ಭಾರತದ ನೌಕಾಪಡೆಯ ಜಲಾಂತರ್ಗಾಮಿ ಪಡೆಯ ಸಾಮರ್ಥ್ಯ ವೃದ್ಧಿಗೆ ಸಹಕಾರಿ
ಕಾರವಾರದಲ್ಲಿನ್ಯೂಮ್ಯಾಟಿಕ್ ರ್ಯಾಮ್ ಪರೀಕ್ಷಾ ಸೌಲಭ್ಯ
ವಿಕ ಸುದ್ದಿಲೋಕ ಕಾರವಾರ
ಕದಂಬ ನೌಕಾನೆಲೆಯ ಯುದ್ಧ ನೌಕಾ ರಿಪೇರಿ ಪ್ರಾಂಗಣದಲ್ಲಿಅಳವಡಿಸಿದ್ದ ಕಲ್ವರಿ ಕ್ಲಾಸ್ ನ ಜಲಾಂತರ್ಗಾಮಿಗಳ (ಸಬ್ ಮರಿನ್ ) ನ್ಯುಮ್ಯಾಟಿಕ್ ರ್ಯಾಮ್ ವ್ಯವಸ್ಥೆಗಳ ಪರೀಕ್ಷೆ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು ನೌಕಾಪಡೆಯ ಸಾಮಗ್ರಿ ವಿಭಾಗದ ಮುಖ್ಯಸ್ಥ ವೈಸ್ ಅಡ್ಮಿರಲ್ ಬಿ.ಶಿವಕುಮಾರ್ ಶುಕ್ರವಾರ ಉದ್ಘಾಟಿಸಿದರು.
ಫ್ರಾನ್ಸ್ , ಬ್ರೆಜಿಲ್ ನಂತರ ಭಾರತ ನ್ಯುಮ್ಯಾಟಿಕ್ ರ್ಯಾಮ್ ನಿರ್ವಹಣೆ ವ್ಯವಸ್ಥೆ ಇರುವ ದೇಶ ಎನಿಸಿದೆ.
ಭಾರತವು ಕಲ್ವರಿ ಕ್ಲಾಸ್ ನ ಜಲಾಂತರ್ಗಾಮಿಗಳ ನ್ಯುಮ್ಯಾಟಿಕ್ ರ್ಯಾಮ್ ಗಳನ್ನು ಪರೀಕ್ಷೆ ಹಾಗೂ ನಿರ್ವಹಣೆಗೆ ಫ್ರಾನ್ಸ್ ದೇಶವನ್ನು ಅವಲಂಬಿಸಿತ್ತು. ಈಗ ಕಾರವಾರದಲ್ಲಿಯೇ ಆ ವ್ಯವಸ್ಥೆ ಸಿದ್ಧಪಡಿಸಿಕೊಂಡಿದೆ. ಎಸ್ ಇಸಿ ಇಂಡಸ್ಟ್ರೀಸ್ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ನೌಕಾನೆಲೆ ತಿಳಿಸಿದೆ.
‘‘ಜಲಾಂತರ್ಗಾಮಿಗಳಲ್ಲಿನ್ಯೂಮ್ಯಾಟಿಕ್ ರ್ಯಾಮ್ ಎನ್ನುವುದು ಗಾಳಿಯ ಒತ್ತಡವನ್ನು ಬಳಸಿ ಯಾಂತ್ರಿಕ ಭಾಗಗಳನ್ನು ಚಲಿಸುವಂತೆ ಮಾಡುವ ಸಾಧನವಾಗಿದೆ. ಒಂದು ಸಿಲಿಂಡರ್ ಒಳಗಿನ ಪಿಸ್ಟನ್ ಅನ್ನು ತಳ್ಳುತ್ತದೆ. ಇದರಿಂದ ವಾಲ್ ್ವಗಳನ್ನು ತೆರೆಯುವುದು-ಮುಚ್ಚುವುದು, ಹ್ಯಾಚ್ ಗಳನ್ನು ಕಾರ್ಯಗೊಳಿಸುವುದು ಮತ್ತು ಟಾರ್ಪಿಡೊಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಸಬ್ ಮರೀನ್ ವ್ಯವಸ್ಥೆ ವೇಗವಾಗಿ ಮತ್ತು ಬಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಆತ್ಮನಿರ್ಭರವಾಗುವತ್ತ ಭಾರತ ನೌಕಾಸೇನೆ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಅದರ ಭಾಗವಾಗಿ ಭಾರತದಲ್ಲಿನ್ಯೂಮ್ಯಾಟಿಕ್ ರ್ಯಾಮ್ ಪರೀಕ್ಷಾ ಸೌಲಭ್ಯ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ನೌಕಾಪಡೆಯ ಜಲಾಂತರ್ಗಾಮಿ ಪಡೆಯ ಸಾಮರ್ಥ್ಯ ಹೆಚ್ಚಲಿದೆ. ದೇಶೀಯ ಕೈಗಾರಿಕಾ ವ್ಯವಸ್ಥೆಗೂ ಬಲ ಸಿಕ್ಕಿದಂತಾಗಿದೆ’’ ಎಂದು ವೈಸ್ ಅಡ್ಮಿರಲ್ ಶಿವಕುಮಾರ್ ಉದ್ಘಾಟನೆ ಬಳಿಕ ಹೇಳಿದರು.
ಫೋಟೊ
17ಪ್ರಮೋದ5
ಕಾರವಾರದಲ್ಲಿನ್ಯೂಮ್ಯಾಟಿಕ್ ರ್ಯಾಮ್ ಪರೀಕ್ಷಾ ಸೌಲಭ್ಯವನ್ನು ವೈಸ್ ಅಡ್ಮಿರಲ್ ಬಿ.ಶಿವಕುಮಾರ್ ಉದ್ಘಾಟಿಸಿದರು.

