ಆತ್ಮಸ್ಥೆ ೖರ್ಯದಿಂದ ಪರೀಕ್ಷೆ ಎದುರಿಸಿ

Contributed byckganappanavar@gmail.com|Vijaya Karnataka

ಮುಂಡರಗಿ ತಾಲೂಕಿನ ಎಸ್‌ಎಂ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಸದ ತೇಜಸ್ವಿ ಸೂರ್ಯ ಅಭಿಮಾನಿ ಬಳಗದಿಂದ ಉಚಿತ ಪೆನ್‌ ಹಾಗೂ ಕ್ಲಿಪ್‌ ಬೋರ್ಡ್‌ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪವನ ಮೇಟಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

face the exams with self confidence to achieve excellent results in sslc

ಆತ್ಮಸ್ಥೆ ೖರ್ಯದಿಂದ ಪರೀಕ್ಷೆ ಎದುರಿಸಿ

ವಿಕ ಸುದ್ದಿಲೋಕ ಮುಂಡರಗಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿವಿದ್ಯಾರ್ಥಿಗಳು ಆತಂಕಕ್ಕೊಳಗಾಗದೆ ಆತ್ಮಸ್ಥೆ ೖರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆಯುವುದರ ಮೂಲಕ ಶಾಲೆ, ಗ್ರಾಮಕ್ಕೆ ಹೆಸರು ತರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಪವನ ಮೇಟಿ ಹೇಳಿದರು.

ತಾಲೂಕಿನ ಎಸ್ ಎಂ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತ ಪೆನ್ , ಕ್ಲಿಪ್ ಬೋರ್ಡ್ ವಿತರಿಸಿ ಮಾತನಾಡಿದರು.

ಬಿಜೆಪಿ ಮುಖಂಡ ರವಿ ಕರಿಗಾರ, ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ, ಎಸ್ ಡಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಹಂದ್ರಾಳ, ಹಾಲೇಶ ಕವಲೂರ, ತಿಪ್ಪಣ್ಣ ಕೊರ್ಲಹಳ್ಳಿ, ರಮೇಶ ಕರಿಗಾರ, ಮಂಜುನಾಥ ಕೊರ್ಲಹಳ್ಳಿ, ಪ್ರಗು ಯುವರಾಜ ಮುಂಡರಗಿ, ಸಹಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪೋಟೊ: 17 ಎಂಡಿಆರ್ 1:

ಮುಂಡರಗಿ ತಾಲೂಕು ಮೇವುಂಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಸಂಸದ ತೇಜಸ್ವಿ ಸೂರ್ಯ ಅಭಿಮಾನಿ ಬಳಗದಿಂದ ಉಚಿತ ಪೆನ್ ಹಾಗೂ ಕ್ಲಿಪ್ ಬೋರ್ಡ್ ಗಳನ್ನು ವಿತರಿಸಲಾಯಿತು.