ಗಾಂಜಾ ಪ್ರಕರಣಗಳಲ್ಲಿಶಿಕ್ಷೆ ಅಗತ್ಯ

Contributed bygururaja.jd@gmail.com|Vijaya Karnataka

District Minister Madhu Bangarappa stressed the need for strict punishment in ganja cases. He expressed concern over the rise of ganja in Shivamogga and urged swift action against offenders. The minister also discussed budget allocations for education and plans for food processing units. He assured support for the family of Sanketh and highlighted safety measures for students and public transport.

stricter punishment for cannabis cases shivamogga minister madhu bangarappa calls for crackdown

ಗಾಂಜಾ ಪ್ರಕರಣಗಳಲ್ಲಿಶಿಕ್ಷೆ ಅಗತ್ಯ

ವಿಕ ಸುದ್ದಿಲೋಕ ಶಿವಮೊಗ್ಗ

ಗಾಂಜಾ ಪ್ರಕರಣಗಳಲ್ಲಿಕೇವಲ ಕೇಸು ದಾಖಲಿಸಿದರೆ ಸಾಲದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿಗಾಂಜಾ ಹೆಚ್ಚುತ್ತಿರುವುದು ಕಳವಳಕಾರಿ. ಈ ವಿಷಯದಲ್ಲಿರಾಜಕೀಯ ಮಾಡುವುದು ಸರಿಯಲ್ಲ. ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿಶಾಂತಿ ಕಾಪಾಡಲು ಎಲ್ಲಪಕ್ಷದವರು ಸಹಕಾರ ನೀಡುತ್ತಿದ್ದಾರೆ ಎಂದರು.

ಮಾದಕ ವಸ್ತುಗಳ ಸರಬರಾಜು, ಸಾಗಣೆ ಮತ್ತು ಬಳಕೆ ನಿಯಂತ್ರಣಕ್ಕೆ ತರಬೇಕು. ಇಂತಹ ಅಕ್ರಮಗಳಲ್ಲಿತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾರಕ್ಷಣಾಧಿಕಾರಿಯವರಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿಹೆಚ್ಚಿನ ಗಾಂಜಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಅವರನ್ನು ಕಠಿಣ ಶಿಕ್ಷೆಗೆ, ದಂಡನೆಗೆ ಗುರಿಪಡಿಸಬೇಕು ಎಂದರು.

ಜಿಲ್ಲೆಹಾಗೂ ಶಿಕ್ಷಣ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ. ಕಳೆದ ಬಾರಿ ಜಿಲ್ಲೆಗೆ ಘೋಷಣೆಯಾಗಿದ್ದ ಆಹಾರ ಸಂಸ್ಕರಣಾ ಘಟಕವು ಜಾಗದ ಒತ್ತುವರಿ ಸಮಸ್ಯೆಯಿಂದ ವಿಳಂಬವಾಗಿದೆ. ಅದನ್ನು ಶೀಘ್ರ ಸರಿಪಡಿಸಲಾಗುವುದು ಎಂದು ತಿಳಿಸಿದರು.

1995ರ ನಂತರ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸುವ ವಿಷಯವನ್ನು ಪ್ರಸಕ್ತ ಬಜೆಟ್ ನಲ್ಲಿಸೇರಿಸುವ ಕುರಿತು ಮುಖ್ಯಮಂತ್ರಿಯವರ ಜತೆ ಸಮಾಲೋಚನೆ ನಡೆಸಲಾಗಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೇಗ ಹೆಚ್ಚಿಸಲು ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ನೂತನ ಶಿಕ್ಷಕರ ಸೇವೆ ಬಳಸಿಕೊಳ್ಳುವ ಆಶಯವಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆಗಳ ಉದ್ಘಾಟನೆಯ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿಬಜೆಟ್ ನಂತರ ಆಯೋಜಿಸಲಾಗುವುದು. ಇದೇ ಸಮಯದಲ್ಲಿಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಿದೆ ಎಂದರು.

=====

ಶೀಘ್ರ ಸಂಕೇತ್ ಕುಟುಂಬದ ಭೇಟಿ

ಒಂದು ಜೀವದ ಸಾವಿಗೆ ಪರಿಹಾರವನ್ನೆ ಮಾನದಂಡವಾಗಿ ನೋಡಲಾಗದು. ಅದೊಂದೇ ಅಂತಿಮವಲ್ಲ. ಮೃತ ಸಂಕೇತ್ ತಾಯಿ ನನ್ನ ಬಳಿ ತಮ್ಮ ಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೆನಮ್ಮ ಪಕ್ಷದ ಮುಖಂಡರ ಜತೆಗೆ ಅವರ ಮನೆಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಕಾರಿ ಪ್ರೌಢಶಾಲೆಗಳಲ್ಲಿಪ್ರತಿದಿನ ಸಂಜೆ ವಿಶೇಷ ತರಗತಿ ನಡೆಸಲಾಗುತ್ತಿದೆ. ತರಗತಿಯ ನಂತರ ಮಕ್ಕಳು ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಬಗ್ಗೆ ಪೋಷಕರೆ ಗಮನಹರಿಸಬೇಕು. ರಾಜ್ಯದಲ್ಲಿದ್ವಿತೀಯ ಪಿಯುಸಿ ಪರೀಕ್ಷೆಗಳು ಯಾವುದೆ ಗೊಂದಲವಿಲ್ಲದೆ ನಡೆಯುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿಶ್ರಮಿಸುತ್ತಿದ್ದಾರೆ ಎಂದರು.

===

ಜಿಲ್ಲೆಯಲ್ಲಿಶಿಕ್ಷಕರೊಬ್ಬರ ಮೇಲೆ ಫೋಕ್ಸೊ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಖಾಸಗಿ ವಾಹನಗಳ ಸುರಕ್ಷತಾ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

- ಮಧು ಬಂಗಾರಪ್ಪ, ಜಿಲ್ಲಾಉಸ್ತುವಾರಿ ಸಚಿವ

ಪೋಟೊ: ಮಧು ಬಂಗಾರಪ್ಪ: 01ಎಸ್ ಎಂಜಿ18