ಬೈಂದೂರು: ಹೆತ್ತ ತಾಯಿ, ಬೋಧಿಸಿದ ಗುರುಗಳು, ಕಲಿತ ಶಾಲೆ, ಹುಟ್ಟೂರ ಋುಣ ಪೂಧಿರೈಸುವುದು ಮಾನವ ಧರ್ಮವಾಗಿದೆ. ಸಂಪಾದನೆಯ ಒಂದಿಷ್ಟು ಭಾಗ ಉತ್ತಮ ಅವಕಾಶಗಳಿಗೆ ಬಳಸಿದಾಗ ನಮ್ಮ ಋುಣ ಸಂದಾಯವಾಗುವುದು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯಿಂದ ಉತ್ತಮ ಕಾರ್ಯ ಮಾಡಿದರೆ ದೇವರಿಗೂ ಪ್ರೀಯವಾಗಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಶ್ರೀ ಮೂಕಾಂಬಿಕಾ ದೇವಸ್ಥಾನದ ಓಲಗ ಮಂಟಪವನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿಸೇವಾ ರೂಪವಾಗಿ ನೂತನ ಶಿಲಾಮಯವನ್ನಾಗಿ ನವೀಕರಿಸಿ ನಿರ್ಮಿಸಿಕೊಟ್ಟ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಹಾಲಿಂಗ ನಾಯ್ಕ ಮತ್ತು ಮಲ್ಲಿಕಾ ಎಂ. ನಾಯ್ಕ ದಂಪತಿಗಳ ಪೌರಸನ್ಮಾನ ಸಮಾರಂಭದಲ್ಲಿಮಾತನಾಡಿದರು.
ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಓಲಗ ಮಂಟಪವನ್ನು ಮೂಲಾಕೃತಿಗೆ ಚ್ಯುತಿಬಾರದಂತೆ ಶಿಲಾಮಯವನ್ನಾಗಿ ಪರಿವರ್ತಿಸಿ, ಅತ್ಯಂತ ವಿನೂತನ ಮಾದರಿಯಲ್ಲಿನಿರ್ಮಿಸಿಕೊಟ್ಟಿದ್ದು ಕ್ಷೇತ್ರದ ಇತಿಹಾಸದಲ್ಲಿಪ್ರಥಮವಾಗಿದೆ. ಅಲ್ಲದೇ ಶೀಘ್ರದಲ್ಲಿಕ್ಷೇತ್ರವು ಪ್ರಾಧೀಕಾರವಾಗಲಿದೆ ಎಂದರು.
ಮಾಹಾಲಿಂಗ ನಾಯ್ಕ ಮತ್ತು ಮಲ್ಲಿಕಾ ಎಂ. ನಾಯ್ಕ ದಂಪತಿಗಳಿಗೆ ಕೊಲ್ಲೂರು, ದಳಿ, ಸಲಗೇರಿ, ಹಳ್ಳಿಬೇರು ಗ್ರಾಮಸ್ಥರು, ಆಟೋ ಚಾಲಕ-ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ, ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ, ಸುಧಾ ಕೆ., ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಮಧಿತ್ತಿಧಿತಧಿರಧಿರು ಇದ್ದರು. ಚಂದ್ರ ಬಳೆಗಾರ್ ಸ್ವಾಗತಿಸಿದಧಿರು. ಸಂದೀಪ್ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಚಲನಚಿತ್ರ, ನಾಟಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ರಚನೆಯ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಂಡಿತು.
ಫೋಟೋಫೈಲ್ : 17ಆರ್ ಕೊಲ್ಲುರು - ಶ್ರೀ ಮೂಕಾಂಬಿಕಾ ದೇವಸ್ಥಾನದ ಓಲಗ ಮಂಟಪವನ್ನು ನಿರ್ಮಿಸಿಕೊಟ್ಟ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಹಾಲಿಂಗ ನಾಯ್ಕ ಮತ್ತು ಮಲ್ಲಿಕಾ ಎಂ. ನಾಯ್ಕ ದಂಪತಿಗಳನ್ನು ಸನ್ಮಾನಿಸಲಾಯಿತು.

