ದೈಹಿಕ ಕಾಯಿಲೆಯಲ್ಲ.ಅದು ರೋಗಿಯ ಮಾನಸಿಕ ಸ್ಥೈರ್ಯವನ್ನು ಪರೀಕ್ಷಿಸುವ ಕಾಲ. ಇಂತಹ ಸಮಯದಲ್ಲಿರೋಗಿಗಳಿಗೆ ಸಮಾಜದಿಂದ ಬೇಕಾಗಿದ್ದು ಮರುಕದ ನೋಟವಲ್ಲ. ಬದಲಾಗಿ ಅವರಲ್ಲಿಬದುಕುವ ಭರವಸೆ ಮೂಡಿಸುವ ಬೆಂಬಲ ಬೇಕು ಎಂದು ಜಿಪಂ ಸಿಇಒ ಲವೀಶ್ ಒರಡಿಯಾ ಹೇಳಿದರು.

ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೊಡೇಕಲ್ , ರಾಜನಕೋಳೂರ ಗ್ರಾಮಗಳ ಸಮುದಾಯ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿನಡೆದ ‘‘ನಿಕ್ಷಯ ಮಿತ್ರ ’’ ಕಾರ್ಯಕ್ರಮದಲ್ಲಿಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಿಸಿ ಮಾತನಾಡಿದರು. ಕ್ಷಯ ರೋಗ ವಾಸಿಯಾಗುವಂತಹ ರೋಗ.ಆದರೆ, ರೋಗದ ಆರಂಭಿಕ ಹಂತದಲ್ಲಿಯೇ ಸೂಕ್ತವಾದ ಚಿಕಿತ್ಸೆಯ ಅವಶ್ಯಕತೆಯಿದೆ. ಕ್ಷಯ ರೋಗವು ಕೇವಲ ಕೆಲ ಮಾತ್ರೆಗಳಿಂದ ಗುಣಮುಖವಾಗಲ್ಲ. ಬದಲಿಗೆ ರೋಗಿಗಳಿಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಎಂದರು.

ಡಿಎಚ್ ಒ ಡಾ.ಮಹೇಶ ಬಿರಾದಾರ,ಕ್ಷಯ ರೋಗ ತಜ್ಞ ಡಾ.ಸಂಜಯ್ ರಾಯಚೂರಕರ್ ಮಾತನಾಡಿ, ಕ್ಷಯ ರೋಗಿಗಳು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆಯಿಲ್ಲ. ಇದು ಗುಣಪಡಿಸಬಹುದಾದ ಕಾಯಿಲೆ. ಆದರೆ, ರೋಗಿಗಳಿಗೆ ಅನುಕಂಪ ತೋರುವ ಬದಲು ರೋಗಿಗಳಿಗೆ ಪೌಷ್ಟಿಕ ಆಹಾರ ದೊರಕುತ್ತಿದೆಯೋ ? ಅವರು ಸರಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ಗಮನಹರಿಸುವುದು ನಿಜವಾದ ಮಾನವೀಯತೆ ಎಂದು ಹೇಳಿದರು.

ಇದೇ ವೇಳೆ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಯಿತು. ರಾಜಾ ಕುಶಾಲನಾಯಕ ಜಹಾಗೀರದಾರ, ಟಿಎಚ್ ಒ ಡಾ.ಆರ್ .ವಿ.ನಾಯಕ, ತಾಪಂ ಇಒ ಬಸಣ್ಣ ನಾಯಕ, ವೀರಸಂಗಪ್ಪ ಹಾವೇರಿ, ಮೋಹನ ಪಾಟೀಲ್ ,ಡಾ.ಸಂಜಯ್ ಚಂದಾ, ಡಾ. ಬಸವರಾಜ ಚಂದಾ,ಡಾ. ಮಂಜುನಾಥ ಚಂದಾ, ಡಾ.ಮೋಹನ ಕೋರಿ,ಡಾ.ಸೀಮಾ ಕೋರಿ, ಡಾ.ವೀಣಾ ಪಾಟೀಲ್ , ಡಾ.ಸಂಗೀತಾ ಹಾವೇರಿ,ಡಾ.ಮೇಘಾ ಪಾಟೀಲ್ ಸೇರಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಗಳು,ಆಶಾ ಕಾರ್ಯಕರ್ತೆಯರು ಸೇರಿ ಅನೇಕರಿದ್ದರು. ಗುರುನಾಥ ಹುಲಕಲ್ ನಿರೂಪಿಸಿದರು. ಚನ್ನಬಸಪ್ಪ ನಾಲತವಾಡ ಸ್ವಾಗತಿಸಿದರು. ರವಿ ಆಶ್ಯಾಳ ವಂದಿಸಿದರು.

***ಕೋಟ್ ...

ರಾಜನಕೋಳೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿಬ್ಲಡ್ ಬ್ಯಾಂಕ್ ಸ್ಥಾಪನೆಗೆ ಅನುಮೋದನೆ ದೊರತಿದೆ.ಶೀಘ್ರವೇ ಬ್ಲಡ್ ಬ್ಯಾಂಕ್ ಆರಂಭವಾಗಲಿದೆ. ಇದು ಗರ್ಭಿಣಿಯರಿಗೆ ಸಹಕಾರಿಯಾಗಲಿದೆ. ಉದರ ದರ್ಶಕ ಶಶ್ರತ್ರ್ತ ಚಿಕಿತ್ಸೆ ಕೂಡಾ ಆರಂಭಿಸಲಾಗುತ್ತಿದೆ. ಕೊಡೇಕಲ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿದಂತ ಚಿಕಿತ್ಸೆಗೆ ಯಂತ್ರ, ಕ್ಷಯ ರೋಗ ತಪಾಸಣೆ ಯಂತ್ರ ನೀಡಲಾಗಿದೆ.

- ಲವೀಶ್ ಒರಡಿಯಾ, ಜಿಪಂ ಸಿಇಒ,ಯಾದಗಿರಿ.