ಕಾಲುಗಳಿಗೆ ಸ್ಪಾ ಆರೈಕೆ
-ಹೊರಗಡೆ ಸುತ್ತಾಡಿ ಮನೆಗೆ ಬಂದ ಮೇಲೆ ಕಾಲುಗಳನ್ನು ಹರ್ಬಲ್ ಅಥವಾ ಸೌಮ್ಯವಾಗಿರುವ ಸೋಪ್ ನಲ್ಲಿಚೆನ್ನಾಗಿ ತೊಳೆಯಿರಿ. ಬಳಿಕ ಮಾಯಿಶ್ಚರೈಸರ್ ಲೋಷನ್ ಲೇಪಿಸಿ.
-ಕಾಲುಗಳ ಚರ್ಮ ಮುಖ್ಯವಾಗಿ ಮಂಡಿ, ಪಾದಗಳ ಚರ್ಮ ಬೇಗನೆ ಒಣಗುತ್ತದೆ. ಇದನ್ನು ತಪ್ಪಿಸಲು ಎರಡು ದಿನಕ್ಕೊಮ್ಮೆ ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚಿ.
-ಕಾಲುಗಳಿಗೆ ವಾರದಲ್ಲಿಮೂರು ದಿನ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಕಾಲಿನ ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ.
-ಫೂಟ್ ಬಾತ್ ಕಾಲುಗಳ ಆರೋಗ್ಯಕ್ಕೆ ಉತ್ತಮ. ಒಂದು ಬಕೆಟ್ ನಲ್ಲಿಉಗುರು ಬೆಚ್ಚಗಿನ ನೀರು ತುಂಬಿಸಿ ಅದಕ್ಕೆ ಸ್ವಲ್ಪ ಶಾಂಪೂ ಮತ್ತು ಮೂರು ಹನಿ ಕೊಬ್ಬರಿ ಎಣ್ಣೆ ಹಾಕಿ. ಈ ನೀರಲ್ಲಿಕಾಲುಗಳನ್ನು ಕನಿಷ್ಠ 30 ನಿಮಿಷದವರೆಗೆ ಇಳಿಬಿಡಿ. ಬಳಿಕ ಸ್ಕ್ರಬರ್ ಅಥವಾ ಫ್ಯೂಮಿಸ್ ಕಲ್ಲಿನಿಂದ ಕಾಲನ್ನು ನಯವಾಗಿ ಉಜ್ಜಿದರೆ ಕಾಲಿಗೆ ಹೊಳಪು ಮೂಡುತ್ತದೆ. ಇದನ್ನು ತಿಂಗಳಿಗೊಮ್ಮೆ ಮಾಡಿದರೆ ಸಾಕು.
-ಆಗಾಗ ಪೆಡಿಕ್ಯೂರ್ ಮಾಡಿಸಿ ಪಾದಗಳನ್ನು ಸ್ವಚ್ಛಗೊಳಿಸಿ. ಕಾಲುಗಳ ಆರೋಗ್ಯಕ್ಕೆ ಸೂಕ್ತ ವ್ಯಾಯಾಮವೂ ಮುಖ್ಯ. ಬೊಜ್ಜಿನಿಂದ ಕೂಡಿರುವ ದಪ್ಪ ಕಾಲುಗಳು ಚೆನ್ನಾಗಿ ಕಾಣಲ್ಲ. ಹಾಗಂತ ಕಡ್ಡಿಯಂತೆ ಕೃಶವಾಗಿರುವ ಕಾಲುಗಳೂ ಬೇಡ.
-ಸದೃಢ ಕಾಲುಗಳನ್ನು ಹೊಂದಲು ನಿಯಮಿತವಾಗಿ ವಾಕಿಂಗ್ , ಸ್ವಿಮ್ಮಿಂಗ್ , ಸೈಕ್ಲಿಂಗ್ ಅಥವಾ 30 ನಿಮಿಷ ಮಹಡಿ ಮೆಟ್ಟಲುಗಳನ್ನು ಹತ್ತಿ ಇಳಿಯುವುದು ಮಾಡಿ.
-ಪ್ರತಿದಿನ 15 ನಿಮಿಷಗಳ ಕಾಲ ಕಾಲುಗಳನ್ನು ಸ್ವಲ್ಪ ಎತ್ತರಕ್ಕಿರುವ ದಿಂಬಿನ ಮೇಲೆ ಇಟ್ಟು ಅಂಗಾಂತ ಮಲಗಿದರೆ ದಣಿದ ಕಾಲುಗಳಿಗೆ ರಿಲ್ಯಾಕ್ಸ್ ಸಿಗುತ್ತದೆ. ಕಾಲುಗಳು ಆರೋಗ್ಯವಾಗಿರಬೇಕಿದ್ದರೆ ನೀವು ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ಭಂಗಿಯೂ ಸರಿಯಾಗಿರಬೇಕು.

