ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲ| ಜಿಲ್ಲಾಧಿಕಾರಿ ಲತಾಕುಮಾರಿ ಅಭಯ
ವಿಕ ಸುದ್ದಿಲೋಕ ಹಾಸನ
ಜಿಲ್ಲೆಯಲ್ಲಿಗೃಹಬಳಕೆ ಎಲ್ ಪಿಜಿ ಸಿಲಿಂಡರ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿಲಭ್ಯ ಇರುವುದರಿಂದ ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲಎಂದು ಜಿಲ್ಲಾಧಿಕಾರಿ ಕೆ.ಎಸ್ .ಲತಾಕುಮಾರಿ ತಿಳಿಸಿದ್ದಾರೆ.
ಗೃಹಬಳಕೆ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಗ್ರಾಹಕರು ಆತಂಕದಲ್ಲಿಬುಕಿಂಗ್ ಮಾಡದಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದು, ಇ-ಕೆವೈಸಿ ಮಾಡಿರುವ ಗ್ರಾಹಕರು ತಮ್ಮ ರಿಜಿಸ್ಟ್ರಾರ್ ಮೊಬೈಲ್ ನಂಬರ್ ಮೂಲಕ ಅನಿಲ್ ಸಿಲಿಂಡರ್ ಬುಕಿಂಗ್ ಅನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ವಾಟ್ಸ್ ಆ್ಯಪ್ ನಂಬರ್ 7588888824, ಮಿಸ್ ಕಾಲ್ ನಂ: 8454955555 ಎಸ್ ಎಂಎಸ್ , ಐವಿಆರ್ ಎಸ್ ಬುಕಿಂಗ್ ನಂ.7710955555 ಅದೇ ರೀತಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.7710955555, ಎನಿ ಟೈಂ ನಂ: 8888823456 ಮೂಲಕ ಮೇಲಿನ ನಂಬರ್ ಗಳಿಗೆ ಬುಕಿಂಗ್ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರು ಒಮ್ಮೆ ಬುಕಿಂಗ್ ಮಾಡಿದ ನಂತರ 25 ದಿನಗಳ ನಂತರ ಬುಕಿಂಗ್ ಮಾಡಲು ಅವಕಾಶವಿದೆ. ಗ್ರಾಹಕರು ಗೂಗಲ್ ಪೇ ಮೂಲಕವೂ ಎಚ್ ಪಿಸಿಎಲ್ , ಬಿಪಿಸಿಎಲ್ , ಐಒಸಿಎಲ್ ಆ್ಯಪ್ ಗಳ ಮೂಲಕವೂ ಬುಕಿಂಗ್ ಮಾಡಲು ಅವಕಾಶವಿದೆ. ಬುಕಿಂಗ್ ಮಾಡಿರುವ ಅನಿಲ ಗ್ರಾಹಕರಿಗೆ ಓಟಿಪಿ ಮುಖಾಂತರ ಸಿಲಿಂಡರ್ ಸರಬರಾಜು ವ್ಯವಸ್ಥೆ ಇದ್ದು, ತಮ್ಮ ಮೊಬೈಲ್ ನಂ.ಗೆ ಬಂದಿರುವ ಒಟಿಪಿ ಅನ್ನು ಡಿಲೆವರಿ ಮಾಡುವವರಿಗೆ ತಿಳಿಸಿ ಸಿಲಿಂಡರ್ ಪಡೆಯಬಹುದು ಎಂದು ತಿಳಿಸಿದ್ದಾರೆ.
‘‘ಗ್ರಾಹಕರಿಗೆ ಗೃಹ ಬಳಕೆ ಸಿಲಿಂಡರ್ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿಹತ್ತಿರದ ಗ್ಯಾಸ್ ಏಜೆನ್ಸಿ, ತಾಲೂಕಿನ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆ ಹಾಗೂ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ, ಆಹಾರ ನಗರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.ಅನಧಿಕೃತ ಗ್ಯಾಸ್ ಸಿಲಿಂಡರ್ ಅಕ್ರಮ ದಾಸ್ತಾನು, ಸಾಗಣೆ, ರಿಫಿಲ್ಲಿಂಗ್ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,’’ ಎಂದು ಡಿಸಿ ಲತಾಕುಮಾರಿ ಎಚ್ಚರಿಸಿದ್ದಾರೆ.
ಬಾಕ್ಸ್
ಹೆಚ್ಚಿನ ಮಾಹಿತಿಗಾಗಿ
ಆಹಾರ ನಗರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾಜಂಟಿ ನಿರ್ದೇಶಕ ಕಚೇರಿ 08172-268229( ಬೆ.10 ರಿಂದ ಸಂಜೆ 5.30 ರವರೆಗೆ)
ಆಲೂರು ಆಹಾರ ನಿರೀಕ್ಷಕರು-9845012272, ಅರಕಲಗೂಡು ಆಹಾರ ಶಿರಸ್ತೇದಾರರು-8970353599, ಆಹಾರ ನಿರೀಕ್ಷಕರು-9880292823, ಅರಸೀಕೆರೆ: ಆಹಾರ ನಿರೀಕ್ಷಕರು-9380328907 ಮತ್ತು 9844771286, ಬೇಲೂರು: ಆಹಾರ ನಿರೀಕ್ಷಕರು-8861665723,9483822244, ಚನ್ನರಾಯಪಟ್ಟಣ: ಆಹಾರ ಶಿರಸ್ತೇದಾರ್ -9964244343, ಆಹಾರ ನಿರೀಕ್ಷಕರು-6364309328, ಹಾಸನ: ಆಹಾರ ನಿರೀಕ್ಷಕರು-9740290428,9845872348, ಹಾಸನ ನಗರ ಆಹಾರ ನಿರೀಕ್ಷಕರು-9886168827, ಹೊಳೆನರಸೀಪುರ: ಆಹಾರ ಶಿರಸ್ತೇದಾರರು-9008920075, ಆಹಾರ ನಿರೀಕ್ಷಕರು-9902737134 ಮತ್ತು ಸಕಲೇಶಪುರ: ಆಹಾರ ಶಿರಸ್ತೇದಾರರು-9902382986, ಆಹಾರ ನಿರೀಕ್ಷಕರು- 9481258935 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

