ಇಸ್ರೇಲ್ , ಇರಾನ್ ನಡುವೆ ಯುದ್ಧ: ಕನ್ನಡಿಗರ ಸುರಕ್ಷತೆಗೆ ಕ್ರಮ

Contributed bynagappa.narayanappa@timesgroup.com|Vijaya Karnataka

Karnataka Chief Minister Siddaramaiah has ordered measures for the safety of Kannadigas in the Middle East. This includes those in Israel, Iran, UAE, and Qatar. Flights are suspended, and those unable to return home should seek safe locations. A helpline is being established. Officials are working to ensure the protection of every Kannadiga.

israel iran war siddaramaiah orders immediate measures and helpline to protect kannadigas in the middle east

ವಿಕ ಸುದ್ದಿಲೋಕ ಬೆಂಗಳೂರು

ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್ , ಯುಎಇ, ಇರಾನ್ , ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನೆಲೆಸಿರುವ ಕನ್ನಡಿಗರ ಸುರಕ್ಷತೆಗೆ ಎಲ್ಲರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೊಸದಿಲ್ಲಿಯ ನಿವಾಸಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್ ’ನಲ್ಲಿಪೋಸ್ಟ್ ಮಾಡಿರುವ ಅವರು,‘‘ಮಧ್ಯಪ್ರಾಚ್ಯ ದೇಶಗಳಲ್ಲಿವಿಮಾನ ಸಂಚಾರ ಸ್ಥಗಿತಗೊಂಡಿಧಿದೆ. ಇಧಿದಧಿರಿಂದ ನಾಡಿಗೆ ಮರಳಲು ಸಾಧ್ಯವಾಗದಧಿವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು,’’ ಎಂದು ಮನವಿ ಮಾಡಿಕೊಂಡಿದ್ದಾರೆ.

‘‘ತಕ್ಷಣವೇ ಸಹಾಯವಾಣಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯುದ್ಧಪೀಡಿತ ದೇಶಗಳಲ್ಲಿನೆಲೆಸಿರುವ ಕುಟುಂಬದ ಸಂಪರ್ಕಕ್ಕೆ ಸಿಗದಿದ್ದಲ್ಲಿಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬ ಕನ್ನಡಿಗನ ರಧಿಕ್ಷಧಿಣೆಗೆ ಕಾರ್ಯಪ್ರವೃತ್ತರಾಗಿದ್ದೇವೆ,’’ ಎಂದು ತಿಳಿಸಿದ್ದಾರೆ.

‘‘ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿಸಿಲುಕಿರುವ ಬಗ್ಗೆ ಮಾಜಿ ಸಚಿವ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ,’’ ಎಂದು ಹೇಳಿದ್ದಾರೆ.